ETV Bharat / bharat

ಹಗ್ಗ ಹಿಡಿದುಕೊಂಡು ಪ್ರಾಣ ಉಳಿಸಿಕೊಂಡ ಬಾಲಕಿ.. ಆದರೆ ಮೊರ್ಬಿ ದುರಂತದಲ್ಲಿ ತಂದೆ ತಾಯಿ ಕಳೆದುಕೊಂಡ ಹರ್ಷಿ - ಮೊರ್ಬಿಯಲ್ಲಿ ತೂಗು ಸೇತುವೆ ಕುಸಿತ

7 ವರ್ಷದ ಬಾಲಕಿ ಹರ್ಷಿ ಘಟನೆಯ ಕರಾಳ ನೆನಪನ್ನು ಬಿಚ್ಚಿಟ್ಟಿದ್ದಾಳೆ. ಅಂದ ಹಾಗೆ ಅವತ್ತು ಅಂದರೆ ಅಕ್ಟೋಬರ್ 30 ರಂದು ನಾನು ಮೊರ್ಬಿಗೆ ಬಂದಿದ್ದೆ, ಅಲ್ಲಿಗೆ ನನ್ನ ತಾಯಿ ಮತ್ತು ತಂದೆ ಕಚ್‌ನಿಂದ ಹಿಂತಿರುಗಿದ್ದರು. ಆ ಬಳಿಕ ನಾನು ನನ್ನ ತಾಯಿ ಜತೆಗೆ ಸೇತುವೆಯನ್ನು ವೀಕ್ಷಿಸಲು ಮೋರ್ಬಿಗೆ ಪ್ರಯಾಣಿಸಿದೆ.

http://10.10.50.90:6060/reg-lowres/03-November-2022/nov03v30_0311a_1667477804_493.jpg

author img

By

Published : Nov 3, 2022, 10:28 PM IST

Updated : Nov 3, 2022, 10:52 PM IST

ಅಹಮದಾಬಾದ್: ಅಕ್ಟೋಬರ್ 30 ರಂದು ಮೊರ್ಬಿಯಲ್ಲಿ ತೂಗು ಸೇತುವೆ ಕುಸಿತ ಕಂಡು 130 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಹಲವು ಕುಟುಂಬಳನ್ನು ಬಲಿ ಪಡೆದಿರುವುದು ಎಲ್ಲರಿಗೂ ಗೊತ್ತೇ ಇದೆ. ಅಹಮದಾಬಾದ್‌ನ ಕುಟುಂಬವೂ ಸಹ ಈ ಭೀಕರ ದುರಂತದಲ್ಲಿ ಎಲ್ಲವನ್ನೂ ಕಳೆದುಕೊಂಡಿದೆ.

ಇದರಲ್ಲಿ 7 ವರ್ಷದ ಬಾಲಕಿ ಹರ್ಷಿ ತನ್ನ ತಂದೆ- ತಾಯಿಯನ್ನು ಕಳೆದುಕೊಂಡು ಅನಾಥವಾಗಿದೆ. ತಂದೆ -ತಾಯಿ ಅಷ್ಟೇ ಅಲ್ಲ ಇವಳ ಬಾಳಿಗೆ ದೀವಿಗೆ ಆಗಬೇಕಿದ್ದ ಅವಳ ಕುಟುಂಬದ ಇತರರು ಈ ದುರ್ಘಟನೆಯಲ್ಲಿ ಅಸು ನೀಗಿದ್ದಾರೆ. ಇದೀಗ ಕರಾಳ ಘಟನೆಯಲ್ಲಿ ಪವಾಡ ಸದೃಶ್ಯ ಎಂಬಂತೆ ಬದುಕಿ ಬಂದಿರುವ 7 ವಯಸ್ಸಿನ ಹೆಣ್ಣುಮಗುವಿನ ರಕ್ಷಣೆಗೆ ಅವರ ಕುಟುಂಬ ಸರ್ಕಾರ ಮತ್ತು ಇತರ ಸಾಮಾಜಿಕ ಸೇವಾ ಸಂಸ್ಥೆಗಳಿಂದ ಸಹಾಯ ಪಡೆಯಲು ಪ್ರಯತ್ನಿಸುತ್ತಿದೆ.

