ETV Bharat / bharat

ಯುವತಿಯರಲ್ಲಿ ಹೆಚ್ಚುತ್ತಿದೆ ಕನ್ಯತ್ವ ಮರಳಿ ಪಡೆಯುವ ಆಸೆ: ಇದಕ್ಕಾಗಿ ಲೇಸರ್​ ಶಸ್ತ್ರಚಿಕಿತ್ಸೆ - ಯೋನಿ ಸಡಿಲಿಕೆ

ಕಳೆದ ಆರು ತಿಂಗಳಲ್ಲಿ ಕನ್ಯತ್ವವನ್ನು ಮರಳಿ ಪಡೆಯಲು ಮತ್ತು ಯೋನಿಯನ್ನು ಬಿಗಿಗೊಳಿಸುವ ಕುರಿತು ಐದು ಸಾವಿರಕ್ಕೂ ಹೆಚ್ಚು ಮಹಿಳೆಯರು ವಿಚಾರಿಸಿದ್ದು, ಅದರಲ್ಲಿ ಮದುವೆಗೆ ಮುಂಚೆ ಕನ್ಯತ್ವ ಕಳೆದುಕೊಂಡು ಮರಳಿ ಪಡೆಯಲು ಬಯಸುವ ಹುಡುಗಿಯರ ಸಂಖ್ಯೆಯೇ ಹೆಚ್ಚು ಎನ್ನುತ್ತಾರೆ ಗೈನೋ ಕಾಸ್ಮೆಟಿಕ್ ಸರ್ಜನ್ ಡಾ ಹಿಮಾನ್ಶು.

increased-desire-of-girls-to-get-virginity-again
ಹೆಚ್ಚುತ್ತಿದೆ ಯುವತಿಯರಲ್ಲಿ ಕನ್ಯತ್ವ ಮರಳಿ ಪಡೆಯುವ ಆಸೆ
author img

By

Published : Nov 20, 2022, 10:35 AM IST

ಆಧುನಿಕ ಜೀವನಶೈಲಿಯಲ್ಲಿ ಹೆಣ್ಣು ಮಕ್ಕಳು ಮದುವೆಗೂ ಮುನ್ನ ಗಂಡಿನ ಜೊತೆ ದೈಹಿಕ ಸಂಬಂಧ ಹೊಂದುತ್ತಿರುವ ನಿದರ್ಶನಗಳು ಸಿಗುತ್ತಿವೆ. ಈ ಮೂಲಕ ಕನ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಈ ರೀತಿಯ ಲೈಂಗಿಕ ಸಂಬಂಧ ಮಾತ್ರವೇ ಅಲ್ಲ, ಕ್ರೀಡೆ ಮತ್ತು ಗಾಯಗಳಿಂದಲೂ ಕನ್ಯತ್ವ ಕಳೆದುಕೊಳ್ಳುವ ಸಾಧ್ಯತೆಗಳೂ ಇವೆ. ಇತ್ತೀಚಿನ ದಿನಗಳಲ್ಲಿ ಹೀಗೆ ಕನ್ಯತ್ವ ಕಳೆದುಕೊಂಡ ಮಹಿಳೆಯರಲ್ಲಿ ಮತ್ತೆ ಕನ್ಯತ್ವ ಪಡೆಯುವ ಆಸೆ ಹೆಚ್ಚಾಗುತ್ತಿದೆ. ಕನ್ಯತ್ವ ಕಳೆದುಕೊಂಡ ಯುವತಿಯರು ತಮ್ಮ ಪತಿಗೆ ಮತ್ತು ಮರು ಮದುವೆಯಾಗಲು ಬಯಸುವ ವಿಧವೆಯರೂ ಕೂಡ ತಮ್ಮ ಹೊಸ ಪತಿಗೆ ಕನ್ಯತ್ವ ಉಡುಗೊರೆಯಾಗಿ ಕೊಡಲು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಫ್ಯಾಶನ್​ ಬೆಳೆಯುತ್ತಿದೆ.

