ಹೈದರಾಬಾದ್: ಭಾರತ ಮತ್ತು ಚೀನಾ ಸೈನಿಕರು ಪಾಂಗೊಂಗ್ ತ್ಸೊ ಸರೋವರದಿಂದ ಹೊರಗುಳಿಯುವ ಒಪ್ಪಂದಗಳಿಗೆ ಸಹಿ ಹಾಕಿರುವುದು ಉಭಯ ದೇಶಗಳಿಗೆ ಸ್ವಾಗತಾರ್ಹವಾಗಿದೆ.
ಕಳೆದ ಮೇ ತಿಂಗಳಿನಿಂದ ಭಾರತ-ಚೀನಾ ಗಡಿ ವಾಸ್ತವ ರೇಖೆ ಬಳಿ ಸೇನೆ ನಿಲುಗಡೆ ಮುಂದುವರಿದಿರುವಾಗಲೇ ಭಾರತ ತನ್ನ ಸೇನೆಯ ಸಾಮರ್ಥ್ಯ ಹೆಚ್ಚಿಸಲು ಮುಂದಾಗಿತ್ತು. ಪ್ಯಾಂಗಾಂಗ್ ಟ್ಸೊ ಸರೋವರದಲ್ಲಿ ಸೇನಾಪಡೆಯ ಗಸ್ತು ತಿರುಗುವಿಕೆ ಹೆಚ್ಚಿಸಿತ್ತು. ಚೀನಿಯರು ಪಿಂಗೊಂಗ್ ತ್ಸೊದ ಉತ್ತರ ದಂಡೆಯಲ್ಲಿ ಫಿಂಗರ್ 8 ಮತ್ತು ಫಿಂಗರ್ 4 ನಡುವೆ 8 ಕಿ.ಮೀ. ವ್ಯಾಪ್ತಿಯಲ್ಲಿ ಸೇನೆಯನ್ನು ನೀಯೋಜಿಸಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಫಿಂಗರ್ 8 ಅನ್ನು ನಿಜವಾದ ನಿಯಂತ್ರಣ ರೇಖೆ (ಎಲ್‌ಎಸಿ) ಎಂದು ಹೇಳಿಕೊಂಡರೆ, ಚೀನಿಯರು ಫಿಂಗರ್ 4 ನಲ್ಲಿ ಕ್ಯಾಂಪಿಂಗ್ ಮಾಡುತ್ತಿದ್ದರು ಮತ್ತು ಫಿಂಗರ್ 5 ಮತ್ತು 8 ರ ನಡುವೆ ಕೋಟೆಗಳನ್ನು ಸ್ಥಾಪಿಸಿದ್ದರು.
ಸೇನಾಪಡೆ ಹಿಂತೆಗೆತ: ಚೀನಾ ಮತ್ತು ಭಾರತದ ನಡುವಿನ ಒಪ್ಪಂದದ ಪ್ರಕಾರ, ಪ್ಯಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ತೀರದಲ್ಲಿ ಸೇನೆ ಹಿಂಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ಹಂತ ಹಂತವಾಗಿ, ಸಮನ್ವಯ ಮಾದರಿಯಲ್ಲಿ ಗಡಿ ಸಮೀಪದ ಮೊದಲ ಸಾಲಿನಿಂದ ಭಾರತ-ಚೀನಾ ಸೇನಾಪಡೆಯನ್ನು ಹಿಂತೆಗೆದುಕೊಳ್ಳುತ್ತಿವೆ.
ಪೂರ್ವ ಲಡಾಕ್ ಭಾಗದಲ್ಲಿ ಚೀನಾ ಏಕಪಕ್ಷೀಯವಾಗಿ ಮುಂದೆ ಬಂದು ಸ್ಥಳವನ್ನು ಆಕ್ರಮಿಸಿಕೊಳ್ಳಲು ನೋಡಿದ್ದರಿಂದ, ಭಾರತವು ತನ್ನ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಭಾರತ - ಚೀನಾ ಮಾಡಿಕೊಂಡಿರುವ ಒಪ್ಪಂದಗಳಿಗೆ ವಿರುದ್ಧವಾಗಿ ಚೀನಾ ಹೆಚ್ಚಿನ ಸಂಖ್ಯೆಯ ಸೈನ್ಯವನ್ನು ವಾಸ್ತವ ನಿಯಂತ್ರಣ ರೇಖೆಗೆ (ಎಲ್‌ಎಸಿ) ಸ್ಥಳಾಂತರಿಸಿದ ನಂತರ, ಭಾರತವೂ ಸಹ ದೊಡ್ಡ ಪ್ರಮಾಣದಲ್ಲಿ ಸೇನೆಯನ್ನು ಗಡಿಭಾಗದಲ್ಲಿ ನಿಯೋಜಿಸಿತ್ತು.