ಆದರೆ ಮೊರ್ಬಿ ದುರಂತದಲ್ಲಿ ತಂದೆ ತಾಯಿ ಕಳೆದುಕೊಂಡ ಹರ್ಷಿ
ಹಗ್ಗ ಹಿಡಿದುಕೊಂಡು ಪ್ರಾಣ ಉಳಿಸಿಕೊಂಡ ಬಾಲಕಿ

ಹರ್ಷಿ ಬಾಳಲ್ಲಿ ಅವತ್ತು ಆಗಿದ್ದೇನು?: 7 ವರ್ಷದ ಬಾಲಕಿ ಹರ್ಷಿ ಘಟನೆಯ ಕರಾಳ ನೆನಪನ್ನು ಬಿಚ್ಚಿಟ್ಟಿದ್ದಾಳೆ. ಅಂದ ಹಾಗೆ ಅವತ್ತು ಅಂದರೆ ಅಕ್ಟೋಬರ್ 30 ರಂದು ನಾನು ಮೊರ್ಬಿಗೆ ಬಂದಿದ್ದೆ, ಅಲ್ಲಿಗೆ ನನ್ನ ತಾಯಿ ಮತ್ತು ತಂದೆ ಕಚ್‌ನಿಂದ ಹಿಂತಿರುಗಿದ್ದರು. ಆ ಬಳಿಕ ನಾನು ನನ್ನ ತಾಯಿ ಜತೆಗೆ ಸೇತುವೆಯನ್ನು ವೀಕ್ಷಿಸಲು ಮೋರ್ಬಿಗೆ ಪ್ರಯಾಣಿಸಿದೆ.

ಸೇತುವೆ ಮೇಲೆಯಿಂದ ಅಲ್ಲಿನ ವಿಹಂಮ ನೋಟದಲ್ಲಿದ್ದಾಗ ಇದ್ದಕ್ಕಿದ್ದಂತೆ ತೂಗು ಸೇತುವೆ ಕಳಚಿ ಬಿತ್ತು. ನನ್ನ ಹೆತ್ತವರು ನದಿಗೆ ಬಿದ್ದ ಕಾರಣ ದಿಕ್ಕು ತೋಚದಾದೆ, ನನ್ನನ್ನು ಪೋಲೀಸರು ಕಾಪಾಡಿದರು. ನನ್ನ ಕೈಯಲ್ಲಿ ಹೂವಿನ ದಾರ ಹಿಡಿದಿದ್ದರಿಂದ ನನ್ನ ಸಹೋದರ ಬಂದು ನನ್ನನ್ನು ಎತ್ತಿಕೊಂಡರು. ಹೀಗಂತಾ ಆ ಪುಟಾಣಿ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ.

ಇನ್ನು ಹರ್ಷಿ ಕುಟುಂಬದ ಜೆಸಂಗ್​ ಭಾಯ್​ ಹೇಳುವುದಿಷ್ಟು: ಮೃತ ಅಶೋಕ್ ದೀಪಾವಳಿ ರಜೆಯ ಭಾಗವಾಗಿ ಐದು ದಿನಗಳ ಕಾಲ ಕಚ್‌ಗೆ ಹೋಗಿದ್ದರು. ಈ ಸಂದರ್ಭದಲ್ಲಿ ಅಶೋಕ್​​ ಮೊರ್ಬಿಯಲ್ಲಿ ಇರುವ ನನ್ನ ಹಿರಿಯ ಮಗಳನ್ನು ಭೇಟಿ ಮಾಡಲು ಅಲ್ಲಿಗೆ ಹೋಗುತ್ತೇನೆ ಎಂದು ಹೇಳಿದ್ದ ಎಂದು ಮೃತ ಅಶೋಕ್ ಚಾವ್ಡಾ ಅವರ ತಂದೆ ಜೆಸಾಂಗ್‌ಭಾಯ್ ಚಾವ್ಡಾ ಹೇಳಿದ್ದಾರೆ.

ಇದನ್ನು ಓದಿ:ಮೋರ್ಬಿ ದುರಂತ: ನ್ಯಾಯಾಂಗ ತನಿಖೆಗಾಗಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

ಜೆಸಾಂಗ್​ ಭಾಯ್​ ಹೇಳುವ ಪ್ರಕಾರ, ಅವರು ರಾತ್ರಿ 9 ಗಂಟೆಗೆ ಮೊರ್ಬಿಯಿಂದ ಅಹಮದಾಬಾದ್‌ಗೆ ತೆರಳಬೇಕಿತ್ತು. ಈ ದುರ್ಘಟನೆ ದಿನದಂದು ನನ್ನ ಅತ್ತಿಗೆ ಮತ್ತು ಸೋದರ ಮಾವ ಮೊರ್ಬಿಯಲ್ಲಿನ ಮಚ್ಚು ನದಿಯ ಮೇಲಿರುವ ತೂಗು ಸೇತುವೆ ನೋಡಲು ಬಂದರು. ನನ್ನ ಮಗ ಅಶೋಕ್, ಸೊಸೆ ಭಾವನಾ, ಮಗಳು ಹರ್ಷಿ, ಸೋದರ ಮಾವ ಕಾರ್ತಿಕ್ ಮತ್ತು ಪೂಜಾ ಒಂದೇ ಸಮಯದಲ್ಲಿ ಸೇತುವೆ ಮೇಲೆ ತೆರಳಿದ್ದರು.

