ETV Bharat / bharat

ದೇಶದಲ್ಲಿ 795 ಹೊಸ ಕೋವಿಡ್ ಕೇಸ್​​ ಪತ್ತೆ, 58 ಮಂದಿ ಸಾವು - ಕೋವಿಡ್​​ 19 ಅಪ್ಡೇಟ್​​

ದೇಶದಲ್ಲಿ ಕೋವಿಡ್‌ ಸೋಂಕು ದಿನೇ ದಿನೇ ತಗ್ಗುತ್ತಿದೆ. ಇತ್ತ ಆರ್ಥಿಕ ಚಟುವಟಿಕೆಗಳೂ ಗರಿಗೆದರಿವೆ. ಇದೇ ವೇಳೆ ಹಲವು ರಾಜ್ಯಗಳು ಕೋವಿಡ್‌ ನಿರ್ಬಂಧಗಳನ್ನು ತೆಗೆದು ಹಾಕಿದ್ದು, ಮಾಸ್ಕ್‌ ಧರಿಸುವುದೂ ಕಡ್ಡಾಯವಾಗಿಲ್ಲ.

India covid report
ಭಾರತದ ಕೋವಿಡ್​​ ವರದಿ
author img

By

Published : Apr 5, 2022, 10:10 AM IST

ನವದೆಹಲಿ: ಕಳೆದ 24 ಗಂಟೆಗಳಲ್ಲಿ 795 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 4,30,29,839ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಸಾವಿನ ಪ್ರಮಾಣ ಶೇ.1.21 ರಷ್ಟಿದೆ. ಕಳೆದೊಂದು ದಿನದಲ್ಲಿ ದೇಶದಲ್ಲಿ 58 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 5,21,416 ಕ್ಕೆ ಏರಿದೆ.

  • India reports 795 fresh #COVID19 cases, 1,208 recoveries, and 58 deaths in the last 24 hours.

    Active cases: 12,054 (0.03%)
    Death toll: 5,21,416
    Daily positivity rate: 0.17%

    Total vaccination: 1,84,87,33,081 pic.twitter.com/kpduBaiAmX

    — ANI (@ANI) April 5, 2022 " class="align-text-top noRightClick twitterSection" data=" ">

ರಾಷ್ಟ್ರೀಯ ಕೋವಿಡ್ ಚೇತರಿಕೆ ದರ ಶೇ 98.76 ರಷ್ಟಿದೆ. 1,208 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಈವರೆಗೆ 4,24,96,369 ಮಂದಿ ಗುಣಮುಖರಾಗಿದ್ದಾರೆ. ದೈನಂದಿನ ಪಾಸಿಟಿವ್‌ ದರ ಶೇ.0.17ರಷ್ಟಿದ್ದು, ಸಾಪ್ತಾಹಿಕ ಪಾಸಿಟಿವ್‌ ದರ ಶೇ. 0.22 ದಾಖಲಾಗಿದೆ. 12,054 ಸಕ್ರಿಯ ಪ್ರಕರಣಗಳಿವೆ.

ರಾಷ್ಟ್ರವ್ಯಾಪಿ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಸೋಮವಾರ ಬೆಳಿಗ್ಗೆ 8 ಗಂಟೆಗೆ 184.87 (1,84,87,33,081) ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 4,66,332 ಕೋವಿಡ್ -19 ಪರೀಕ್ಷೆಗಳನ್ನು ನಡೆಸಲಾಗಿದೆ ಮತ್ತು ಇಲ್ಲಿಯವರೆಗೆ, 79.15 ಕೋಟಿಗೂ ಹೆಚ್ಚು ಪರೀಕ್ಷೆಗಳನ್ನು ಮಾಡಲಾಗಿದೆ.

ಇದನ್ನೂ ಓದಿ: ದೇಶದಲ್ಲಿ 715 ದಿನಗಳ ನಂತರ ಸಾವಿರಕ್ಕಿಂತ ಕಡಿಮೆ ಕೋವಿಡ್‌ ಸೋಂಕಿತರು ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.