ETV Bharat / bharat

ಇದೇ ಮೊದಲು.. ವಿದೇಶಿ ನೆಲದ ವಾಯು ಪಡೆ ಸಮರಾಭ್ಯಾಸಕ್ಕೆ ಭಾರತೀಯ ಮಹಿಳಾ ಪೈಲಟ್​ - ಸುಖೋಯ್ 30 ಎಂಕೆಐ

ಜಪಾನ್​ನಲ್ಲಿ ಭಾರತ ಮತ್ತು ಜಪಾನ್​ ಜಂಟಿ ವೀರ್ ಗಾರ್ಡಿಯನ್ - 2023 ಸಮರಾಭ್ಯಾಸವು ಜನವರಿ 12ರಿಂದ 26ರವರೆಗೆ ನಡೆಯಲಿದೆ. ಇದರಲ್ಲಿ ಭಾರತೀಯ ತುಕಡಿಯೊಂದಿಗೆ ಸುಖೋಯ್ 30 ಎಂಕೆಐ ಯುದ್ಧ ವಿಮಾನದ ಪೈಲಟ್ ಅವ್ನಿ ಚತುರ್ವೇದಿ ಪಾಲ್ಗೊಳ್ಳಲಿದ್ದಾರೆ.

in-a-first-iaf-woman-fighter-pilot-to-participate-in-aerial-wargames-outside-country-in-japan
ಇದೇ ಮೊದಲು... ವಿದೇಶಿ ನೆಲದ ವಾಯು ಪಡೆ ಸಮರಾಭ್ಯಾಸಕ್ಕೆ ಭಾರತೀಯ ಮಹಿಳಾ ಪೈಲಟ್​
author img

By

Published : Jan 7, 2023, 4:32 PM IST

ಜೋಧಪುರ (ರಾಜಸ್ಥಾನ): ಭಾರತೀಯ ವಾಯು ಪಡೆಯ ಯುದ್ಧ ವಿಮಾನದ ಮಹಿಳಾ ಪೈಲಟ್​ ಹೊಸ ಅಧ್ಯಾಯ ಬರೆಯಲು ಸಜ್ಜಾಗಿದ್ದಾರೆ. ಇದೇ ಮೊದಲ ಬಾರಿಗೆ ದೇಶದ ಹೊರಗೆ ನಡೆಯಲಿರುವ ಯುದ್ಧ ವಿಮಾನಗಳ ಸಮರಾಭ್ಯಾಸದಲ್ಲಿ ಮಹಿಳಾ ಪೈಲಟ್ ಅವ್ನಿ ಚತುರ್ವೇದಿ ಭಾಗವಹಿಸಿದ್ದಾರೆ. ಇದಕ್ಕಾಗಿ ಅವರು ಭಾರತೀಯ ತುಕಡಿಯೊಂದಿಗೆ ನಾಳೆ ಜಪಾನ್‌ಗೆ ತೆರಳಲಿದ್ದಾರೆ. ಸ್ಕ್ವಾಡ್ರನ್ ಲೀಡರ್ ಆಗಿರುವ ಅವ್ನಿ ಚತುರ್ವೇದಿ ಸುಖೋಯ್ 30 ಎಂಕೆಐ (Su-30MKi) ಯುದ್ಧ ವಿಮಾನದ ಪೈಲಟ್ ಆಗಿದ್ದಾರೆ.

  • An IAF contingent will depart tomorrow for Hyakuri Air Base, Japan for the maiden 'Exercise Veer Guardian 2023' to be held with Japan Air Self Defence Force from 12th to 26th Jan 2023. IAF will participate with four Su-30 MKI, two C-17 Globemasters & an IL-78 tanker. pic.twitter.com/UiMGSKXPpk

    — ANI (@ANI) January 7, 2023 " class="align-text-top noRightClick twitterSection" data=" ">