ಪ್ರಾಯೋಗಿಕವಾಗಿ ಶಸ್ತ್ರಚಿಕಿತ್ಸೆ: ಇದೀಗ ಕನ್ಯತ್ವವನ್ನು ಮತ್ತೆ ಗಳಿಸಿಕೊಡುವ ಶಸ್ತ್ರಚಿಕಿತ್ಸೆಗೆ ಬೇಕಾದ ಯಂತ್ರವೊಂದು ಪಾಟ್ನಾದ ಕ್ಲಿನಿಕ್​ಗೆ ಬಂದಿದ್ದು, ಸದ್ಯ ಪ್ರಾಯೋಗಿಕವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. 2023ರ ಜನವರಿಯಿಂದ ಸಂಪೂರ್ಣವಾಗಿ ಶಸ್ತ್ರಚಿಕಿತ್ಸೆ ಆರಂಭವಾಗಲಿದೆ ಎಂದು ಪಾಟ್ನಾದ ಗೈನೋ ಕಾಸ್ಮೆಟಿಕ್ ಸರ್ಜನ್ ಡಾ.ಹಿಮಾನ್ಶು ರೈ ತಿಳಿಸಿದ್ದಾರೆ.

ಡಾ.ಹಿಮಾನ್ಶು ರೈ ಹೇಳುವಂತೆ, ಈವರೆಗೆ ಕನ್ಯತ್ವ ಶಸ್ತ್ರಚಿಕಿತ್ಸೆಗಾಗಿ 200ಕ್ಕೂ ಹೆಚ್ಚು ಮಂದಿ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ. ಹೀಗೆ ನೋಂದಣಿ ಮಾಡಿಸಿಕೊಂಡವರಲ್ಲಿ 35 ರಿಂದ 45 ವರ್ಷ ವಯಸ್ಸಿನ ಮಹಿಳೆಯರೇ ಹೆಚ್ಚು. ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ತಮ್ಮ ಸಡಿಲ ಯೋನಿಯಿಂದ ಲೈಂಗಿಕತೆಯನ್ನು ಆನಂದಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಮಹಿಳೆಯರೂ ಇದರಲ್ಲಿ ಸೇರಿದ್ದಾರೆ. ಸಡಿಲವಾಗಿರುವ ಯೋನಿಯನ್ನು ಹೈಮೆನ್ ಲೇಸರ್​ ಶಸ್ತ್ರಚಿಕಿತ್ಸೆಯ ಮೂಲಕ ತನ್ನ ಲೈಂಗಿಕ ಜೀವನವನ್ನು ಸುಧಾರಿಸಲು ಮಹಿಳೆಯರು ಬಯಸುತ್ತಿದ್ದಾರೆ.

ಕಳೆದ ಆರು ತಿಂಗಳಲ್ಲಿ ಕನ್ಯತ್ವವನ್ನು ಮರಳಿ ಪಡೆಯಲು ಮತ್ತು ಯೋನಿಯನ್ನು ಬಿಗಿಗೊಳಿಸುವ ಕುರಿತು ಐದು ಸಾವಿರಕ್ಕೂ ಮಹಿಳೆಯರು ವಿಚಾರಿಸಿದ್ದು, ಈ ಪೈಕಿ 200ಕ್ಕೂ ಹೆಚ್ಚು ಮಹಿಳೆಯರು ನೋಂದಣಿ ಕೂಡ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಶೇ.25ರಿಂದ 30ರಷ್ಟು ಕನ್ಯತ್ವ ಪಡೆಯಲು ನೋಂದಣಿ ನಡೆದರೆ, ಯೋನಿ ಬಿಗಿಗೊಳಿಸಲು ಶೇ 40 ರಷ್ಟು ನೋಂದಣಿಗಳನ್ನು ಮಾಡಲಾಗಿದೆ. ಶೇ.30ರಷ್ಟು ಮಂದಿ ವೃದ್ಧಾಪ್ಯದಲ್ಲಿ ಮೂತ್ರ ಸೋರಿಕೆ ಸಮಸ್ಯೆ ಎದುರಿಸುತ್ತಿರುವವರಾಗಿದ್ದಾರೆ. ಆದರೆ ಮದುವೆಗೆ ಮುಂಚೆ ಕನ್ಯತ್ವ ಕಳೆದುಕೊಂಡು ಮರಳಿ ಪಡೆಯಲು ಬಯಸುವ ಹುಡುಗಿಯರ ಸಂಖ್ಯೆಯೇ ಹೆಚ್ಚು ಎನ್ನುತ್ತಾರೆ ಡಾ.ಹಿಮಾನ್ಶು.

