ETV Bharat / bharat

ಚೀನಾ ವಿದೇಶಾಂಗ ಸಚಿವರ ಭಾರತ ಭೇಟಿ?: ಗಲ್ವಾನ್​ ಘರ್ಷಣೆ ನಂತರ ಮೊದಲ ಮುಖಾಮುಖಿ! - ಚೀನಾ ವಿದೇಶಾಂಗಗ ಸಚಿವ ಭಾರತ ಭೇಟಿ

ಚೀನಾದ ವಿದೇಶಾಂಗ ಸಚಿವ ವಾಂಗ್​ ಯಿ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದು, ವಾಂಗ್​​ ಯೀ ಭಾರತಕ್ಕೆ ಭೇಟಿ ನೀಡುವ ಕುರಿತು ಕಾರ್ಯ ಪ್ರಗತಿಯಲ್ಲಿದೆ ಎಂಬುದಾಗಿ ತಿಳಿದು ಬಂದಿದೆ. ಆದರೆ ದೆಹಲಿಯಲ್ಲಿರುವ ಚೀನಾದ ರಾಯಭಾರ ಕಚೇರಿ ಅಥವಾ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಉದ್ದೇಶಿತ ಭೇಟಿಯನ್ನು ಅಧಿಕೃತವಾಗಿ ದೃಢಪಡಿಸಿಲ್ಲ. 2020ರ ಮೇ ತಿಂಗಳಲ್ಲಿ ಸಂಭವಿಸಿದ ಗಲ್ವಾನ್ ಘರ್ಷಣೆ ಮತ್ತು ಗಡಿ ವಿವಾದ ಪ್ರಾರಂಭವಾದ ನಂತರ ಎರಡೂ ದೇಶಗಳ ನಾಯಕರು ಮೊದಲ ಬಾರಿಗೆ ಮುಖಾಮುಖಿಯಾಗಿ ಉನ್ನತ ಮಟ್ಟದ ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ.

Chinese foreign minister Wang Yi
ಚೀನಾ ವಿದೇಶಾಂಗ ಸಚಿವ ವಾಂಗ್​ ಯಿ.
author img

By

Published : Mar 17, 2022, 12:29 PM IST

ನವದೆಹಲಿ: ಚೀನಾದ ವಿದೇಶಾಂಗ ಸಚಿವ ವಾಂಗ್​ ಯಿ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದು, ವಾಂಗ್​​ ಯೀ ಭಾರತಕ್ಕೆ ಭೇಟಿ ನೀಡುವ ಕುರಿತು ಸಿದ್ಧತೆಗಳು ನಡೆಯುತ್ತಿವೆ ಎಂಬುದಾಗಿ ತಿಳಿದು ಬಂದಿದೆ. ಆದರೆ, ದೆಹಲಿಯಲ್ಲಿರುವ ಚೀನಾದ ರಾಯಭಾರ ಕಚೇರಿ ಅಥವಾ ವಿದೇಶಾಂಗ ವ್ಯವಹಾರಗಳ ಸಚಿವಾಲಯು ಈ ಭೇಟಿಯ ಕುರಿತು ಅಧಿಕೃತವಾಗಿ ದೃಢಪಡಿಸಿಲ್ಲ.

2020ರ ಮೇ ತಿಂಗಳಲ್ಲಿ ಸಂಭವಿಸಿದ ಗಲ್ವಾನ್ ಘರ್ಷಣೆ ಗಡಿ ವಿವಾದ ಪ್ರಾರಂಭವಾದ ನಂತರ ಎರಡೂ ದೇಶಗಳ ನಾಯಕರು ಮೊದಲ ಬಾರಿಗೆ ಮುಖಾಮುಖಿಯಾಗಿ ಉನ್ನತ ಮಟ್ಟದ ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ.

ಗಲ್ವಾನ್​ ಘರ್ಷಣೆಯ ನಂತರ ಸ್ಥಗಿತಗೊಂಡಿರುವ ಭಾರತ ಹಾಗೂ ಚೀನಾದ ದೈಹಿಕ ಭೇಟಿಯನ್ನು ಮತ್ತೆ ಪ್ರಾರಂಭಿಸುವುದು ಮತ್ತು ಈ ವರ್ಷದ ಕೊನೆಯಲ್ಲಿ ಬೀಜಿಂಗ್​ನಲ್ಲಿ ನಡೆಯಲಿರುವ ಬ್ರಿಕ್ಸ್​ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವ ಪ್ರಮುಖ ಉದ್ದೇಶ ಇಟ್ಟುಕೊಂಡು ವಾಂಗ್​ ಯೀ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.