ಈಗಾಗಲೇ ನಡೆಸಿದ ಮಾತುಕತೆಯಲ್ಲಿ ಭಾರತವು ಮೂರು ತತ್ವಗಳ ಆಧಾರದ ಮೇಲೆ ಸಮಸ್ಯೆಗಳಿಗೆ ಪರಿಹಾರವನ್ನು ಬಯಸಿದೆ. ಚೀನಾ ತನ್ನ ಸೇನಾಪಡೆಗಳನ್ನು ಪ್ಯಾಂಗಾಂಗ್ ಸರೋವರದ ಉತ್ತರ ತೀರದ ಫಿಂಗರ್ 8ರ ಪೂರ್ವದಲ್ಲಿ ನಿಯೋಜನೆಯನ್ನು ಮುಂದುವರಿಸುತ್ತದೆ. ಭಾರತ ಶಾಶ್ವತವಾಗಿ ಫಿಂಗರ್ ಪಾಯಿಂಟ್ 3ರಲ್ಲಿ ಸೇನಾಪಡೆ ನಿಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದೆ.
ಭಾರತ-ಚೀನಾ ಸಂಘರ್ಷ: ಕಳೆದ 45 ವರ್ಷಗಳ ಬಳಿಕ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಭಾರತ ಮತ್ತು ಚೀನಾ ಸೈನಿಕರ ನಡುವೆ 20 ದಿನಗಳಲ್ಲಿ ಪೂರ್ವ ಲಡಾಖ್‌ನಲ್ಲಿ ಕನಿಷ್ಠ ಮೂರು ಬಾರಿ ಗುಂಡಿನ ಚಕಮಕಿ ನಡೆದಿದೆ.
ಆಗಸ್ಟ್ 29-31ರ ನಡುವೆ ದಕ್ಷಿಣ ಪ್ಯಾಂಗಾಂಗ್ ಸರೋವರದ ಬಳಿ ಪರ್ವತವನ್ನು ಆಕ್ರಮಿಸುವ ಚೀನಾ ಪ್ರಯತ್ನವನ್ನು ಭಾರತೀಯ ಸೇನೆ ತಡೆದಾಗ ಮೊದಲ ಬಾರಿಗೆ ಗುಂಡಿನ ದಾಳಿ ನಡೆದಿದೆ. 2 ನೇ ಬಾರಿ ಸೆಪ್ಟೆಂಬರ್ 7 ರಂದು ಮುಖ್ಪಾರಿ ಎತ್ತರದ ಬಳಿ ಗುಂಡಿನ ದಾಳಿ ನಡೆದಿದೆ. ಸೆಪ್ಟೆಂಬರ್ 8 ರಂದು ಪಾಂಗೊಂಗ್ ಸರೋವರದ ಉತ್ತರದ ದಂಡೆಯ ಬಳಿ 3 ನೇ ಬಾರಿ ದಾಳಿ ಸಂಭವಿಸಿತ್ತು.
ಪೂರ್ವ ಲಡಾಖ್ ಸ್ಥಿತಿ: ಪೂರ್ವ ಲಡಾಕ್‌ನ ಗಡಿ ವಾಸ್ತವ ರೇಖೆ ಬಳಿ ಅನೇಕ ಘರ್ಷಣೆ ಪ್ರದೇಶಗಳನ್ನು ಚೀನಾ ನಿರ್ಮಿಸಿತ್ತು. ಚೀನಾವು ಎಲ್‌ಎಸಿ ಬಳಿ ಭಾರೀ ಶಕ್ತಿ ಮತ್ತು ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ಸಂಗ್ರಹಿಸಿತ್ತು. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಸೇನೆ ನಿಯೋಜಿಸಿತ್ತು.
ಆಗಸ್ಟ್ 29/30 ರಲ್ಲಿ ನಡೆದಿದ್ದೇನು?: ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳ ಸಂದರ್ಭದಲ್ಲಿ ಭಾರತ ಮತ್ತು ಚೀನಾ ನಡುವೆ ಹಿಂದಿನ ಒಮ್ಮತ ಬಂದರೂ, ಆಗಸ್ಟ್ 29/30 2020 ರ ರಾತ್ರಿ, ಪಿಎಲ್ಎ ಪಡೆಗಳು ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಚೋದನಕಾರಿ ಮಿಲಿಟರಿ ಪಡೆಗಳು ಗುಂಡಿನ ದಾಳಿ ನಡೆಸಿದವು.