ಭಾರತದ ಯುದ್ಧ ವಿಮಾನಗಳ ಮೊದಲ ಮಹಿಳಾ ಪೈಲಟ್​​ಗಳೆಂದು ಅವ್ನಿ ಚತುರ್ವೇದಿ, ಭಾವನಾ ಕಾಂತ್ ಹಾಗೂ ಮೋಹನಾ ಸಿಂಗ್​ ಸೇರಿದಂತೆ ಮೂವರು ಖ್ಯಾತರಾಗಿದ್ದಾರೆ. ತವರು ನೆಲದಲ್ಲಿ ನಡೆದ ಯುದ್ಧ ವಿಮಾನಗಳ ಸಮರಾಭ್ಯಾಸದಲ್ಲಿ ಈ ಮಹಿಳಾ ಪೈಲಟ್​ಗಳು ಪಾಲ್ಗೊಂಡು ಈಗಾಗಲೇ ತಮ್ಮ ಸಾಮರ್ಥ್ಯ ತೋರಿದ್ದಾರೆ. ಭಾರತಕ್ಕೆ ಬಂದಿದ್ದ ಫ್ರೆಂಚ್ ವಾಯುಪಡೆ ಸೇರಿದಂತೆ ಇತರ ವಿದೇಶಿ ತುಕಡಿಗಳೊಂದಿಗೆ ಅವ್ನಿ ಚತುರ್ವೇದಿ ಮತ್ತು ಭಾವನಾ ಕಾಂತ್​ ಭಾಗವಹಿಸಿ ಗಮನ ಸೆಳೆದಿದ್ದರು.

ಇದನ್ನೂ ಓದಿ: ಭಾರತದ ಮೊದಲ ಮುಸ್ಲಿಂ ಮಹಿಳಾ ಫೈಟರ್​ ಪೈಲಟ್​ ಈ ಸಾನಿಯಾ ಮಿರ್ಜಾ..

ಭಾರತ ಮತ್ತು ಜಪಾನ್​ನ ಜಂಟಿ ವೀರ್ ಗಾರ್ಡಿಯನ್ - 2023 ಸಮರಾಭ್ಯಾಸವು ಜಪಾನ್​ನಲ್ಲಿ ಜನವರಿ 12ರಿಂದ 26ರವರೆಗೆ ನಡೆಯಲಿದೆ. ಏರ್ ಸೆಲ್ಫ್ ಡಿಫೆನ್ಸ್ ಫೋರ್ಸ್‌ ಮತ್ತು ಭಾರತೀಯ ವಾಯು ಪಡೆಯ ತುಕಡಿಗಳು ಇದರಲ್ಲಿ ಭಾಗವಹಿಸಲಿವೆ. ಒಮಿಟಮಾದಲ್ಲಿನ ಹೈಕುರಿ ಮತ್ತು ಅದರ ಸುತ್ತಮುತ್ತಲಿನ ವಾಯು ನೆಲೆ ಮತ್ತು ಸಯಾಮಾದಲ್ಲಿರುವ ಇರುಮಾ ವಾಯು ನೆಲೆಯಲ್ಲಿ ಈ ಸಮರಾಭ್ಯಾಸ ನಡೆಯಲಿದೆ. ಭಾರತದ ನಾಲ್ಕು ಸು-30 ಎಂಕೆಐ, ಎರಡು ಸಿ-17 ಗ್ಲೋಬ್‌ಮಾಸ್ಟರ್‌ಗಳು ಮತ್ತು ಐಎಲ್​ 8 ಟ್ಯಾಂಕರ್‌ ಯುದ್ಧ ವಿಮಾನಗಳು ಭಾಗವಹಿಸುತ್ತಿದ್ದು, ಸು-30 ಎಂಕೆಐ ಯುದ್ಧ ವಿಮಾನದ ಪೈಲಟ್ ಅವ್ನಿ ಚತುರ್ವೇದಿ ಪಾಲ್ಗೊಳ್ಳಲಿದ್ದಾರೆ.

