ETV Bharat / bharat

ದೇಶದಲ್ಲಿ ಸೋಂಕು ಹರಡುವಿಕೆ ನಿಯಂತ್ರಿಸುವಲ್ಲಿ ಲಸಿಕೆ ಎಷ್ಟು ಪರಿಣಾಮಕಾರಿ? - ಕೊರೊನಾ ವೈರಸ್

ಮೊದಲ ಅಲೆಗೆ ಹೋಲಿಸಿದರೆ ಕೊರೊನಾದ ಎರಡನೇ ಅಲೆ ದೇಶಾದ್ಯಂತ ಹೆಚ್ಚು ವೇಗವಾಗಿ ಹರಡುತ್ತಿದೆ. ಏಕೆಂದರೆ, ಮೊದಲ ಅಲೆಯಲ್ಲಿ ಕೋವಿಡ್‌ಗೆ ಸೂಕ್ತವಾಗಿ ಅನುಸರಿಸಿದ ರೀತಿ ಎರಡನೇ ಅಲೆಯಲ್ಲಿ ಕೋವಿಡ್ ನಡವಳಿಕೆಯನ್ನು ನಾವು ಸೂಕ್ತವಾಗಿ ಅನುಸರಿಸುತ್ತಿಲ್ಲ.

ಕೊರೊನಾ ಲಸಿಕೆ
ಕೊರೊನಾ ಲಸಿಕೆ
author img

By

Published : Apr 23, 2021, 9:51 AM IST

ಕೊರೊನಾದ ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆಯ ಸಂದರ್ಭದಲ್ಲಿ ಪ್ರಕರಣಗಳು ವೇಗವಾಗಿ ಹೆಚ್ಚಾದವು. ಭಾರತವು ಈ ಅಲೆಯನ್ನು ಹೇಗೆ ತಾಳಿಕೊಳ್ಳಬಲ್ಲುದು? ಎರಡನೇ ಅಲೆ ಎಷ್ಟು ಗಂಭೀರವಾಗಿದೆ? ದಿನಕ್ಕೆ ಇದರ ಪ್ರಮಾಣ ನಾಲ್ಕು ಲಕ್ಷದವರೆಗೆ ಹೋಗಬಹುದು ಎಂದು ಹೇಳುತ್ತಾರೆ ಕೆಲವರು. ನಿಮ್ಮ ದೃಷ್ಟಿಕೋನವೇನು?

ಮೊದಲ ಅಲೆಗೆ ಹೋಲಿಸಿದರೆ ಕೊರೊನಾದ ಎರಡನೇ ಅಲೆ ದೇಶಾದ್ಯಂತ ಹೆಚ್ಚು ವೇಗವಾಗಿ ಹರಡುತ್ತಿದೆ. ಏಕೆಂದರೆ, ಮೊದಲ ಅಲೆಯಲ್ಲಿ ಕೋವಿಡ್‌ಗೆ ಸೂಕ್ತವಾಗಿ ಅನುಸರಿಸಿದ ರೀತಿ ಎರಡನೇ ಅಲೆಯಲ್ಲಿ ಕೋವಿಡ್ ನಡವಳಿಕೆಯನ್ನು ನಾವು ಸೂಕ್ತವಾಗಿ ಅನುಸರಿಸುತ್ತಿಲ್ಲ. ಅಲ್ಲದೇ, ವೈರಸ್‌ನ ಈಗಿನ ರೂಪಾಂತರಗಳು ನಾವು ಈ ಹಿಂದೆ ನೋಡಿದ್ದಕ್ಕಿಂತ ಹೆಚ್ಚು ಸಾಂಕ್ರಾಮಿಕವಾಗಿರಬಹುದು. ಅಲ್ಲದೇ ನಾವು ಎಲ್ಲರಿಗೂ ತಕ್ಷಣ ಲಸಿಕೆ ಹಾಕಲು ಸಾಧ್ಯವಿಲ್ಲದ ಕಾರಣ, ಸೂಕ್ತ ಮುನ್ನೆಚ್ಚರಿಕೆಗಳಿಲ್ಲದೆ ಜನರು ಪರಸ್ಪರ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳುವುದರ ಮೂಲಕ ಅಲೆಯನ್ನು ನಿಯಂತ್ರಿಸಲು ಸಾಧ್ಯ. ಇದರರ್ಥ, ಉತ್ತಮ ಗುಣಮಟ್ಟದ ಮಾಸ್ಕ್‌ಗಳನ್ನು ಬಳಸುವುದು, ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಒಳಗಿರುವಾಗ ಉತ್ತಮ ವಾತಾನುಕೂಲ ಇರುವಂತೆ ನೋಡಿಕೊಳ್ಳುವುದು.