ಚೀನಾದಿಂದ ಒಪ್ಪಂದದ ಉಲ್ಲಂಘನೆಗೆ ಪ್ರತಿಕ್ರಿಯೆಯಾಗಿ, ಭಾರತೀಯ ಪಡೆಗಳು ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣದ ದಂಡೆಯಲ್ಲಿ ಪಿಎಲ್‌ಎ ಚಟುವಟಿಕೆಯನ್ನು ಮೊದಲೇ ಖಾಲಿ ಮಾಡಿದೆ. ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ದಂಡೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ನಂತರ ದಶಕಗಳಲ್ಲಿ ಎಲ್‌ಎಸಿಯಲ್ಲಿ ಮೊದಲ ಬಾರಿಗೆ ಗುಂಡನ್ನು ಹಾರಿಸಲಾಯಿತು.
ಭಾರತ ಮತ್ತು ಚೀನಾ ನಡುವಿನ ಕಿತ್ತಾಟ: 1986 ರಲ್ಲಿ, ಚೀನಾದ ಸೈನ್ಯವು ಎಲ್‌ಎಸಿ ದಾಟಿ ಅರುಣಾಚಲ ಪ್ರದೇಶದ ಸುಮ್‌ಡಾರೊಂಗ್ ಚು ಕಣಿವೆಯನ್ನು ಪ್ರವೇಶಿಸಿ ಹೆಲಿಪ್ಯಾಡ್‌ಗಳು ಮತ್ತು ಶಾಶ್ವತ ರಚನೆಗಳನ್ನು ನಿರ್ಮಿಸಲು ಪ್ರಾರಂಭಿಸಿತು.
ಆಗಿನ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಕೆ ಸುಂದರ್ಜಿ ಆಪರೇಷನ್ ಫಾಲ್ಕನ್ ಅನ್ನು ಪ್ರಾರಂಭಿಸಿದರು. ಭಾರತೀಯ ವಾಯುಪಡೆಯ (ಐಎಎಫ್) ಸಹಾಯದಿಂದ ಹಲವಾರು ಬೆಟಾಲಿಯನ್‌ಗಳನ್ನು ವಿಮಾನದಲ್ಲಿ ಸಾಗಿಸಲಾಯಿತು ಮತ್ತು ಅವುಗಳನ್ನು ಚೀನಾ-ಭಾರತೀಯ ಗಡಿಯಲ್ಲಿ ಬಿಡಲಾಯಿತು. ಪಿಎಲ್‌ಎ ಹಿಂದೆ ಸರಿಯಲು ಒಪ್ಪುವವರೆಗೂ ಭಾರತೀಯ ಸೇನೆಯು ಚೀನಾದ ಸೈನಿಕರೊಂದಿಗೆ ಗಡಿಯಲ್ಲಿ ಸೇನೆ ಜಮಾವಣೆ ಮಾಡಲಾಯಿತು.
ಸುಮ್ಡಾರೊಂಗ್ ಚು ಬಿಕ್ಕಟ್ಟು ಆಗಸ್ಟ್ 1995 ರವರೆಗೆ ಮುಂದುವರಿಯಿತು. ಬಿಕ್ಕಟ್ಟನ್ನು ಪರಿಹರಿಸಲು ಒಂಬತ್ತು ವರ್ಷಗಳೇ ಬೇಕಾಯಿತು. ಆದರೆ, ರಾಜತಾಂತ್ರಿಕ ಮಾತುಕತೆಗಳ ಮೂಲಕ ಅದನ್ನು ಪರಿಹರಿಸಲಾಯಿತು.
