ಉತ್ತರ 24 ಪರಗಣ (ಪಶ್ಚಿಮ ಬಂಗಾಳ): ಭಟ್ಪಾರದ ಮದ್ರಾಲ್ ಜಾಯ್‌ಚಂದಿತಾಲಾ ಪ್ರದೇಶದಲ್ಲಿ ಬಾಂಬ್, ಬಾಂಬ್ ತಯಾರಿಸುವ ಉಪಕರಣ, ಗನ್ ಪೌಡರ್ ಮತ್ತು ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಚುನಾವಣಾ ಆಯೋಗವು ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪಶ್ಚಿಮ ಬಂಗಾಳದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಿದೆ. ಉತ್ತರ 24 ಪರಗಣದ ಭಟ್ಪಾರ ಕ್ಷೇತ್ರದ ಮತದಾನ ಏಪ್ರಿಲ್ 22ರಂದು ಆರನೇ ಹಂತದಲ್ಲಿ ನಡೆಯಲಿದೆ.
ಓದಿ : ದೀದಿಗೆ ಶಾಕ್ ನೀಡಿದ ಆಯೋಗ.. 24 ಗಂಟೆಗಳ ಕಾಲ ಚುನಾವಣಾ ರ‍್ಯಾಲಿ ನಡೆಸದಂತೆ ನಿರ್ಬಂಧ!
ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸಂದರ್ಭ ಈ ಹಿಂದೆಯೂ ಹಿಂಸಾಚಾರಗಳು ನಡೆದಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಚುನಾವಣಾ ಆಯೋಗ ಎಂಟು ಹಂತಗಳಲ್ಲಿ ಚುನಾವಣೆ ನಡೆಸುತ್ತಿದೆ.
ಎಂಟು ಹಂತದ ಚುನಾವಣೆಯ ಮೊದಲ ನಾಲ್ಕು ಹಂತಗಳು ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6 ಮತ್ತು ಏಪ್ರಿಲ್ 10 ರಂದು ನಡೆದಿವೆ. ಮೇ 2 ರಂದು ಮತ ಎಣಿಕೆ ನಡೆಯಲಿದೆ.