ನವದೆಹಲಿ: ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿದರು. ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಕಾರ್ಯಾಲಯ ಟ್ವೀಟ್ ಮೂಲಕ ಮಾಹಿತಿ ಹೊರಹಾಕಿದೆ.
-
Chief Economist of the IMF, @GitaGopinath called on PM @narendramodi. pic.twitter.com/2B30CMvjja
— PMO India (@PMOIndia) December 15, 2021 " class="align-text-top noRightClick twitterSection" data="
">Chief Economist of the IMF, @GitaGopinath called on PM @narendramodi. pic.twitter.com/2B30CMvjja
— PMO India (@PMOIndia) December 15, 2021Chief Economist of the IMF, @GitaGopinath called on PM @narendramodi. pic.twitter.com/2B30CMvjja
— PMO India (@PMOIndia) December 15, 2021
ಮುಂದಿನ ವರ್ಷದ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿ ಗೀತಾ ಗೋಪಿನಾಥ್ ಅಧಿಕಾರ ವಹಿಸಿಕೊಳ್ಳಲಿದ್ದು, ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿ, ಕೆಲ ನಿಮಿಷಗಳ ಕಾಲ ಚರ್ಚೆ ನಡೆಸಿದರು.
ಕಳೆದ ಮೂರು ವರ್ಷಗಳಿಂದ ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ಕಾರ್ಯನಿರ್ವಹಿಸುತ್ತಿರುವ ಗೀತಾ ಗೋಪಿನಾಥ್, 2022ರ ಜನವರಿಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರೊಫೇಸರ್ ಹುದ್ದೆಗೆ ಮರಳಲಿದ್ದಾರೆ ಎನ್ನಲಾಗಿತ್ತು. ಆದರೆ IMFನ ಮೊದಲ ಉಪವ್ಯವಸ್ಥಾಪಕ ನಿರ್ದೇಶಕ ಜೆಪ್ರಿ ಒಕಾಮೊಟೊ ಅವರು ಮುಂದಿನ ವರ್ಷ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿರುವ ಕಾರಣ ಅವರ ಸ್ಥಾನಕ್ಕೆ ಗೀತಾ ಗೋಪಿನಾಥನ್ ನೇಮಕಗೊಳ್ಳಲಿದ್ದಾರೆ.
ಇದನ್ನೂ ಓದಿರಿ: ಗೌರಿಬಿದನೂರಿನ ಸೈನಿಕನೀಗ ಲೆಫ್ಟಿನೆಂಟ್ ಕರ್ನಲ್... 23 ವರ್ಷದ ಸೇವೆಗೆ ಒಲಿದು ಬಂತು ಭಾಗ್ಯ
ಐಎಂಎಫ್ನಂತಹ ಪ್ರತಿಷ್ಠಿತ ಹಣಕಾಸು ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿರುವ ಗೀತಾ ಗೋಪಿನಾಥ್ ಮೂಲತಃ ಕರ್ನಾಟಕದ ಮೈಸೂರುನವರು ಎಂಬುದು ಗಮನಾರ್ಹ ವಿಚಾರ.