ಡೆಪ್ಸಾಂಗ್ (2013): ಚೀನಾದ ಜನತಾ ವಿಮೋಚನಾ ಸೇನೆಯ (ಪಿಎಲ್ಎ) ಪಡೆಗಳು ಅರುಣಾಚಲ ಪ್ರದೇಶದ ಛಗ್ಲಗಾಮ್ ಪ್ರದೇಶದಲ್ಲಿ ಭಾರತೀಯ ನೆಲದೊಳಕ್ಕೆ 20 ಕಿ.ಮೀ.ಗಳಿಗೂ ಹೆಚ್ಚು ದೂರ ಸಾಗಿ ಬಂದಿದ್ದವು. ಭಾರತೀಯ ಸೇನಾ ಪಡೆಗಳು ಅವರನ್ನು ತಡೆದ ಬಳಿಕ ಉಭಯ ಕಡೆಗಳವರೂ ಪ್ರದೇಶ ಬಿಟ್ಟು ತೆರಳುವಂತೆ ಪರಸ್ಪರ ಬ್ಯಾನರ್ ಪ್ರದರ್ಶಿಸಿದ್ದರು. ಆದರೂ ಉಭಯ ಕಡೆಗಳ ಯೋಧರೂ ತಮ್ಮ ತಮ್ಮ ಸ್ಥಾನಬಿಟ್ಟು ಕದಲಿರಲಿಲ್ಲ. ಕಡೆಗೆ ಮೂರು - ನಾಲ್ಕು ದಿನಗಳ ವಾಸ್ತವ್ಯದ ಬಳಿಕ ಚೀನೀ ಸೈನಿಕರ ಹಿಂದಕ್ಕೆ ಹೋಗಿದ್ದವು.
ಏಪ್ರಿಲ್ ತಿಂಗಳಲ್ಲಿ ಚೀನೀ ಪಡೆಗಳು ಲಡಾಖ್ ಪ್ರದೇಶದ ಡೆಪ್ಸಾಂಗ್ ನಲ್ಲಿ ಸುಮಾರು 19 ಕಿಮೀಗಳಷ್ಟು ದೂರ ಭಾರತೀಯ ನೆಲದೊಳಕ್ಕೆ ಪ್ರವೇಶಿಸಿ ಟೆಂಟ್ ಗಳನ್ನು ಕೂಡಾ ನೆಟ್ಟಿದ್ದವು. ಉಭಯ ರಾಷ್ಟ್ರಗಳ ಮಧ್ಯೆ ಅಧಿಕಾರಿ ಮಟ್ಟದಲ್ಲಿ ಮೂರು ವಾರಗಳ ಹಲವು ಸುತ್ತುಗಳ ತೀವ್ರ ಮಾತುಕತೆಗಳ ಬಳಿಕ ಚೀನೀ ಪಡೆಗಳು ತಮ್ಮ ನೆಲೆಗಳಿಗೆ ವಾಪಸಾಗಿದ್ದವು.
ಬರ್ಟ್ಸೆ (2015): ಉತ್ತರ ಲಡಾಕ್‌ನ ಡೆಪ್ಸಾಂಗ್ ಬಯಲಿನಲ್ಲಿರುವ ಬರ್ಟ್ಸೆಯ ಜಾಗಕ್ಕೆ ಸಂಭಂದಿಸಿದಂತೆ ಭಾರತೀಯ ಮತ್ತು ಚೀನಾದ ಪಡೆಗಳ ನಡುವೆ ಸಂಘರ್ಷ ನಡೆದಿತ್ತು.ಇದನ್ನು ಉಭಯ ದೇಶಗಳ ರಾಜತಾಂತ್ರಿಕ ಮಾತುಕತೆಗಳ ಮೂಲಕ ಪರಿಹರಿಸಲಾಗಿದೆ.
ಡೋಕ್ಲಾಮ್: ಈ ಪ್ರದೇಶ ಸುಮಾರು 100 ಚದರ ಕಿಲೋಮೀಟರ್ ವಿಸ್ತಾರವಾಗಿದ್ದು, ಇದು ಕಣಿವೆ ಮತ್ತು ಪ್ರಸ್ಥಭೂಮಿಯನ್ನು ಒಳಗೊಂಡಿದೆ. ಈ ಪ್ರದೇಶವನ್ನು ಭೂತಾನ್‌ನ ಕಣಿವೆ, ಟಿಬೆಟ್‌ನ (ಚೀನಾ) ಚುಂಬಿ ಕಣಿವೆ ಮತ್ತು ಭಾರತದ ಸಿಕ್ಕಿಂ ರಾಜ್ಯವು ಸುತ್ತುವರೆದಿದೆ. ಇಲ್ಲಿ ಜೂನ್ 16 ರಿಂದ ಆಗಸ್ಟ್ 28 ರವರೆಗೆ 73 ದಿನಗಳ ಕಾಲ ಎರಡು ಸೈನಿಕ ಪಡೆಗಳು ಜಮಾವಣೆಗೊಂಡಿದ್ದವು. ನಂತರ ಇದನ್ನು ರಾಜತಾಂತ್ರಿಕ ಮಾತುಕತೆಗೆ ಪರಿಹರಿಸಲಾಗಿದೆ.