ಈ ಎರಡನೆಯ ಅಲೆಯು ತುಂಬಾ ಗಂಭೀರವಾಗಿದೆ. ಏಕೆಂದರೆ ಸೋಂಕುಪೀಡಿತರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂದರೆ, ತೀವ್ರವಾಗಿ ಸೋಂಕಿತರಾಗಿರುವವರ ಪ್ರಮಾಣ ಒಟ್ಟು ಸೋಂಕಿತರಿಗಿಂತ ಕಡಿಮೆ ಪ್ರಮಾಣದಲ್ಲಿದ್ದರೂ ಸಹ ಬಾಧಿತರ ಒಟ್ಟಾರೆ ಸಂಖ್ಯೆ ದೊಡ್ಡ ಪ್ರಮಾಣದಲ್ಲಿರಲಿದ್ದು, ನಮ್ಮ ಆರೋಗ್ಯ ವ್ಯವಸ್ಥೆಯನ್ನು ಮುಳುಗಿಸಬಹುದು. ನಾವು ಏನನ್ನೂ ಮಾಡದೇ ಹೋದರೆ ಪ್ರಕರಣಗಳ ಸಂಖ್ಯೆ ಏರುತ್ತಲೇ ಹೋಗುವ ಅಪಾಯವಿದೆ. ಆದರೆ ಅದೃಷ್ಟವಶಾತ್ ರಾಜ್ಯಗಳು ಈಗ ಹೆಚ್ಚೆಚ್ಚು ನಿರ್ಬಂಧಗಳನ್ನು ವಿಧಿಸಲು ಪ್ರಾರಂಭಿಸಿವೆ. ಆದ್ದರಿಂದ ನಮ್ಮ ನಿರಾಶಾವಾದಿಗಳು ಹೇಳುವ ನಿತ್ಯ 4 ಲಕ್ಷದಷ್ಟು ಸೋಂಕಿತರಾಗುವ ಹಾಗೂ ಅದಕ್ಕಿಂತ ಹೆಚ್ಚಾಗುವ ಸಾಧ್ಯತೆಯನ್ನು ನಿವಾರಿಸಲು ಸಾಧ್ಯವಿದೆ ಎಂದು ನಾನು ಭಾವಿಸುತ್ತೇನೆ.

  • ನಮ್ಮ ಲಸಿಕೆ ಉತ್ಪಾದನಾ ಸಾಮರ್ಥ್ಯಗಳ ಬಗ್ಗೆ ನಾವು ಹೆಮ್ಮೆ ಕೊಚ್ಚಿಕೊಂಡಿದ್ದೆವು. ಆದರೆ, ಅಂತಿಮವಾಗಿ ಲಸಿಕೆಯ ಭಾರಿ ಕೊರತೆ ತಲೆದೋರಿತು. ಈ ಪರಿಸ್ಥಿತಿಗೆ ಏನು ಕಾರಣ?

