ETV Bharat / bharat

ಪಾಸ್ ಇಲ್ಲದೇ ಪ್ರಯಾಣಿಸುತ್ತಿದ್ದ ಪೃಥ್ವಿ ಶಾಗೆ ತಡೆ ಹಾಕಿದ ಪೊಲೀಸರು

ಈ-ಪಾಸ್ ಇಲ್ಲದೇ ಮಹಾರಾಷ್ಟ್ರದಿಂದ ಗೋವಾಗೆ ಪ್ರಯಾಣಿಸುತ್ತಿದ್ದ ವೇಳೆ ಕ್ರಿಕೆಟರ್ ಪೃಥ್ವಿ ಶಾಗೆ ತಡೆ ಹಾಕಿರುವ ಘಟನೆ ನಡೆದಿದೆ.

India cricketer Prithvi Shaw
India cricketer Prithvi Shaw
author img

By

Published : May 14, 2021, 7:48 PM IST

ಪಣಜಿ: ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಕೆಲವೊಂದು ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಈ ವೇಳೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸುವಾಗ ಈ-ಪಾಸ್ ಕಡ್ಡಾಯಗೊಳಿಸಲಾಗಿದೆ.

ಇದರ ಬಿಸಿ ಇದೀಗ ಟೀಂ ಇಂಡಿಯಾ ಪ್ಲೇಯರ್ಸ್​ಗೂ ತಟ್ಟಿದೆ. ಈ ಪಾಸ್ ಇಲ್ಲದೇ ಪ್ರಯಾಣ ನಡೆಸುತ್ತಿದ್ದ ಪೃಥ್ವಿ ಶಾಗೆ ಪೊಲೀಸರು ತಡೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಐಪಿಎಲ್​ ಅರ್ಧಕ್ಕೆ ಮೊಟಕುಗೊಂಡಿರುವ ಕಾರಣ ಪೃಥ್ವಿ ಶಾ ಸದ್ಯ ಮುಂಬೈನಲ್ಲಿದ್ದಾರೆ. ಇದರ ಮಧ್ಯೆ ಅವರು ಮಹಾರಾಷ್ಟ್ರದ ಸಿಂಧುದುರ್ಗದಿಂದ ಕಾರಿನ ಮೂಲಕ ಗೋವಾಗೆ ತೆರಳುತ್ತಿದ್ದ ವೇಳೆ ಅಂಬೋಲಿಯಲ್ಲಿ ಪೊಲೀಸರ ಕಣ್ಣಿಗೆ ಸಿಕ್ಕಿಹಾಕಿಕೊಂಡಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ತೌಕ್ತೆ ಚಂಡಮಾರುತ.. ಭಾರಿ ಮಳೆ, ಮನೆಗಳಿಗೆ ನುಗ್ಗಿದ ನೀರು

ಈ ವೇಳೆ ಅವರನ್ನ ಪ್ರಶ್ನೆ ಮಾಡಲಾಗಿದ್ದು, ಈ ಪಾಸ್ ಇಲ್ಲದಿರುವುದು ಬೆಳಕಿಗೆ ಬಂದಿದೆ. ಆದರೆ, ಪಾಸ್​ಗೋಸ್ಕರ ಅರ್ಜಿ ಸಲ್ಲಿಸಿದ ಮಾಹಿತಿ ಪತ್ರ ಅವರ ಬಳಿ ಇತ್ತು. ಈ ವೇಳೆ ಸ್ಥಳದಿಂದಲೇ ಮತ್ತೊಮ್ಮೆ ಪಾಸ್​ಗೋಸ್ಕರ ಅರ್ಜಿ ಸಲ್ಲಿಕೆ ಮಾಡಿದ್ದು, ಅದು ಬಂದ ಮೇಲೆ ಅಲ್ಲಿಂದ ಪ್ರಯಾಣ ಆರಂಭಿಸಿದ್ದಾರೆ. ಬೇರೆ ರಾಜ್ಯಗಳಿಗೆ ಪ್ರಯಾಣ ಬೆಳೆಸಲು ಮಹಾರಾಷ್ಟ್ರ ಸರ್ಕಾರ ಈ-ಪಾಸ್ ಕಡ್ಡಾಯಗೊಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.