ಗಲ್ವಾನ್ ಕಣಿವೆ ಕಾಳಗದ ಬಳಿಕ ಹಲವು ಸುತ್ತಿನ ಮಾತುಕತೆ: ಅನೇಕ ಸುತ್ತಿನ ಮಿಲಿಟರಿ ಮತ್ತು ರಾಜತಾಂತ್ರಿಕ ಚರ್ಚೆಗಳು ನಡೆದರೂ, ಭಾರತ-ಚೀನಾದ ಗಡಿ ವಿವಾದ ಸಮಸ್ಯೆ ಇನ್ನೂ ಮುಂದುವರೆದಿದೆ. ಪೂರ್ವ ಲಡಾಖ್‌ನ ಎಲ್ಲ ಘರ್ಷಣಾ ಕೇಂದ್ರಗಳನ್ನು ಸಂಪೂರ್ಣ ಬಿಡುಗಡೆಗೊಳಿಸಲು ಭಾರತ ಕರೆ ನೀಡಿದೆ. ಇದಕ್ಕೂ ಮೊದಲು, ಭಾರತ ಮತ್ತು ಚೀನಾ ನಡುವೆ ಮಾರ್ಚ್​ 11ರಂದು 15ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಭಾರತದ ಕಡೆಯ ಚುಶುಲ್-ಮೊಲ್ಡೊ ಗಡಿಯ ಮೀಟಿಂಗ್​ ಪಾಂಯಿಂಟ್​ನಲ್ಲಿ ನಡೆದಿದೆ.

ಆ ಸಭೆಯಲ್ಲಿ ಭಾರತ ಮತ್ತು ಚೀನಾ, ಪಶ್ಚಿಮ ವಲಯದ ಎಲ್​ಎಸಿ ಉದ್ದಕ್ಕೂ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಒಪ್ಪಿಕೊಂಡಿವೆ ಎಂದು ಭಾರತೀಯ ಸೇನಾ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ಜನವರಿ 12ರಂದು ಪಶ್ಚಿಮ ವಲಯದಲ್ಲಿ ಎಲ್​ಎಸಿ ಹಾಗೂ ಇತರ ಸಮಸ್ಯೆಗಳ ಪರಿಹಾರಕ್ಕಾಗಿ ಉಭಯ ದೇಶಗಳ ನಡುವೆ ನಡೆದ ಹಿಂದಿನ ಸುತ್ತಿನ ಚರ್ಚೆಯನ್ನೇ ಮುಂದುವರೆಸಲು ತೀರ್ಮಾನಿಸಲಾಗಿದೆ.

ಇದನ್ನು ಓದಿ:ರಷ್ಯಾ- ಉಕ್ರೇನ್ ಯುದ್ಧ: ನಮ್ಮೊಂದಿಗೆ ಕೈ ಜೋಡಿಸಿ ಶ್ವೇತಭವನದ ಮನವಿ

ಭಾರತ ಮತ್ತು ಚೀನಾ ಗಡಿ ವಿವಾದದ ಬಿಕ್ಕಟ್ಟನ್ನು ಪರಿಹರಿಸಲು ಪೂರ್ವ ಲಡಾಖ್ ಪ್ರದೇಶದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಕುರಿತು ಎರಡೂ ದೇಶಗಳು ಮಾತುಕತೆ ನಡೆಸುತ್ತಿವೆ. ಇಲ್ಲಿಯವರೆಗೆ ನಡೆದ ಮಾತುಕತೆಗಳು ಪಾಂಗೋಂಗ್​ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆ, ಗಲ್ವಾನ್ ಮತ್ತು ಗೋಗ್ರಾ ಹಾಟ್ ಸ್ಪ್ರಿಂಗ್ ಪ್ರದೇಶಗಳ ನಿರ್ಣಯಗಳಿಗಷ್ಟೇ ಸಹಕಾರಿಯಾಗಿದೆ.

ಮೂಲಗಳ ಪ್ರಕಾರ, ಸದ್ಯಕ್ಕೆ ಘರ್ಷಣಾ ಪ್ರದೇಶಗಳಲ್ಲಿ ಸಮತೋಲನದ ನಿರ್ಣಯ ಹಾಗೂ ಪರಸ್ಪರ ಸ್ವೀಕಾರಾರ್ಹ ಪರಿಹಾರವನ್ನು ಕಂಡುಕೊಳ್ಳಲು ಉಭಯ ದೇಶಗಳು ಗಮನಹರಿಸುತ್ತಿವೆ. ಭಾರತ - ಚೀನಾ ಸಂಬಂಧ ಅತ್ಯಂತ ಕ್ಲಿಷ್ಟಕರ ಹಂತವನ್ನು ತಲುಪುತ್ತಿದ್ದು, ಗಡಿಯಲ್ಲಿ ಶಾಂತಿ ಕಾಪಾಡುವುದರಿಂದ ಮಾತ್ರ ಉಭಯ ರಾಷ್ಟ್ರಗಳಲ್ಲಿ ಪರಸ್ಪರ ಉತ್ತಮ ಸಂಬಂಧ ಮುಂದುವರಿಸಲು ಸಾಧ್ಯ ಎಂಬುದನ್ನು ಭಾರತ ಬೀಜಿಂಗ್​ಗೆ ಮನದಟ್ಟು ಮಾಡಿಕೊಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.