ಇದಕ್ಕೆ ಮೂರು ಮುಖ್ಯ ಕಾರಣಗಳಿವೆ. ಮೊದಲನೆಯದಾಗಿ, ಲಸಿಕೆ ಉತ್ಪಾದನೆಯಲ್ಲಿ ಭಾರತದ ಸಾಮರ್ಥ್ಯ ದೊಡ್ಡದಾಗಿದ್ದರೂ, ಲಸಿಕೆಗಳನ್ನು ತಯಾರಿಸಲು ಬೇಕಾದ ವಸ್ತುಗಳು ನಮ್ಮಲ್ಲಿ ಲಭ್ಯವಿಲ್ಲ. ಅದಕ್ಕಾಗಿ ನಾವು ಜಾಗತಿಕ ಪೂರೈಕೆ ಸರಪಳಿಯಲ್ಲಿ ಸ್ಪರ್ಧಿಸಬೇಕಾಗಿದೆ. ಈ ಸಂದರ್ಭದಲ್ಲಿ ವಿಶ್ವದ ಪ್ರತಿಯೊಬ್ಬ ಲಸಿಕೆ ತಯಾರಕನೂ ಲಭ್ಯವಿರುವ ಕಚ್ಚಾ ವಸ್ತುಗಳನ್ನು ಖರೀದಿಸಲು ಪ್ರಯತ್ನಿಸುತ್ತಿರುತ್ತಾನೆ. ಎರಡನೆಯದಾಗಿ, ನಮ್ಮ ಲಸಿಕೆ ತಯಾರಕರು ತಮ್ಮ ಉತ್ಪಾದನೆಯನ್ನು ಎಷ್ಟು ಬೇಗ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂಬ ಆಶಾದಾಯಕ ಅಂದಾಜುಗಳನ್ನು ಮಂಡಿಸಿದ್ದರು.

ವಿವಿಧ ಕಾರಣಗಳಿಗಾಗಿ ಇದು ಸಾಧ್ಯವಾಗಲಿಲ್ಲ. ಹೀಗಾಗಿ ಇದು ಕೊರತೆಗೆ ಕಾರಣವಾಯಿತು. ಮೂರನೆಯದಾಗಿ, ತಮ್ಮಲ್ಲಿರುವುದು ವಿಶ್ವಾಸಿತವಲ್ಲದ ಮಾರುಕಟ್ಟೆ, ಹೀಗಾಗಿ ದೇಶದೊಳಗೆ ಈ ಲಸಿಕೆಯನ್ನು ಹೇಗೆ ಒದಗಿಸಬೇಕು ಮತ್ತು ಎಷ್ಟನ್ನು ರಫ್ತು ಮಾಡಬಹುದು ಎಂಬುದನ್ನು ತಿಳಿದುಕೊಳ್ಳುವುದು ಲಸಿಕೆ ತಯಾರಕರ ಯೋಜನೆಗೆ ಅವಶ್ಯಕವಾಗಿದೆ (ಯಾವುದೇ ಕಂಪನಿಯು ತಾನು ಕಾರ್ಯನಿರ್ವಹಿಸಲು ಸಾಕಷ್ಟು ಹಣದ ಹರಿವು ಲಭ್ಯವಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು). ಒಂದು ವೇಳೆ ಅಂತಹ ಯಾವುದೇ ಸಂಭವನೀಯತೆ ಇಲ್ಲದೇ ಇದ್ದಾಗ, ಹಾಗೂ ಕಡಿಮೆ ಸಮಯದ ಅವಧಿಯಲ್ಲಿ ಲಸಿಕೆಯನ್ನು ಭಾಗಭಾಗವಾಗಿ ಕಡಿಮೆ ಬೆಲೆಗೆ ಒದಗಿಸುವಂತೆ ಸರಕಾರ ಆದೇಶಿಸಿದರೆ, ಉದ್ಯಮವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ತುಂಬಾ ಕಷ್ಟಕರವಾಗುತ್ತದೆ.

  • ವೈರಾಲಜಿ ಕ್ಷೇತ್ರದಲ್ಲಿ ಈ ಒಂದು ವರ್ಷದ ತೀವ್ರ ಸಂಶೋಧನೆಯ ನಂತರ, ನಾವು ವೈರಸ್‌ನ ಭವಿಷ್ಯದ ನಡವಳಿಕೆಯನ್ನು ಗ್ರಹಿಸುವ ಸ್ಥಿತಿಯಲ್ಲಿದ್ದೇವೆಯೇ? ಅಥವಾ ಅದು ಇನ್ನಷ್ಟು ಬಲಶಾಲಿಯಾಗುವುದೇ?

