ETV Bharat / bharat

ಜಮ್ಮು ಕಾಶ್ಮೀರದಲ್ಲಿ ದೇಶದ ಮೊದಲ 'ಲಿಥಿಯಂ' ನಿಕ್ಷೇಪ ಪತ್ತೆ - ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ

ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ 5.9 ಮಿಲಿಯನ್ ಟನ್ ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿವೆ.

Lithium deposits
'ಲಿಥಿಯಂ' ನಿಕ್ಷೇಪ
author img

By

Published : Feb 10, 2023, 9:00 AM IST

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ 5.9 ಮಿಲಿಯನ್ ಟನ್​ಗಳಷ್ಟು ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿವೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ. ಲಿಥಿಯಂ ಒಂದು ನಾನ್-ಫೆರಸ್ ಲೋಹವಾಗಿದೆ. ಇದು ಎಲೆಕ್ಟ್ರಿಕ್ ವಾಹನ(EV) ಬ್ಯಾಟರಿಗಳಲ್ಲಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್-ಹೈಮಾನಾ ಪ್ರದೇಶದಲ್ಲಿ ಭಾರತದ ಭೂವೈಜ್ಞಾನಿಕ ಸಮೀಕ್ಷೆಯು ಮೊದಲ ಬಾರಿಗೆ 5.9 ಮಿಲಿಯನ್ ಟನ್‌ಗಳ ಲಿಥಿಯಂ ಸಂಪನ್ಮೂಲಗಳನ್ನು (G3) ಪತ್ತೆ ಹಚ್ಚಿದೆ ಎಂದು ಗಣಿ ಸಚಿವಾಲಯ ತಿಳಿಸಿದೆ.

ಲಿಥಿಯಂ ಮತ್ತು ಚಿನ್ನ ಸೇರಿದಂತೆ ಇತರೆ 51 ಖನಿಜ ನಿಕ್ಷೇಪಗಳನ್ನು ಆಯಾ ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಲಾಗಿದೆ. ಈ 51 ಖನಿಜ ನಿಕ್ಷೇಪಗಳಲ್ಲಿ, 5 ನಿಕ್ಷೇಪ‌ಗಳು ಚಿನ್ನ ಮತ್ತು ಇತರ ನಿಕ್ಷೇಪ‌ಗಳು ಪೊಟ್ಯಾಶ್, ಮಾಲಿಬ್ಡಿನಮ್, ಮೂಲ ಲೋಹಗಳು ಮುಂತಾದ ಸರಕುಗಳಿಗೆ ಸಂಬಂಧಿಸಿದೆ. ಜಮ್ಮು ಮತ್ತು ಕಾಶ್ಮೀರ (UT), ಆಂಧ್ರಪ್ರದೇಶ, ಛತ್ತೀಸ್‌ಗಢ, ಗುಜರಾತ್, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ತಮಿಳುನಾಡು ಮತ್ತು ತೆಲಂಗಾಣ ಸೇರಿದಂತೆ 11 ರಾಜ್ಯಗಳಲ್ಲಿ ಹರಡಿವೆ.

ಏಳು ಪ್ರಕಟಣೆ ಬಿಡುಗಡೆ: 2018-19 ರಿಂದ ಈವರೆಗೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ(GSI) ನಡೆಸಿದ ಪರಿಶೋಧನೆಯ ಆಧಾರದ ಮೇಲೆ ನಿಕ್ಷೇಪಗಳನ್ನು ಪತ್ತೆ ಮಾಡಲಾಗಿದೆ. ಇವುಗಳಲ್ಲದೆ, ಒಟ್ಟು 7,897 ಮಿಲಿಯನ್ ಟನ್‌ಗಳ ಸಂಪನ್ಮೂಲ ಹೊಂದಿರುವ ಕಲ್ಲಿದ್ದಲು ಮತ್ತು ಲಿಗ್ನೈಟ್‌ನ 17 ವರದಿಗಳನ್ನು ಸಹ ಕಲ್ಲಿದ್ದಲು ಸಚಿವಾಲಯಕ್ಕೆ ಹಸ್ತಾಂತರಿಸಲಾಗಿದೆ. ಜಿಎಸ್‌ಐ ಕಾರ್ಯನಿರ್ವಹಿಸುವ ವಿವಿಧ ವಿಷಯಗಳು ಮತ್ತು ಮಧ್ಯಸ್ಥಿಕೆ ಕ್ಷೇತ್ರಗಳ ಕುರಿತು ಏಳು ಪ್ರಕಟಣೆಗಳನ್ನು ಸಹ ಸಭೆಯಲ್ಲಿ ಬಿಡುಗಡೆ ಮಾಡಲಾಯಿತು.

