ETV Bharat / bharat

24 ಗಂಟೆಯೊಳಗೆ ಎರಡು ಎನ್​ಕೌಂಟರ್​; ಪೊಲೀಸರ ಗುಂಡಿಗೆ ಇಬ್ಬರು ಅತ್ಯಾಚಾರ ಆರೋಪಿಗಳು ಬಲಿ​ - ಇಬ್ಬರು ಅತ್ಯಾಚಾರಿ ಆರೋಪಿ ಗುಂಡಿಕ್ಕಿ ಕೊಂದ ಪೊಲೀಸ್​

Rape accused killed in Assam: ಅತ್ಯಾಚಾರ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವರ ಮೇಲೆ ಗುಂಡಿನ ದಾಳಿ ನಡೆಸಿದಾಗ ಇಬ್ಬರೂ ಬಲಿಯಾಗಿರುವ ಘಟನೆ ಅಸ್ಸೋಂನಲ್ಲಿ ನಡೆದಿದೆ.

Two rape accused killed in Assam
Two rape accused killed in Assam
author img

By

Published : Mar 16, 2022, 3:54 PM IST

Updated : Mar 16, 2022, 7:36 PM IST

ಗುವಾಹಟಿ(ಅಸ್ಸೋಂ): ಕೇವಲ 24 ಗಂಟೆಯೊಳಗೆ ಎರಡು ಎನ್​ಕೌಂಟರ್​ ನಡೆಸಿರುವ ಅಸ್ಸೋಂ ಪೊಲೀಸರು ಇಬ್ಬರು ಅತ್ಯಾಚಾರ ಪ್ರಕರಣದ ಆರೋಪಿಗಳನ್ನ ಎನ್​ಕೌಂಟರ್​ ಮಾಡಿದ್ದಾರೆ. ಮೊದಲನೇ ಎನ್​ಕೌಂಟರ್​​ ಗುವಾಹಟಿ ಹಾಗೂ ಎರಡನೇಯದು ಉದಲಗುರಿ ಜಿಲ್ಲೆಯಲ್ಲಿ ನಡೆದಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮಾರ್ಚ್​​ 10ರಂದು ರಾಜೇಶ್ ಎಂಬ ವ್ಯಕ್ತಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದನು. ಮರುದಿನ ಬಾಲಕಿ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದ ಪೊಲೀಸರು, ಆತನನ್ನ ಕೃತ್ಯ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿ, ಮಾಹಿತಿ ಪಡೆದುಕೊಳ್ಳುತ್ತಿದ್ದರು. ಈ ವೇಳೆ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಲು ರಾಜೇಶ್ ಮುಂದಾಗಿದ್ದು, ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಆರೋಪಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: 15 ವರ್ಷಗಳಲ್ಲಿ ಭಾರತದ ಪೌರತ್ವ ಪಡೆದ ಚೀನಿಯರೆಷ್ಟು? ಕೇಂದ್ರದ ಮಾಹಿತಿ ಹೀಗಿದೆ..

ಉದಲಗುರಿ ಜಿಲ್ಲೆಯಲ್ಲೂ ಇಂತಹ ಘಟನೆ ನಡೆದಿದ್ದು, ಅತ್ಯಾಚಾರ ಆರೋಪಿ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಆತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆಗ ಆತನ ಪ್ರಾಣ ಸ್ಥಳದಲ್ಲೇ ಹಾರಿಹೋಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Last Updated : Mar 16, 2022, 7:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.