ETV Bharat / bharat

ಆಶಾ ಕಾರ್ಯಕರ್ತೆಯರಿಗೆ 1500 ರೂ. ಸಂಬಳ ಏರಿಕೆ, 1200 ವೈದ್ಯರ ನೇಮಕಕ್ಕೆ ನಿರ್ಧಾರ - ಮಹಾರಾಷ್ಟ್ರ ಕೋವಿಡ್​

ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ರಾಜ್ಯದಲ್ಲಿ ಹೊಸದಾಗಿ 1200 ವೈದ್ಯರ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದಿದ್ದಾರೆ.

Rajesh Tope
Rajesh Tope
author img

By

Published : Aug 26, 2021, 7:29 PM IST

ಮುಂಬೈ: ಕೊರೊನಾ ಹೋರಾಟದಲ್ಲಿ ಮುಂಚೂಣಿ ಕಾರ್ಯಕರ್ತೆಯರಾಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಇದೀಗ ಮಹಾರಾಷ್ಟ್ರ ಸರ್ಕಾರ ಬಂಪರ್ ಗಿಫ್ಟ್ ನೀಡಿದ್ದು, ಅವರ ಸಂಬಳದಲ್ಲಿ 1500 ರೂಪಾಯಿ ಏರಿಕೆ ಮಾಡುವುದಾಗಿ ಹೇಳಿದೆ.

ಇದೇ ವಿಚಾರವಾಗಿ ಮಾತನಾಡಿರುವ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​​ ಟೋಪೆ ಮಾಹಿತಿ ಹಂಚಿಕೊಂಡಿದ್ದಾರೆ.

  • We have approved an increment of Rs 1500 in the salary of ASHA workers. This will benefit 71,000 ASHA workers. Approx Rs 275 cr will be included in the budget for the same: Maharashtra Health Minister Rajesh Tope

    — ANI (@ANI) August 26, 2021 " class="align-text-top noRightClick twitterSection" data=" ">

ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ 71,000 ಆಶಾ ಕಾರ್ಯಕರ್ತೆಯರಿಗೆ ಇದರ ಲಾಭ ಸಿಗಲಿದ್ದು, ಇದಕ್ಕಾಗಿ 275 ಕೋಟಿ ರೂ. ಖರ್ಚು ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ರಾಜ್ಯದಲ್ಲಿ 1200 ಡಾಕ್ಟರ್ಸ್​ಗಳನ್ನ ಭರ್ತಿ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಸೆಪ್ಟೆಂಬರ್ ಅಂತ್ಯದೊಳಗೆ ಈ ಕಾರ್ಯ ಮುಕ್ತಾಯಗೊಳ್ಳಲಿದೆ. ಇದರ ಜೊತೆಗೆ 7 ಸಾವಿರ ಆರೋಗ್ಯ ಸಿಬ್ಬಂದಿಯನ್ನು ಸಹ ನೇಮಕ ಮಾಡಿಕೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ನೀಡಿದರು.

ರಾಜ್ಯದಲ್ಲಿನ ಆಸ್ಪತ್ರೆಗಳಲ್ಲಿ ಆಕ್ಸಿಜನ್​ ಸಾಮರ್ಥ್ಯ ಹಾಗೂ ಬೆಡ್​​ಗಳ ಸಂಖ್ಯೆ ಏರಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಹೊಸದಾಗಿ 1000 ಹೊಸ ಆ್ಯಂಬುಲೆನ್ಸ್​ ಖರೀದಿಸಲಾಗಿದೆ ಎಂದರು.

ಇದನ್ನೂ ಓದಿರಿ: ಕೇರಳದಲ್ಲಿ ಶೇ. 58ರಷ್ಟು COVID​ ಕೇಸ್​.. ಏರಿಕೆಯತ್ತ ಮುಖ ಮಾಡಿದ ಮಹಾಮಾರಿ ಕೊರೊನಾ!

ಸೆಪ್ಟೆಂಬರ್​ 5ರೊಳಗೆ ರಾಜ್ಯದಲ್ಲಿನ ಶಿಕ್ಷಕರು ಹಾಗೂ ಸಹಾಯಕ ಸಿಬ್ಬಂದಿಗೆ ಕೊರೊನಾ ವ್ಯಾಕ್ಸಿನ್​ ಹಾಕಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿಯನ್ನು ಸಹ ಸಚಿವರು ಹಂಚಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.