966 ಕಾರ್ಯಕ್ರಮ: "ಮುಂದಿನ 2023-24 ರ ಪ್ರಸ್ತಾವಿತ ವಾರ್ಷಿಕ ಕಾರ್ಯ ಕ್ರಮವನ್ನು ಸಭೆಯಲ್ಲಿ ಮಂಡಿಸಿ ಚರ್ಚಿಸಲಾಯಿತು. ನಂತರದ ವರ್ಷದಲ್ಲಿ 12 ಸಾಗರ ಖನಿಜ ತನಿಖಾ ಯೋಜನೆಗಳು ಸೇರಿದಂತೆ 318 ಖನಿಜ ಪರಿಶೋಧನಾ ಯೋಜನೆಗಳನ್ನು ಒಳಗೊಂಡಿರುವ 966 ಕಾರ್ಯ ಕ್ರಮಗಳನ್ನು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ನಡೆಸಲಿದೆ" ಎಂದು ಸಚಿವಾಲಯ ತಿಳಿಸಿದೆ.

ಭಾರತದ ಭೂವೈಜ್ಞಾನಿಕ ಸಮೀಕ್ಷೆಯು ಕಾರ್ಯತಂತ್ರ ಮತ್ತು ನಿರ್ಣಾಯಕ ಖನಿಜಗಳ ಮೇಲೆ 115 ಯೋಜನೆಗಳನ್ನು ಮತ್ತು ರಸಗೊಬ್ಬರ ಖನಿಜಗಳ ಮೇಲೆ 16 ಯೋಜನೆಗಳನ್ನು ರೂಪಿಸಿದೆ. "ಜಿಯೋ ಇನ್ಫರ್ಮ್ಯಾಟಿಕ್ಸ್‌ನಲ್ಲಿ 55 ಕಾರ್ಯಕ್ರಮಗಳು, ಮೂಲಭೂತ ಮತ್ತು ಬಹುಶಿಸ್ತೀಯ ಭೂವಿಜ್ಞಾನಗಳ ಕುರಿತು 140 ಕಾರ್ಯಕ್ರಮಗಳು ಮತ್ತು ತರಬೇತಿ ಮತ್ತು ಸಾಂಸ್ಥಿಕ ಸಾಮರ್ಥ್ಯ ವೃದ್ಧಿಗಾಗಿ 155 ಕಾರ್ಯಕ್ರಮಗಳನ್ನು ಸಹ ತೆಗೆದುಕೊಳ್ಳಲಾಗಿದೆ" ಎಂದು ಗಣಿ ಸಚಿವಾಲಯ ತಿಳಿಸಿದೆ.