ಮತ್ತೆ ಕನ್ಯತ್ವ ಪಡೆಯುವ ಆಸೆ: ಇಂದಿನ ಜೀವನಶೈಲಿಯಲ್ಲಿ ಹುಡುಗ-ಹುಡುಗಿಯರು ಮದುವೆಗೂ ಮುನ್ನವೇ ದೈಹಿಕ ಸಂಬಂಧ ಹೊಂದಿರುತ್ತಾರೆ. ಹುಡುಗಿ ಲಿವ್-ಇನ್ ರಿಲೇಶನ್​ಶಿಪ್‌ನಲ್ಲಿದ್ದು, ಕೊನೆ ಘಳಿಗೆಯಲ್ಲಿ ಹುಡುಗ ಮದುವೆಗೆ ಒಪ್ಪದೇ ಬಿಟ್ಟು ಹೋಗುವಂತಹ ಹಲವು ಘಟನೆಗಳು ನಡೆಯುತ್ತವೆ. ದೀರ್ಘಕಾಲದವರೆಗೆ ದೈಹಿಕ ಸಂಬಂಧದಲ್ಲಿರುವ ಕಾರಣ, ಹುಡುಗಿಯ ಯೋನಿ ಮಾರ್ಗವು ಸಡಿಲಗೊಂಡಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅನೇಕ ಹುಡುಗಿಯರು ತಮ್ಮ ಹೊಸ ಸಂಗಾತಿಗೆ ಸಂಪೂರ್ಣವಾಗಿ ವರ್ಜಿನ್ ಎಂದು ಹೇಳಲು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರಂತೆ.

ಮದುವೆಗೆ ಮೊದಲು ದೈಹಿಕ ಸಂಬಂಧ ಹೊಂದಿದ್ದ ಹುಡುಗಿಯರಿಂದ ಮಾತ್ರವಲ್ಲದೆ ಕೆಲವು ಸಂದರ್ಭಗಳಲ್ಲಿ ವಿಧವೆ ಮಹಿಳೆಯರೂ ಈ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ದುರದೃಷ್ಟವಶಾತ್ ಚಿಕ್ಕ ವಯಸ್ಸಿನಲ್ಲಿಯೇ ವಿಧವೆಯಾಗಿ, ಮತ್ತೆ ಹೊಸ ಜೀವನ ಆರಂಬಿಸಲು ಹೊರಟಿರುವ ಮಹಿಳೆಯರೂ ಇದರ ಬಗ್ಗೆ ವಿಚಾರಿಸಿದ್ದುಂಟು. ತಮ್ಮ ಹೊಸ ಪತಿಗೆ ಕನ್ಯತ್ವವನ್ನು ಉಡುಗೊರೆಯಾಗಿ ನೀಡಲು ಬಯಸುವ ಈ ಮಹಿಳೆಯರು ಶಸ್ತ್ರಚಿಕಿತ್ಸೆ ಬಗ್ಗೆ ವಿಚಾರಿಸಿದ್ದಾರೆ. ವೈದ್ಯರ ಪ್ರಕಾರ, ಈ ರೀತಿಯ ಶಸ್ತ್ರಚಿಕಿತ್ಸೆಗೆ 30,000 ರೂ.ನಿಂದ 1 ಲಕ್ಷ ರೂ. ವರೆಗೆ ವೆಚ್ಚವಾಗುಬಹುದು.

ಮೂತ್ರ ಸೋರಿಕೆ ಸಮಸ್ಯೆ: ಯೋನಿ ಸಡಿಲಗೊಳ್ಳುವುದರಿಂದ ವೃದ್ಧಾಪ್ಯದಲ್ಲಿ ನಗುವಾಗ, ಸೀನುವಾಗ ಅಥವಾ ಜೋರಾಗಿ ನಗುವಾಗ ಮೂತ್ರ ಸೋರಿಕೆಯಾಗುವ ಸಮಸ್ಯೆ ಅನೇಕ ಮಹಿಳೆಯರು ತೊಂದರೆ ಎದುರಿಸುತ್ತಿದ್ದಾರೆ. ಯೋನಿಯೊಳಗಿನ ಎರಡು ಸ್ನಾಯುಗಳ ನಡುವೆ ಇರುವ ಕೋನವು ಸಡಿಲವಾಗಿರುತ್ತದೆ. ಆಗ ಮೂತ್ರವನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಅನೇಕ ಮಹಿಳೆಯರು ಡೈಪರ್​ ಧರಿಸಬೇಕಾದ ಪರಿಸ್ಥಿತಿಯೂ ಬರುತ್ತದೆ. ಸಾಮಾಜಿಕ ಜೀವನದಲ್ಲಿ ತುಂಬಾ ಬೆರೆತಿರುವ ಮಹಿಳೆಯರು ಮತ್ತು ಡೈಪರ್​ ಧರಿಸಲು ಬಯಸದ ಮಹಿಳೆಯರು ಕೂಡ ತಮ್ಮ ಬಳಿ ಬರುತ್ತಾರೆ ಎಂದು ಹೇಳುತ್ತಾರೆ ವೈದ್ಯರು.