ಕಳೆದ ಒಂದು ವರ್ಷದಲ್ಲಿ ನಾವು ಈ ವೈರಸ್‌ನ ವರ್ತನೆಯ ಬಗ್ಗೆ ಸಾಕಷ್ಟು ಕಲಿತಿದ್ದೇವೆ ಮತ್ತು ಮುಂದೆ ಏನಾಗಬಹುದು ಎಂಬುದನ್ನು ಗ್ರಹಿಸುವ ಕುರಿತು ಸಮಂಜಸವಾದ ಸಾಮರ್ಥ್ಯವನ್ನು ಹೊಂದಿದ್ದೇವೆ. ಎಲ್ಲಾ ವೈರಸ್‌ಗಳಂತೆ, ಈ ವೈರಸ್ ಹೆಚ್ಚು ಸುಲಭವಾಗಿ ಹರಡುವ ಸಾಮರ್ಥ್ಯ ಹೊಂದಿದ್ದು, ಇದರಿಂದಾಗಿ ಅದು ಸಂಖ್ಯೆ ವರ್ಧಿಸಿಕೊಳ್ಳುತ್ತಲೇ ಇರುತ್ತದೆ. ಇದರರ್ಥ: ಅದು ಹೆಚ್ಚು ಸಾಂಕ್ರಾಮಿಕವಾಗಲು ಪ್ರಯತ್ನಿಸುತ್ತದೆ ಮತ್ತು ಲಸಿಕೆಗಳನ್ನು ವ್ಯಾಪಕವಾಗಿ ಬಳಸಿದರೆ, ಅದು ಆತಿಥೇಯರ ಪ್ರತಿರಕ್ಷಣಾ ಪ್ರತಿಕ್ರಿಯೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಅದೃಷ್ಟವಶಾತ್, ಸೋಂಕು ಉಂಟಾಗಲು ವೈರಸ್‌ನ ದಾಳಿ ಪ್ರೋಟೀನ್ ಅತ್ಯಗತ್ಯ ಮತ್ತು ಈ ದಾಳಿ ಪ್ರೋಟೀನ್ ಎಷ್ಟು ಬದಲಾಗಬಹುದು ಎಂಬುದಕ್ಕೆ ಒಂದು ಮಿತಿ ಇರುವುದರಿಂದ, ವೈರಸ್‌ನಲ್ಲಿ ನಾವು ಕಾಣುವ ಈ ಎಲ್ಲ ವ್ಯತ್ಯಾಸಗಳು ಮುಂದಿನ ಎರಡು ವರ್ಷಗಳಲ್ಲಿ ಕಂಡುಬರುವ ಸಾಧ್ಯತೆಯಿದೆ. ಕೆಲವು ಬಿಡಿ ರೂಪಾಂತರಗಳು ವೈರಸ್‌ನ ಕೆಲವು ತಳಿಗಳನ್ನು ತೀವ್ರ ರೋಗಕಾರಕವಾಗಿ ಮಾಡಬಹುದಾದರೂ, ಈ ರೂಪಾಂತರಗಳು ವ್ಯಾಪಕವಾಗಿ ಹರಡುವ ವೈರಸ್‌ಗಳ ಜೊತೆಗೆ ಇರಬೇಕಾಗುತ್ತದೆ. ತಮ್ಮ ಆತಿಥೇಯರನ್ನು ಕೊಲ್ಲುವ ವೈರಸ್‌ಗಳು ಸುಲಭವಾಗಿ ಸಂಖ್ಯೆ ವರ್ಧಿಸಿಕೊಳ್ಳಲು ಆಗದೇ ಇರುವುದರಿಂದ, ಹೆಚ್ಚುತ್ತಿರುವ ತೀವ್ರವಾದ ಕಾಯಿಲೆಗಳು ಭವಿಷ್ಯದಲ್ಲಿ ಸಾಮಾನ್ಯವಾಗಬಹುದಾದ ಸಾಧ್ಯತೆಯನ್ನು ನಾನು ನಿರೀಕ್ಷಿಸುವುದಿಲ್ಲ.