1851ರಲ್ಲಿ ಸ್ಥಾಪನೆಯಾದ ಜಿಎಸ್​ಐ: ರೈಲ್ವೆಗೆ ಕಲ್ಲಿದ್ದಲು ನಿಕ್ಷೇಪಗಳನ್ನು ಕಂಡು ಹಿಡಿಯಲು 1851ರಲ್ಲಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI)ನ್ನು ಸ್ಥಾಪಿಸಲಾಯಿತು. ಪ್ರಸುತ್ತ ವರ್ಷಗಳಲ್ಲಿ ಜಿಎಸ್​ಐ ವಿವಿಧ ಕ್ಷೇತ್ರಗಳಲ್ಲಿ ಅಗತ್ಯವಿರುವ ಭೂ-ವಿಜ್ಞಾನದ ಮಾಹಿತಿಯ ಭಂಡಾರವಾಗಿ ಬೆಳೆದಿದೆ. ಅಲ್ಲದೇ ಅಂತಾರಾಷ್ಟ್ರೀಯ ಖ್ಯಾತಿಯ ಭೌಗೋಳಿಕ-ವೈಜ್ಞಾನಿಕ ಸಂಸ್ಥೆಯ ಸ್ಥಾನಮಾನವನ್ನು ಸಹ ಪಡೆದುಕೊಂಡಿದೆ.

ಮುಖ್ಯ ಕಾರ್ಯಗಳು: ರಾಷ್ಟ್ರೀಯ ಭೂವೈಜ್ಞಾನಿಕ ಮಾಹಿತಿ ಮತ್ತು ಖನಿಜ ಸಂಪನ್ಮೂಲ ಮೌಲ್ಯಮಾಪನ ಹಾಗೂ ನವೀಕರಿಸುವುದು ಇದರ ಮುಖ್ಯ ಕಾರ್ಯ. ಈ ಉದ್ದೇಶಗಳನ್ನು ಭೂ ಸಮೀಕ್ಷೆಗಳು, ವಾಯುಗಾಮಿ ಮತ್ತು ಸಾಗರ ಸಮೀಕ್ಷೆಗಳು, ಖನಿಜ ಶೋಧನೆ ಮತ್ತು ತನಿಖೆಗಳು, ಭೂ-ತಾಂತ್ರಿಕ, ಭೂ-ಪರಿಸರ ಮತ್ತು ನೈಸರ್ಗಿಕ ಅಪಾಯಗಳ ಅಧ್ಯಯನಗಳು, ಗ್ಲೇಶಿಯಾಲಜಿ(ಹಿಮನದಿ ಅಧ್ಯಯನ), ಸಿಸ್ಮೋ-ಟೆಕ್ಟೋನಿಕ್ ಅಧ್ಯಯನ ಮತ್ತು ಮೂಲಭೂತ ಸಂಶೋಧನೆಗಳ ಮೂಲಕ ಸಾಧಿಸಲಾಗುತ್ತದೆ.

ಜಿಎಸ್​ಐನ ಮುಖ್ಯ ಕಾರ್ಯ ವಸ್ತುನಿಷ್ಠ, ನಿಷ್ಪಕ್ಷಪಾತ ಮತ್ತು ನವೀಕೃತ ಭೌಗೋಳಿಕ ಪರಿಣತಿ ಮತ್ತು ಎಲ್ಲಾ ರೀತಿಯ ಭೂವೈಜ್ಞಾನಿಕ ಮಾಹಿತಿಯನ್ನು ಒದಗಿಸುವುದನ್ನು ಒಳಗೊಂಡಿರುತ್ತದೆ. ನೀತಿ-ನಿರ್ಮಾಣ ನಿರ್ಧಾರಗಳು ಮತ್ತು ವಾಣಿಜ್ಯ ಮತ್ತು ಸಾಮಾಜಿಕ-ಆರ್ಥಿಕ ಅಗತ್ಯಗಳ ಮೇಲೆ ಕೇಂದ್ರೀಕರಿಸುತ್ತದೆ.

ಇದನ್ನೂ ಓದಿ: ಲೀಥಿಯಂ ನಿಕ್ಷೇಪ ಇದೆ ಎಂದ ವಿಜ್ಞಾನಿಗಳು: ಜಾಗತಿಕ ಖ್ಯಾತಿ ಪಡೆಯಲಿದೆಯೇ ಮಂಡ್ಯ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.