ETV Bharat / bharat

ಗಡಿ ಸಂಘರ್ಷ : ಸೇನೆ ಹಿಂಪಡೆಯಲು ಇಂಡೋ, ಚೀನಾ ಒಪ್ಪಿಗೆ

9ನೇ ಸುತ್ತಿನ ಸಭೆಯು ಸಕಾರಾತ್ಮಕ, ಪ್ರಾಯೋಗಿಕ ಮತ್ತು ರಚನಾತ್ಮಕವಾಗಿದೆ ಎಂದು ಉಭಯ ರಾಷ್ಟ್ರಗಳ ಸೇನೆಗಳು ಒಪ್ಪಿವೆ. ಅಲ್ಲದೆ ಎಲ್​ಎಸಿ (ಗಡಿ ನಿಯಂತ್ರಣಾ ರೇಖೆ)ಯಲ್ಲಿ ಪರಸ್ಪರ ಶಾಂತಿ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಹೇಳಿವೆ.

Early
ಗಡಿ ಸಂಘರ್ಷ
author img

By

Published : Jan 25, 2021, 7:52 PM IST

ನವದೆಹಲಿ : ಗಡಿ ಬಿಕ್ಕಟ್ಟು ವಿಚಾರವಾಗಿ ಮೊಲ್ಡೊ- ಚುಶುಲ್​ನಲ್ಲಿ ಚೀನಾ, ಭಾರತದ ನಡುವೆ ನಿನ್ನೆ (ಜನವರಿ 24) 9 ನೇ ಸುತ್ತಿನ ಕಾರ್ಪ್ಸ್​ ಕಮಾಂಡರ್ ಸಭೆ ನಡೆಯಿತು. ಈ ಸಭೆಯು ಪ್ರಾಯೋಗಿಕ, ವಾಸ್ತವವಾಗಿ ನಡೆದಿದ್ದು, ಗಡಿಯಲ್ಲಿ ನಿಯೋಜಿಸಲಾಗಿದ್ದ ಸೇನೆಯನ್ನು ಹಿಂಪಡೆಯಲು ಎರಡೂ ರಾಷ್ಟ್ರಗಳು ಒಪ್ಪಿರುವುದಾಗಿ ಭಾರತೀಯ ಸೇನೆ ತಿಳಿಸಿದೆ.

9 ನೇ ಸುತ್ತಿನ ಸಭೆಯು ಸಕಾರಾತ್ಮಕ, ಪ್ರಾಯೋಗಿಕ ಮತ್ತು ರಚನಾತ್ಮಕವಾಗಿದೆ ಎಂದು ಉಭಯ ರಾಷ್ಟ್ರಗಳ ಸೇನೆಗಳು ಒಪ್ಪಿವೆ. ಅಲ್ಲದೆ ಎಲ್​ಎಸಿ (ಗಡಿ ನಿಯಂತ್ರಣಾ ರೇಖೆ)ಯಲ್ಲಿ ಪರಸ್ಪರ ಶಾಂತಿ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಹೇಳಿವೆ. ಶೀಘ್ರದಲ್ಲೇ 10 ನೇ ಸುತ್ತಿನ ಮಾತುಕತೆ ನಡೆಸುವುದಾಗಿ ತಿಳಿದು ಬಂದಿದೆ.

ಗಾಲ್ವಾನ್​ ಕಣಿವೆ ಸಂಘರ್ಷದ ಬಳಿಕ ಸುಮಾರು 9 ತಿಂಗಳ ಕಾಲ ಎಲ್​ಎಸಿಯಲ್ಲಿ ಇಂಡೋ- ಚೀನಾ ಸೇನಾಪಡೆಗಳು ಬೀಡು ಬಿಟ್ಟಿದ್ದು, ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಪ್ರಸ್ತುತ ಪೂರ್ವ ಲಡಾಖ್​ನಲ್ಲಿ 50 ಸಾವಿರ ಭಾರತೀಯ ಸೈನಿಕರಿದ್ದಾರೆ. ಈವರೆಗೂ ನಡೆದ ಸಭೆಗಳಲ್ಲಿ ಯಾವುದೇ ಬೆಳವಣಿಗೆಗಳು ಕಂಡು ಬಂದಿರಲಿಲ್ಲ. ಪ್ರಸ್ತುತ ಉಭಯ ಸೇನೆಗಳು ಗಡಿಯಿಂದ ಹಿಂದೆ ಸರಿಯುವ ನಿರ್ಧಾರ ತಳೆದಿದ್ದು ಆಶಾದಾಯಕವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.