ಜರ್ಮನಿಯ ಅತ್ಯಾಧುನಿಕ ತಂತ್ರಜ್ಞಾನ: ಇದಲ್ಲದೇ ನಾರ್ಮಲ್ ಡೆಲಿವರಿ ಮೂಲಕ ಎರಡು, ಮೂರು ಮಕ್ಕಳನ್ನು ಹೆರುವ ಮಹಿಳೆಯರು 10 ರಿಂದ 15 ವರ್ಷಗಳ ಸೆಕ್ಸ್ ಲೈಫ್ ನಂತರ ಲೈಂಗಿಕ ಜೀವನವನ್ನು ಆನಂದಿಸಲು ಸಾಧ್ಯವಾಗುತ್ತಿಲ್ಲ. ಅಂತಹ ಮಹಿಳೆಯರಿಗೆ ಎರಡು ವಿಧಾನಗಳ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅವಕಾಶವಿದೆ. ಒಂದು ಶಸ್ತ್ರಚಿಕಿತ್ಸೆಯ ಯೋನಿ ಬಿಗಿಗೊಳಿಸುವಿಕೆ ಮತ್ತು ಲೇಸರ್ ಯೋನಿ ಬಿಗಿಗೊಳಿಸುವಿಕೆ.

ಸರ್ಜಿಕಲ್ ಯೋನಿ ಬಿಗಿಗೊಳಿಸುವುದು ಕಾಸ್ಮೆಟಿಕ್ ಸರ್ಜರಿಯಾಗಿದ್ದು, ಇದರಲ್ಲಿ ಯೋನಿಯ ಹೆಚ್ಚುವರಿ ಸ್ನಾಯುಗಳನ್ನು ತೆಗೆದುಹಾಕಿ ಬಿಗಿಗೊಳಿಸಲಾಗುತ್ತದೆ. ಈಗ, ಇದರೊಂದಿಗೆ ಇನ್ನಷ್ಟು ಸುಧಾರಿತ ತಂತ್ರಜ್ಞಾನ ಲೇಸರ್ ಯೋನಿ ಬಿಗಿಗೊಳಿಸುವಿಕೆ ಬಂದಿದೆ. ಇದು ಜರ್ಮನಿಯ ಸುಧಾರಿತ ಯಂತ್ರ. ಲೇಸರ್​ನೊಂದಿಗೆ ತಾಪಮಾನವನ್ನು ಹೊಂದಿಸುವ ಮೂಲಕ ಯೋನಿಯ ಸ್ನಾಯುಗಳನ್ನು ಬಿಗಿಗೊಳಿಸಲಾಗುತ್ತದೆ. 3 ರಿಂದ 4 ಸಿಟ್ಟಿಂಗ್‌ಗಳಲ್ಲಿ 15 ದಿನಗಳಿಂದ 30 ದಿನಗಳವರೆಗೆ ಶಸ್ತ್ರಚಿಕಿತ್ಸೆ ಪೂರ್ಣಗೊಳ್ಳುತ್ತದೆ. ಪ್ರತಿ ಸಿಟ್ಟಿಂಗ್​ ಸುಮಾರು 10 ನಿಮಿಷಗಳು. ಇದರ ನಂತರ ಮುಂದಿನ ಕೆಲವು ವರ್ಷಗಳವರೆಗೆ ಯೋನಿಯು ಬಿಗಿಯಾಗಿರುತ್ತದೆ. ಇದರಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಈ ಸೌಲಭ್ಯವನ್ನು ಹೊಂದಿರುವ ನಗರಗಳಲ್ಲಿ ಪಾಟ್ನಾ ಐದನೇ ನಗರ ಎಂದು ಡಾ. ಹಿಮಾನ್ಶು ತಿಳಿಸಿದ್ದಾರೆ.

ಇದನ್ನೂ ಓದಿ: ವಿಶ್ವ ಋತುಬಂಧ ದಿನ: ಮಹಿಳೆಯರ ಆರೋಗ್ಯದ ಮೇಲೆ ಋತುಬಂಧದ ಪರಿಣಾಮಗಳೇನು ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.