ETV Bharat / bharat

ಮಾಸ್ಕ್​ ಹಾಕದವರಿಗೆ 1,000 ರೂ. ದಂಡ ಹಾಕಿ: ತೆಲಂಗಾಣ ಸಿಎಂ ಆದೇಶ - telangana cm K Chandrashekar Rao

ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡ ಬಳಿಕ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಿಎಂ ಕೆಸಿಆರ್​ ರಾಜ್ಯದಲ್ಲಿನ ಕೊರೊನಾ ಪ್ರಕರಣಗಳ ಕುರಿತು ಸಭೆ ನಡೆಸಿದರು. ಈ ವೇಳೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Telangana CM
ಮಾಸ್ಕ್​ ಹಾಕದವರಿಗೆ 1000 ರೂ. ದಂಡ
author img

By

Published : Apr 9, 2021, 6:43 AM IST

ಹೈದರಾಬಾದ್​​: ಮಾಸ್ಕ್​ ಹಾಕದೇ ಓಡಾಡುವವರಿಗೆ 1,000 ರೂಪಾಯಿ ದಂಡ ವಿಧಿಸಿ ಎಂದು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್​ ರಾವ್​ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಪರೀಕ್ಷೆ​ ಪ್ರಮಾಣ ಹೆಚ್ಚಿಸಬೇಕು. ಎಲ್ಲಾ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್​ ಲಸಿಕೆ ನೀಡಬೇಕು. ಒಂದು ವಾರದಲ್ಲಿ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಪ್ರತಿಯೊಬ್ಬರೂ ಮಾಸ್ಕ್​ ಧರಿಸುವಂತೆ ಕಠಿಣ ನಿಯಮ ಜಾರಿಗೊಳಿಸಿರಿ. ಯಾರು ಮುಖಗವಸು ಧರಿಸದೇ ಓಡಾಡುತ್ತಾರೋ ಅವರಿಗೆ ಒಂದು ಸಾವಿರ ದಂಡ ವಿಧಿಸಬೇಕು. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಡಿಜಿಪಿಯವರು ಪೊಲೀಸ್​ ಇಲಾಖೆಗೆ ನಿರ್ದೇಶಿಸಬೇಕು ಎಂದು ಸಿಎಂ ಸೂಚಿಸಿದರು.

ಇದೇ ವೇಳೆ 45 ವರ್ಷ ವಯಸ್ಸಿನ ಮೇಲ್ಪಟ್ಟ ಎಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳಿ ಎಂದು ಕೆಸಿಆರ್‌ ಮನವಿ ಮಾಡಿದರು.

ಇದನ್ನೂ ಓದಿ: ಜಿಲ್ಲಾಡಳಿತಗಳು ಪ್ರತ್ಯೇಕ ಕೋವಿಡ್​ ಮಾರ್ಗಸೂಚಿ ಹೊರಡಿಸದಂತೆ ರಾಜ್ಯ ಸರ್ಕಾರ ತಾಕೀತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.