In the Morbi tragedy a 7 year old child managed
ಹಗ್ಗ ಹಿಡಿದುಕೊಂಡು ಪ್ರಾಣ ಉಳಿಸಿಕೊಂಡ ಬಾಲಕಿ

ಅದೇ ವೇಳೆ ಸೇತುವೆ ಹಠಾತ್ ತುಂಡಾಗಿತ್ತು. ಈ ಸಂದರ್ಭದಲ್ಲಿ ನನ್ನ ಸಂಬಂಧಿ ಸೇತುವೆಯಿಂದ ಹೊರಬಂದರು. ಹರ್ಷಿ ಸೇತುವೆಯ ಹಗ್ಗವನ್ನು ಹಿಡಿದು ತನ್ನನ್ನು ತಾನು ರಕ್ಷಿಸಿಕೊಂಡಳು ಎಂದು ಆಕೆಯ ಅಜ್ಜ ಜೆಸಾಂಗ್‌ಭಾಯ್ ಚಾವ್ಡಾ ಘಟನೆಯ ವಿವರ ನೀಡಿದ್ದಾರೆ.

ಘಟನೆಯ ಬಗ್ಗೆ ಮತ್ತಷ್ಟು ವಿವರ ನೀಡಿರುವ ಚಾವ್ಡಾ.. ಅಂದು ನಾಲ್ಕು ಗಂಟೆ ವೇಳೆಗೆ ನಾವು ಅಶೋಕ್​ಗೆ ಕರೆ ಮಾಡಿದ್ದೆವು. ಎಷ್ಟೊತ್ತಿಗೆ ಬರುತ್ತೀರಿ ಎಂದು ವಿಚಾರಿಸಿದ್ದೆವು. ಆಗ ಮಾತನಾಡಿದ್ದ ಅಶೋಕ್​, ನಮಗಾಗಿ ಅಡುಗೆ ಮಾಡಬೇಡಿ, ಬರುವುದು ಲೇಟ್​ ಆಗಬಹುದು ಎಂದು ಹೇಳಿದ್ದ. ಆದರೆ, 7 ಗಂಟೆ ಸುಮಾರಿಗೆ ಇಂತಹದೊಂದು ದುರಂತ ನಡೆದಿದೆ ಎಂದು ಸಹೋದರಳಿಯ ಕಾರ್ತಿಕ್​ ನನಗೆ ವಿಷಯ ತಿಳಿಸಿದೆ. ಆ ತಕ್ಷಣವೇ ನಾವು ಅಹಮದಾಬಾದ್​ನಿಂದ ಮೋರ್ಬಿಗೆ ತೆರಳಿದೆವು ಎಂದು ಚಾವ್ಡಾ ಘಟನೆಯ ಬಗ್ಗೆ ವಿವರವಾಗಿಯೇ ಮಾತನಾಡಿದರು.

ಇದನ್ನು ಓದಿ: ಫಿಟ್​ನೆಸ್​ ಇಲ್ಲದ ಸೇತುವೆ ಮೇಲೆ ಕಿಕ್ಕಿರಿದು ಸೇರಿದ ಜನ.. ನೂರಾರು ಮಂದಿ ಜಲಸಮಾಧಿ, ಮನಕಲಕುವ ಫೋಟೋಗಳು