  • #WATCH | Jodhpur: IAF fighter pilots Group Capt Arpit Kala, Sqn Leaders Bhavna Kanth & Mukul Bawa demonstrate Su-30MKI fighter jet capabilities. For the first time, a woman fighter pilot, who flies Su-30MKI, Sqn Leader Avni Chaturvedi, will be joining an int'l wargame abroad. pic.twitter.com/WpnCviMxzz

ಸು-30 ಎಂಕೆಐ ಯುದ್ಧ ವಿಮಾನದ ಸಾಮರ್ಥ್ಯ ಪ್ರದರ್ಶನ: ಇಂದು ರಾಜಸ್ಥಾನದ ಜೋಧಪುರದಲ್ಲಿ ಸುಖೋಯ್ ಯುದ್ಧ ವಿಮಾನಗಳ ಅಭ್ಯಾಸ ನಡೆಯಿತು. ಇದರಲ್ಲಿ ವಾಯು ಪಡೆಗಳ ಪೈಲಟ್‌ಗಳ ತಂಡದ ಕ್ಯಾಪ್ಟನ್ ಅರ್ಪಿತ್ ಕಲಾ, ಸ್ಕ್ವಾಡ್ರನ್ ನಾಯಕರಾದ ಭಾವನಾ ಕಾಂತ್ ಮತ್ತು ಮುಕುಲ್ ಬಾವಾ ಅವರು ಸುಖೋಯ್ 30 ಎಂಕೆಐ ಫೈಟರ್ ಜೆಟ್ ಸಾಮರ್ಥ್ಯಗಳನ್ನು ಪ್ರದರ್ಶಿಸಿದರು.

ನಂತರ ಮಾತನಾಡಿದ ಅವ್ನಿ ಚತುರ್ವೇದಿ ಅವರ ಬ್ಯಾಚ್​​ಮೇಟ್​ ಆಗಿರುವ ಭಾವನಾ ಕಾಂತ್, ಸು-30ಎಂಕೆಐ ಬಹುಪಾತ್ರದ ಯುದ್ಧ ವಿಮಾನವಾಗಿದೆ. ಭೂ ಮತ್ತು ವಾಯುವಿನಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆಗಳನ್ನು ಈ ಯುದ್ಧ ವಿಮಾನ ನಡೆಸಬಲ್ಲದು. ಇದು ಹೆಚ್ಚಿನ ವೇಗ ಮತ್ತು ಕಡಿಮೆ ವೇಗದಲ್ಲೂ ವಿಶೇಷ ಕುಶಲತೆ ಹೊಂದಿದೆ. ಬಹು ಇಂಧನ ತುಂಬುವಿಕೆಯಿಂದಾಗಿ ಇದು ದೀರ್ಘ ಶ್ರೇಣಿಯ ಕಾರ್ಯಾಚರಣೆಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದರು.

ಇದೇ ವೇಳೆ, ಗ್ರೂಪ್ ಕ್ಯಾಪ್ಟನ್ ಅರ್ಪಿತ್ ಕಲಾ ಮಾತನಾಡಿ, ಭಾರತೀಯ ಸು-30ಎಂಕೆಐ ಯುದ್ಧ ವಿಮಾನವು ಅನನ್ಯವಾಗಿದೆ. ಪ್ರಪಂಚದಾದ್ಯಂತದ ವಿವಿಧ ಶಸ್ತ್ರಾಸ್ತ್ರಗಳು, ಸಂವೇದಕಗಳು ಮತ್ತು ಏವಿಯಾನಿಕ್ಸ್‌ಗಳನ್ನು ಈ ಜೆಟ್​ ಒಳಗೊಂಡಿದೆ. ಅದರ ದೀರ್ಘ ಶ್ರೇಣಿಯ ವಾಹಕಗಳು (ಕ್ಷಿಪಣಿಗಳು) ಭೂ ಮತ್ತು ವಾಯುವಿನಲ್ಲೂ ಕಾರ್ಯಾಚರಣೆ ನಡೆಸುತ್ತವೆ. ಇದು ವಿಶ್ವದ ಅತ್ಯುತ್ತಮ ವಿಮಾನಗಳಲ್ಲಿ ಒಂದಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ವಾಯುಪಡೆಯಲ್ಲಿ ಲೇಡಿ ಪೈಲಟ್​ ಪಾರಮ್ಯ​: ಫೈಟರ್ ಜೆಟ್ ಹಾರಿಸೋದು ಇವರೇ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.