ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟ ಮುಂದುವರೆದಿದ್ದು, ಎರಡನೇ ಅಲೆ ಅಬ್ಬರದ ನಡುವೆ ಕೂಡ ಇಲ್ಲಿಯವರೆಗೆ 5 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಇಲ್ಲಿಯವರೆಗೆ 5,00,75,162 ಜನರಿಗೆ ಕೊರೊನಾ ವ್ಯಾಕ್ಸಿನ್ ನೀಡಲಾಗಿದ್ದು, ಇದರಲ್ಲಿ 79,03,068 ಆರೋಗ್ಯ ಸಿಬ್ಬಂದಿ(ಮೊದಲ ಹಂತ), 50,09,252 ಆರೋಗ್ಯ ಸಿಬ್ಬಂದಿ( ಎರಡನೇ ಹಂತ),83,33,713 ಮುಂಚೂಣಿ ಕಾರ್ಯಕರ್ತರು( ಮೊದಲ ಹಂತ), 30,60,060 ಎರಡನೇ ಹಂತದಲ್ಲಿ ಲಸಿಕೆ ನೀಡಲಾಗಿದೆ.
ಇದನ್ನೂ ಓದಿ: ಕಾಲ್ ಸೆಂಟರ್ ಮೂಲಕ 15 ಕೋಟಿ ರೂ. ವಂಚನೆ: 37 ಆರೋಪಿಗಳ ಬಂಧನ
60 ವರ್ಷ ಮೇಲ್ಪಟ್ಟ 2,12,03,700 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ಜತೆಗೆ 45 ವರ್ಷ ಮೇಲ್ಪಟ್ಟ 45,65,369 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ನಿನ್ನೆ ಒಂದೇ ದಿನ 15,80,568 ಜನರಿಗೆ ವ್ಯಾಕ್ಸಿನ್ ನೀಡಲಾಗಿದ್ದು, ಕೋವಿಡ್ ಲಸಿಕೆ ನೀಡಲು ಆರಂಭಿಸಿ 67 ದಿನ ಕಳೆದಿವೆ ಎಂದಿದ್ದಾರೆ.
ಮಾರ್ಚ್ 1ರಿಂದ 60 ವರ್ಷ ಹಾಗೂ 45 ವರ್ಷದ ವಿವಿಧ ಕಾಯಿಲೆ ಇರುವ ಜನರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯ ಆರಂಭಗೊಂಡಿತ್ತು. ಇದೀಗ ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.