ಹರ್ಷಿ ತಂದೆ ತಾಯಿಯ ದುರಂತ ಕಥೆ: ನನಗೆ ಐವರು ಮಕ್ಕಳು ಅದರಲ್ಲಿ ಮೂವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು. ಅಶೋಕ್ ಅವರಲ್ಲಿ ಒಬ್ಬ. ಖಾಸಗಿ ಉದ್ಯಮದಲ್ಲಿ ಉದ್ಯೋಗ ಮಾಡುತ್ತಿದ್ದರು. ಉಳಿದ ಇಬ್ಬರು ಮಕ್ಕಳು ಅವನಿಗಿಂತ ಚಿಕ್ಕವರು. ಇಬ್ಬರೂ ಉದ್ಯೋಗದಲ್ಲಿದ್ದರು. ಆದರೆ ಕರೋನಾದಿಂದಾಗಿ ಅವರಿಬ್ಬರೂ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದರು. ಇಬ್ಬರು ಮಕ್ಕಳು ನಿರುದ್ಯೋಗಿಗಳಾಗಿರುವುದರಿಂದ ಚಿಲ್ಲರೆ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ ಎಂದು ಹರ್ಷಿ ಅಜ್ಜ ಜೀವನ ವೃತ್ತಾಂತ ಬಿಚ್ಚಿಟ್ಟರು.

ಹೇಗೋ ಜೀವ ಉಳಿಸಿಕೊಂಡ ಹರ್ಷಿ: ಅದೃಷ್ಟವೋ ದುರಾದೃಷ್ಟವೋ ಮೃತ್ಯು ಗೆದ್ದು ಬಂದಿರುವ ಹರ್ಷಿ, ದುರಂತದಲ್ಲಿ ತನ್ನ ಜೀವವನ್ನೇನೋ ಉಳಿಸಿಕೊಂಡಿದ್ದಾಳೆ. ಆದರೆ ಸಾಕಿ -ಸಲುಹಬೇಕಾದ ತಂದೆ ತಾಯಿಯನ್ನೇ ಕಳೆದುಕೊಂಡು ಅನಾಥಳಾಗಿದ್ದಾಳೆ. ಹೀಗಾಗಿ ಹರ್ಷಿ ಅಜ್ಜ- ಅಜ್ಜಿಯ ಆಸರೆಯಲ್ಲಿ ಬೆಳೆಯಬೇಕಿದೆ. ಇನ್ನೊಂದಡೆ ಬಡತನದ ಬೇಗೆಯಲ್ಲಿರುವ ಕುಟುಂಬ ಬಾಲಕಿಯ ವಿದ್ಯಾಭ್ಯಾಸ ಹಾಗೂ ಮದುವೆ ವೆಚ್ಚವನ್ನು ಹೇಗೆ ಭರಿಸುವುದು ಎಂಬ ಚಿಂತೆಯಲ್ಲಿದೆ. ಸರ್ಕಾರದ ಬೆಂಬಲ ಸಿಕ್ಕರೆ ಹೊರೆ ಕಡಿಮೆ ಆಗಬಹುದು ಎಂಬುದು ಅಜ್ಜ - ಅಜ್ಜಿಯ ಮಾತಾಗಿದೆ.

ನೆರವು ನೀಡುವ ಭರವಸೆ ನೀಡಿದ ಶಾರದಾ ವಿದ್ಯಾಮಂದಿರ; ಹರ್ಷಿ ಪ್ರಸ್ತುತ ಶಾರದಾ ವಿದ್ಯಾಮಂದಿರ ಜೂನಿಯರ್ ಕೆಜಿಗೆ ದಾಖಲಾಗಿದ್ದಾಳೆ. ಘಟನೆಯ ಬಗ್ಗೆ ತಿಳಿದ ನಂತರ ಶಾಲೆಯ ಪ್ರಾಂಶುಪಾಲರು ಮತ್ತು ಹಲವು ಬೋಧಕರು ಬಾಲಕಿಯ ಅಜ್ಜ - ಅಜ್ಜಿಗೆ ಕೈಲಾದಷ್ಟು ಸಹಾಯ ಮಾಡುವ ಭರವಸೆ ನೀಡಿದ್ದಾರಂತೆ. 8 ನೇ ತರಗತಿಯವರೆಗಿನ ಎಲ್ಲ ಅಧ್ಯಯನ ವೆಚ್ಚ ನೀಡುವ ಭರವಸೆ ನೀಡಿದ್ದಾರೆ. ಆದರೂ ಮುಂದಿನ ಜೀವನಕ್ಕೆ ಬಾಲಕಿಗೆ ನೆರವಿನ ಹಸ್ತದ ಅಗತ್ಯವಿದೆ.

ಇದನ್ನು ಓದಿ:ಭಾರತದಲ್ಲಿ ಸಂಭವಿಸಿದ ಸೇತುವೆ ಕುಸಿತ ಮತ್ತು ರೈಲು ಅಪಘಾತಗಳ ಮಾಹಿತಿ..

Last Updated : Nov 3, 2022, 10:52 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.