  • ಈ ಎರಡನೇ ಅಲೆಯಲ್ಲಿ, ದೇಶಾದ್ಯಂತ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹಾಕುವುದರ ಪರಿಣಾಮಗಳನ್ನು ನೀವು ಹೇಗೆ ಅಂದಾಜು ಮಾಡುತ್ತೀರಿ? ಆರ್ಥಿಕ ಮತ್ತು ರಾಜಕೀಯ ಕಾರಣಗಳು ವೈಜ್ಞಾನಿಕ ನಿರ್ಧಾರಗಳ ಮೇಲೆ ಪ್ರಭಾವ ಬೀರುವುದನ್ನು ಒಪ್ಪುವುದು ಸಾಧ್ಯವೆ? ವೈರಸ್ ನಿಯಂತ್ರಣಕ್ಕೆ ಸರ್ಕಾರಗಳು ಈ ಸಮಸ್ಯೆಗಳನ್ನು ಸರಿಯಾಗಿ ಪರಿಹರಿಸುತ್ತವೆ ಎಂದು ನೀವು ಭಾವಿಸುತ್ತೀರಾ?
  • ಲಾಕ್‌ಡೌನ್ ವಿಧಿಸುವಿಕೆಗಳನ್ನು ಮೀರಿ ನಾವು ಮಧ್ಯಸ್ಥಿಕೆ ವಹಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ರಾಜ್ಯದಲ್ಲಿ ಸೋಂಕು ಹರಡುವಿಕೆಗೆ ಕಾರಣವಾಗುವ ಚಟುವಟಿಕೆಗಳು ಯಾವುವು? ನಾವು ಅವನ್ನು ವರ್ಗೀಕರಿಸಬಹುದೇ?

ಮಾರುಕಟ್ಟೆಗಳು ಅಥವಾ ಕಾಲೇಜುಗಳು ಅಥವಾ ಶಾಲೆಗಳು ಅಥವಾ ಸಿನೆಮಾ ಚಿತ್ರಮಂದಿರಗಳು ಅಥವಾ ಉತ್ಸವಗಳು ಅಥವಾ ಚುನಾವಣಾ ರ‍್ಯಾಲಿಗಳೇ? ಇವುಗಳ ಪೈಕಿ ಯಾವುದು ಹರಡುವಿಕೆಗೆ ಕಾರಣವಾಗಬಹುದು? ಅಂಥವನ್ನಷ್ಟೇ ನಾವು ಗುರಿಯಾಗಿಸಬೇಕು / ಅಂಥವುಗಳ ಕುರಿತು ಸಾಕ್ಷ್ಯಗಳ ಮೂಲಕ ಸರ್ಕಾರಗಳಿಗೆ ತಿಳಿಸಬೇಕಾಗಿದೆ. ಲಾಕ್‌ಡೌನ್ ಎಂಬುದು ಒಂದು ಮೊಂಡಾದ ಸಾಧನವಾಗಿದ್ದು, ಎಲ್ಲಾ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಪಡಿಸದೆ ಉತ್ತಮ ವಿಧಾನಗಳನ್ನು ಅನುಸರಿಸುವುದು ಸಾಧ್ಯವಿದೆ.

  • ಭಾರತದಲ್ಲಿರುವ ವೈರಸ್ ರೂಪಾಂತರಗಳ ಕುರಿತು ಇನ್ನಷ್ಟು ಮಾಹಿತಿ ನೀಡಿ. ಹೊಸ ರೂಪಾಂತರಗಳ ತೀವ್ರತೆ ಏನಿರಬಹುದು?

ವೈರಸ್ ರೂಪಾಂತರಗಳ ಕುರಿತು ಭಾರತದಲ್ಲಿ ಸಾಕಷ್ಟು ಅಧ್ಯಯನ ಆಗಿಲ್ಲ. ಆದರೆ ಹೆಚ್ಚಿನ ಸೋಂಕು ಉಂಟುಮಾಡುವ ಸಾಮರ್ಥ್ಯ ಇದೆ ಎಂಬುದನ್ನು ಇದುವರೆಗಿನ ಬೆಳವಣಿಗೆಗಳು ತೋರಿಸುತ್ತವೆ. ಇವುಗಳು ಹೆಚ್ಚು ಗಂಭೀರವಾದ ಸೋಂಕುಗಳಾಗಿದೆಯೇ ಎಂದು ನೋಡಬೇಕಾಗಿದೆ. ವೈರಸ್‌ನ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ನಾವು ಸಾಂಕ್ರಾಮಿಕ ರೋಗಶಾಸ್ತ್ರವನ್ನು ಹೆಚ್ಚಿನ ಪ್ರಯೋಗಾಲಯ ಅಧ್ಯಯನಗಳೊಂದಿಗೆ ಜೋಡಣೆ ಮಾಡಬೇಕಾಗಿದೆ ಎಂಬುದು ಸ್ಪಷ್ಟ. ನಾವು ಅನುಕ್ರಮವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದರೂ, ಸೋಂಕು ಉಂಟು ಮಾಡಬಲ್ಲ ಸಾಮರ್ಥ್ಯ ಹಾಗೂ ಲಸಿಕೆಯ ಪ್ರಭಾವದಿಂದ ತಪ್ಪಿಸಿಕೊಳ್ಳುವುದನ್ನು ಅರ್ಥ ಮಾಡಿಕೊಳ್ಳುವಂತಹ ವಿಧಾನಗಳನ್ನು ನಿರ್ದಿಷ್ಟಪಡಿಸುವಲ್ಲಿ ಇನ್ನೂ ನಿಧಾನ ಗತಿಯಲ್ಲಿಯೇ ಇದ್ದೇವೆ.

  • ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರಗಳು ಏನು ಮಾಡಬೇಕು? ಈಗ ಜನರು ಮತ್ತು ಅವರ ನಾಯಕರ ಜವಾಬ್ದಾರಿಗಳೇನು? ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ನಿರ್ಣಾಯಕ ಕ್ರಮಗಳು ಮತ್ತು ತಂತ್ರಗಳು ಯಾವುವು?

ಸಾರ್ವಜನಿಕ ಆರೋಗ್ಯದ ಬಗ್ಗೆ ರಾಜಿ ಮಾಡಿಕೊಳ್ಳದೆ ಅಗತ್ಯ ಕಾರ್ಯಗಳ ನಿರ್ವಹಣೆ ಮತ್ತು ಅಗತ್ಯ ಆರ್ಥಿಕ ಚಟುವಟಿಕೆಗಳು ಅಬಾಧಿತವಾಗಿ ಮುಂದುವರಿಯುವುದರ ಕುರಿತು ರಾಜ್ಯ ಸರ್ಕಾರಗಳು ಯೋಚಿಸಬೇಕಾಗಿದೆ. ಮನರಂಜನೆ, ರಾಜಕೀಯ ಸಮಾವೇಶಗಳು ಹಾಗೂ ಧಾರ್ಮಿಕ ಕಾರ್ಯಗಳಂತಹ ಕೆಲವು ಚಟುವಟಿಕೆಗಳು ಜನಸಂದಣಿಯನ್ನು ಆಕರ್ಷಿಸುತ್ತವೆ ಹಾಗೂ ಸೋಂಕು ಹರಡುವಿಕೆಗೆ ಜನಸಂದಣಿ ಅತ್ಯಗತ್ಯ ಎಂಬುದನ್ನು ಇತ್ತೀಚಿನ ದಿನಗಳಲ್ಲಿ ನಾವು ನೋಡಿದ್ದೇವೆ. ಅಪಾಯದ ಪರಿಣಾಮಗಳನ್ನು ನೋಡಲಾಗಿ ಅಂತಹ ಚಟುವಟಿಕೆಗಳು ನಡೆಸಲು ಸೂಕ್ತವಾಗಿವೆಯೇ ಎಂಬುದನ್ನು ರಾಜ್ಯ ಸರ್ಕಾರಗಳು ಪರಿಗಣಿಸಬೇಕಾಗಿದೆ.

  • ನಮ್ಮ ಲಸಿಕಾಕರಣ ಪ್ರಮಾಣ ಇನ್ನೂ ಶೇಕಡಾ 10ಕ್ಕಿಂತ ಕಡಿಮೆಯೇ ಇದೆ. ಲಸಿಕೆ ತೆಗೆದುಕೊಳ್ಳುವಿಕೆಯನ್ನು ಹೆಚ್ಚಿಸಲು ಏನು ಮಾಡಬಹುದು?

