ETV Bharat / bharat

Petrol price Hike ವಿರುದ್ಧ 1973ರಲ್ಲಿ ವಾಜಪೇಯಿ ಪ್ರತಿಭಟನೆ... ವಿಡಿಯೋ ಶೇರ್ ಮಾಡಿದ Congress! - ಪೆಟ್ರೋಲ್​ ಬೆಲೆ 7 ಪೈಸೆ ಏರಿಕೆ

1973ರಲ್ಲಿ ತೈಲ ಬೆಲೆ ಏರಿಕೆಯಾಗಿದ್ದ ಸಂದರ್ಭದಲ್ಲಿ ಅಟಲ್​ ಬಿಹಾರಿ ವಾಜಪೇಯಿ ಎತ್ತಿನ ಗಾಡಿ ಮೂಲಕ ಸಂಸತ್​ಗೆ ಆಗಮಿಸಿದ್ದರು. ಅದರ ವಿಡಿಯೋ ತುಣಕವೊಂದನ್ನ ಇದೀಗ ಕಾಂಗ್ರೆಸ್​ ಶೇರ್ ಮಾಡಿಕೊಂಡಿದೆ.

Vajpayee's 1973 petrol price hike protest

author img

By

Published : Jul 3, 2021, 10:34 PM IST

ನವದೆಹಲಿ: ಪ್ರತಿದಿನ ದೇಶಾದ್ಯಂತ ತೈಲ ಬೆಲೆ ಏರಿಕೆಯಾಗ್ತಿದ್ದು, ಇದರ ವಿರುದ್ಧ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಆದರೆ 1973ರಲ್ಲಿ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರು ಇಂಧನ ಬೆಲೆ ಏರಿಕೆ ವಿರುದ್ಧ ನಡೆಸಿದ್ದ ವಿಡಿಯೋವೊಂದನ್ನ ಇದೀಗ ಕಾಂಗ್ರೆಸ್​ ಶೇರ್​ ಮಾಡಿದೆ. ಈ ಮೂಲಕ ಆಡಳಿತ ಪಕ್ಷ ಬಿಜೆಪಿಗೆ ತಿರುಗೇಟು ನೀಡಿದೆ.

  • Rare footage from 1973 of an opposition protest when petrol prices were raised by seven Paise. Atal Bihari Vajpayee arrived in Parliament on a bullock cart (which would not be possible today with the new security restrictions on vehicle entry into the complex!) pic.twitter.com/1hd97kgoMG

    — Shashi Tharoor (@ShashiTharoor) July 3, 2021 " class="align-text-top noRightClick twitterSection" data=" ">

ಕಾಂಗ್ರೆಸ್​ ಪಕ್ಷದ ಹಿರಿಯ ಮುಖಂಡ ಶಶಿ ತರೂರ್​ ಈ ವಿಡಿಯೋವನ್ನ ತಮ್ಮ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. 1973ರಲ್ಲಿ ವಿಪಕ್ಷ ಸ್ಥಾನದಲ್ಲಿದ್ದ ಅಟಲ್​ ಬಿಹಾರಿ ವಾಜಪೇಯಿ ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಸರ್ಕಾರ ಪೆಟ್ರೋಲ್​ ಬೆಲೆಯಲ್ಲಿ ಏಳು ಪೈಸೆ ಏರಿಕೆ ಮಾಡಿತ್ತು. ಹೀಗಾಗಿ ವಾಜಪೇಯಿ, ಎತ್ತಿನ ಗಾಡಿಯಲ್ಲಿ ಸಂಸತ್​ಗೆ ಆಗಮಿಸಿದ್ದರು.

ವಿಡಿಯೋ ಶೇರ್ ಮಾಡಿಕೊಂಡಿರುವ ಶಶಿ ತರೂರ್​,1973ರಲ್ಲಿ ಪೆಟ್ರೋಲ್​ ಬೆಲೆ 7 ಪೈಸೆ ಏರಿಕೆ ಮಾಡಿದ್ದಾಗ ವಿರೋಧ ಪಕ್ಷ ಈ ರೀತಿಯಾಗಿ ಪ್ರತಿಭಟನೆ ನಡೆಸಿತ್ತು. ವಾಜಪೇಯಿ ಅವರು ಎತ್ತಿನ ಗಾಡಿ ಮೂಲಕ ಸಂಸತ್​ಗೆ ಬಂದಿದ್ದರು. ಆದರೆ ಭದ್ರತಾ ನಿಬಂಧನೆಗಳಿರುವ ಕಾರಣ ಇದೀಗ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ದೇಶದ ಅನೇಕ ಪ್ರಮುಖ ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದೆ. ಇದೇ ವಿಷಯವನ್ನಿಟ್ಟುಕೊಂಡು ಕೇಂದ್ರದ ವಿರುದ್ಧ ವಿಪಕ್ಷಗಳು ಆಕ್ರೋಶ ಹೊರಹಾಕುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.