ನವದೆಹಲಿ: ದೇಶಾದ್ಯಂತ ಹೊಸದಾಗಿ 41,649 ಜನರಿಗೆ ಕೋವಿಡ್ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,16,13,993ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 37,291 ಜನರು ಕೊರೊನಾದಿಂದ ಚೇತರಿಕೆಯಾಗಿದ್ದು, ಈವರೆಗೆ 3,07,81,263 ಜನರು ಗುಣಮುಖರಾಗಿದ್ದಾರೆ.
ಸಾವಿನ ಸಂಖ್ಯೆ ಕೂಡ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 593 ಸೋಂಕಿತರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 4,23,810ಕ್ಕೆ ಏರಿದೆ. ದೇಶದಲ್ಲಿ ಈವರೆಗೆ 46,15,18,479 ಜನರಿಗೆ ಕೋವಿಡ್ ಡೋಸ್ ನೀಡಲಾಗಿದೆ.
ಇದನ್ನೂ ಓದಿ: COVID Vaccination: ದೇಶಾದ್ಯಂತ 2.27 ಲಕ್ಷ ಗರ್ಭಿಣಿಯರಿಗೆ ಲಸಿಕೆ, ರಾಜ್ಯಕ್ಕೆ 6ನೇ ಸ್ಥಾನ
ಜುಲೈ 30 ರಂದು 17,76,315 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆವರೆಗೆ 46,64,27,038 ಜನರಿಗೆ ತಪಾಸಣೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಾಹಿತಿ ನೀಡಿದೆ.