ದೇಶದಲ್ಲಿ ಕೊರೊನಾ ಮಹಾಮಾರಿ ಮೂರನೇ ಅಲೆ ಜೋರಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಪ್ರಮುಖವಾಗಿ ಮೆಟ್ರೋ ಸಿಟಿಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಸರ್ಕಾರಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಪ್ರಮುಖವಾಗಿ ಮಹಾರಾಷ್ಟ್ರದ ಮುಂಬೈನಲ್ಲಿ ಇಂದು ದಾಖಲೆಯ 20,181 ಕೊರೊನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ನಿನ್ನೆಗೆ ಹೋಲಿಕೆ ಮಾಡಿದಾಗ ಮುಂಬೈನಲ್ಲಿ ಶೇ. 25ರಷ್ಟು ಹೆಚ್ಚಿನ ಪ್ರಕರಣ ಕಾಣಿಸಿಕೊಂಡಿವೆ.
ಇದನ್ನೂ ಓದಿ: ದೇಶಾದ್ಯಂತ ಸಾವಿರಕ್ಕೂ ಹೆಚ್ಚು ವೈದ್ಯರಿಗೆ ಕೋವಿಡ್ ಸೋಂಕು
ದೆಹಲಿಯಲ್ಲಿ 15,097 ಕೊರೊನಾ ಪ್ರಕರಣ ಕಾಣಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಶೆ. 15.34ರಷ್ಟಿದೆ. ಕಳೆದ ಎರಡು ದಿನಗಳ ಹಿಂದೆ ರಾಷ್ಟ್ರ ರಾಜಧಾನಿಯಲ್ಲಿ 5 ಸಾವಿರ ಪ್ರಕರಣ ದಾಖಲಾಗಿದ್ದವು. ಇದೀಗ ಈ ವೇಗ ದುಪ್ಪಟ್ಟಾಗಿದೆ.
ಬೆಂಗಳೂರಿನಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಯಲ್ಲಿ 4,324 ಹೊಸ ಪ್ರಕರಣ ದೃಢಪಟ್ಟಿವೆ.
ಉಳಿದಂತೆ, ತಮಿಳುನಾಡಿನಲ್ಲಿ 6,983, ಗುಜರಾತ್ನಲ್ಲಿ 4,213, ಹಿಮಾಚಲ ಪ್ರದೇಶದಲ್ಲಿ 498, ಕೇರಳದಲ್ಲಿ 4649, ಉತ್ತರಾಖಂಡ್ನಲ್ಲಿ 630, ಆಂಧ್ರಪ್ರದೇಶದಲ್ಲಿ 547 ಹೊಸ ಪ್ರಕರಣ ದಾಖಲಾಗಿವೆ.
ಮಹಾರಾಷ್ಟ್ರದಲ್ಲಿ ಕೊರೊನಾ ಭಾರಿ ಹೆಚ್ಚಳ
-
#COVID19 | Maharashtra reports 36,265 new cases, 13 deaths and, 8,907 discharges today. State reports 79 #Omicron cases today, taking the tally to 876 including 381 recoveries
— ANI (@ANI) January 6, 2022 " class="align-text-top noRightClick twitterSection" data="
Active cases rise to 1,14,847 pic.twitter.com/uuXafGkFJ6
">#COVID19 | Maharashtra reports 36,265 new cases, 13 deaths and, 8,907 discharges today. State reports 79 #Omicron cases today, taking the tally to 876 including 381 recoveries
— ANI (@ANI) January 6, 2022
Active cases rise to 1,14,847 pic.twitter.com/uuXafGkFJ6#COVID19 | Maharashtra reports 36,265 new cases, 13 deaths and, 8,907 discharges today. State reports 79 #Omicron cases today, taking the tally to 876 including 381 recoveries
— ANI (@ANI) January 6, 2022
Active cases rise to 1,14,847 pic.twitter.com/uuXafGkFJ6
ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ ದಾಖಲೆಯ 36,265 ಕೋವಿಡ್ ಪ್ರಕರಣ ಕಾಣಿಸಿಕೊಂಡಿದ್ದು, 8,907 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 13 ಜನರು ಸಾವನ್ನಪ್ಪಿದ್ದಾರೆ. ಇದರ ಜೊತೆಗೆ 79 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಸದ್ಯ 1,14,847 ಕೋವಿಡ್ ಸಕ್ರಿಯ ಪ್ರಕರಣಗಳಿವೆ.