ಲಸಿಕಾಕರಣದ ಮಹತ್ವ ಹಾಗೂ ಅದು ಎಷ್ಟು ವ್ಯತ್ಯಾಸವನ್ನು ಉಂಟು ಮಾಡುತ್ತದೆ ಎಂಬುದರ ಕುರಿತು ನಾವು ಉತ್ತಮವಾಗಿ ಸಂವಹನ ಮಾಡಬೇಕಾದ ಅವಶ್ಯಕತೆ ಇದೆ. ಈ ಸಂದರ್ಭದಲ್ಲಿ ಇಸ್ರೇಲ್‌ನ ಮಾದರಿಯನ್ನು ಒಮ್ಮೆ ನೋಡುವುದು ಒಳಿತು ಅನಿಸುತ್ತದೆ. ಜನಸಂಖ್ಯೆಯ ಗಮನಾರ್ಹ ಭಾಗಕ್ಕೆ ಒಮ್ಮೆ ಲಸಿಕೆ ಹಾಕಿದ ನಂತರ ಪ್ರಸ್ತುತ ನಮ್ಮ ಮೇಲೆ ಹೊರಿಸಲಾಗಿರುವ ಹಲವಾರು ನಿರ್ಬಂಧಗಳಿಗೆ ಮುಕ್ತಿ ನೀಡಬಹುದು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.

  • ಸೋಂಕು ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಲಸಿಕೆ ಎಷ್ಟು ಪರಿಣಾಮಕಾರಿ?

ಈ ಸಮಯದಲ್ಲಿ, ನಮ್ಮ ಲಸಿಕಾ ತಂತ್ರವು ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವತ್ತ ಗಮನ ಹರಿಸಿಲ್ಲ. ಬದಲಾಗಿ ಹೆಚ್ಚಿನ ಅಪಾಯದಲ್ಲಿರುವ ಜನಸಂಖ್ಯೆಯಲ್ಲಿ ತೀವ್ರ ರೋಗ ಮತ್ತು ಮರಣ ಉಂಟಾಗದಂತೆ ನಿಯಂತ್ರಿಸುವುದರ ಮೇಲೆ ಕೇಂದ್ರೀಕರಿಸಿದೆ. ನಮ್ಮ ದೇಶದ ಶೇಕಡಾ 30ಕ್ಕಿಂತಲೂ ಹೆಚ್ಚು ಜನರಿಗೆ ರೋಗನಿರೋಧಕ ಶಕ್ತಿಯನ್ನು ನೀಡಲು ನಾವು ಶಕ್ತರಾದಾಗ ಸೋಂಕಿನ ಹರಡುವಿಕೆಯ ಮೇಲೆ ಉಂಟಾಗಿರುವ ಪರಿಣಾಮವನ್ನು ಕಾಣಲು ಪ್ರಾರಂಭಿಸುತ್ತೇವೆ. ಎಷ್ಟು ಸಮಯದವರೆಗೆ ಲಸಿಕೆಯ ರಕ್ಷಣೆ ಇರುತ್ತದೆ ಮತ್ತು ನಮ್ಮ ಜನಸಂಖ್ಯೆಗೆ ಎಷ್ಟು ಬೇಗನೆ ಲಸಿಕೆ ನೀಡಬಹುದು ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ. ಕಲಿಯಬೇಕಿರುವುದು ಇನ್ನೂ ಸಾಕಷ್ಟಿದೆ.

  • ಈ ಅಲೆ ಎಷ್ಟು ಕಾಲ ಉಳಿಯುತ್ತದೆ?

ಒಟ್ಟಾರೆಯಾಗಿ ಹೇಳುವುದಾದರೆ ಪ್ರಾರಂಭದಿಂದ ಅಂತ್ಯದವರೆಗಿನ ದಾರಿಯು ಮೂರರಿಂದ ನಾಲ್ಕು ತಿಂಗಳುಗಳ ನಡುವೆ ಎಲ್ಲೋ ಇರುತ್ತವೆ. ನಾವು ಈಗಾಗಲೇ ಎರಡನೇ ತಿಂಗಳ ಅಂತ್ಯದಲ್ಲಿದ್ದೇವೆ. ಒಂದು ವೇಳೆ ನಾವು ಸೋಂಕು ಹರಡುವಿಕೆಗೆ ಅವಕಾಶ ನೀಡುವ ಚಟುವಟಿಕೆಗಳನ್ನು ನಿರ್ದಿಷ್ಟವಾಗಿ ಮಾಡದೇ ಇದ್ದರೆ ಗರಿಷ್ಠ ಮತ್ತು ಅವನತಿಗೆ ಹೋಗಲು ನಮಗೆ ಹೆಚ್ಚು ಸಮಯ ಬೇಕಾಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.