ETV Bharat / bharat

ಕ್ಷಯ, ಕೋವಿಡ್​ ನಿರ್ಮೂಲನೆಗೆ IIT ಮದ್ರಾಸ್​​ ಅಭಿವೃದ್ಧಿಪಡಿಸುತ್ತಿದೆ Air Sanitization - Air Sanitization

ಕೋವಿಡ್​, ಕ್ಷಯ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಭಾರತದ ಎರಡು ಸಂಸ್ಥೆಗಳು ಯೋಜನೆಯೊಂದನ್ನು ಅಭಿವೃದ್ಧಿಪಡಿಸುತ್ತಿವೆ.

ರಾಯಲ್​ ಅಕಾಡೆಮಿಕ್ ಎಂಜಿನಿಯರಿಂಗ್
ರಾಯಲ್​ ಅಕಾಡೆಮಿಕ್ ಎಂಜಿನಿಯರಿಂಗ್
author img

By

Published : Aug 12, 2021, 4:38 PM IST

ಚೆನ್ನೈ: ವಿಐಟಿ (ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ) ಚೆನ್ನೈ, ಲಂಡನ್ ಕ್ವೀನ್ ಮೇರಿ ಯೂನಿವರ್ಸಿಟಿ ಮತ್ತು ಮ್ಯಾಗ್ನೆಟೋ ಕ್ಲೀನ್‌ಟೆಕ್ ಸಹಯೋಗದೊಂದಿಗೆ ಐಐಟಿ ಮದ್ರಾಸ್ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಕೋವಿಡ್ ಮತ್ತು ಕ್ಷಯರೋಗ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಯೋ ಏರೋಸಾಲ್​ ಪ್ರೊಟೆಕ್ಷನ್​ ಸಿಸ್ಟಮ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ.

ಐಐಟಿ ಹಾಗೂ ವಿಐಟಿಯ ಜಂಟಿ ಸಂಶೋಧನೆಯಲ್ಲಿ ಕಂಡು ಹಿಡಿಯಲಾಗುತ್ತಿರುವ ಬಯೋ ಏರೋಸಾಲ್​ ಪ್ರೊಟೆಕ್ಷನ್​ ಸಿಸ್ಟಮ್(Air Sanitisation) ನಿಂದಾಗಿ ಕಚೇರಿಗಳು, ಆಸ್ಪತ್ರೆಗಳಂತಹ ಸೀಮಿತ ಒಳಾಂಗಣದಲ್ಲಿ ಗಾಳಿಯಿಂದ ಹರಡುವ ಸಾಂಕ್ರಾಮಿಕ ರೋಗಗಳನ್ನು ನಿಗ್ರಹಿಸಲು ಸಹಕಾರಿಯಾಗುತ್ತದೆ.

ಭಾರತದಲ್ಲಿ 2020ರಲ್ಲಿ ಕಾಣಿಸಿಕೊಂಡ ಕೋವಿಡ್ 4 ಲಕ್ಷಕ್ಕೂ ಅಧಿಕ ಜೀವಗಳನ್ನು ಬಲಿ ಪಡೆದಿದೆ. 2019 ರಲ್ಲಿ ಕ್ಷಯರೋಗದಿಂದಾಗಿ 4.45 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಜಂಟಿ ಸಂಶೋಧನೆ ಯಶಸ್ವಿಯಾದರೆ, ಭಾರತದ 10 ಕೋಟಿ ಜನರಿಗೆ ಅನುಕೂಲವಾಗಲಿದೆ.

ನೇರಳಾತೀತ - ಸಿ ವಿಕಿರಣಗಳ ಸಹಾಯದಿಂದ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಈ ತಂತ್ರಜ್ಞಾನ ಪ್ರಮುಖವಾಗಿದೆ. ಈ ಸಂಶೋಧನೆ ಬಗ್ಗೆ ಸಂಯೋಜನ ಅಬ್ದುಲ್ ಸಮದ್​​ ವಿವರಿಸಿದ್ದು, ಐಐಟಿ ಮದ್ರಾಸ್​​ ಯಾವಾಗಲೂ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಸಂಶೋಧನೆ ಮಾಡುತ್ತದೆ. ಮಾರ್ಚ್ 2020 ರಲ್ಲಿ ಕೋವಿಡ್ ಪತ್ತೆಯಾಗಿ, ಲಾಕ್​ಡೌನ್​ ಆದ ಅಂದಿನಿಂದ ನಾವೆಲ್ಲರೂ ಭಯಭೀತರಾಗಿದ್ದೆವು.

ವೈರಸ್​ನಿಂದ ಬಚಾವ್​ ಆಗುವುದು ಹೇಗೆ ಎಂದು ಚಿಂತಿಸುತ್ತಿದ್ದೆವು. ಅದೇ ಸಮಯದಲ್ಲಿ ಇಂಗ್ಲೆಂಡ್​ನ ರಾಯಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್, ಉದ್ಯಮಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಸಹಕಾರಿ ಕೆಲಸಗಳಿಗೆ ಸಂಶೋಧನಾ ಧನಸಹಾಯ ಘೋಷಿಸಿತು. ನಾವು ತಕ್ಷಣವೇ ಬಯೋ ಏರೋಸಾಲ್​ ಪ್ರೊಟೆಕ್ಷನ್​ ಸಿಸ್ಟಮ್ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಂಡೆವು ಎಂದು ತಿಳಿಸಿದರು.

Air Sanitization
ರಾಯಲ್​ ಅಕಾಡೆಮಿಕ್ ಎಂಜಿನಿಯರಿಂಗ್

ಮುಂದುವರಿದು ಮಾತನಾಡಿದ ಅವರು, ಆತ್ಮನಿರ್ಭರ ಭಾರತ ಮತ್ತು ಸ್ಟಾರ್ಟ್ ಅಪ್ ಇಂಡಿಯಾ ಕಾರ್ಯಕ್ರಮಕ್ಕನುಗುಣವಾಗಿ ಜಂಟಿ ಒಕ್ಕೂಟವು ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

ವಿಐಟಿಯ ಸ್ಕೂಲ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್​ನ ಪ್ರಾಧ್ಯಾಪಕರಾದ ಪ್ರೊ. ನಿತ್ಯ ವೆಂಕಟೇಶನ್ ಈ ಕುರಿತು ಮತ್ತಷ್ಟು ಮಾಹಿತಿ ನೀಡಿದ್ದಾರೆ. ಈ ಸಂಶೋಧನೆಗೆ ಸಂಬಂಧಿಸಿದಂತೆ, ಭಾರತ ಹಾಗೂ ಇಂಗ್ಲೆಂಡ್ ಸಂಶೋಧಕರು ಕೆಲ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಿದ್ದಾರೆ, ಈ ಸಾಧನವನ್ನು ಹೇಗೆ ಬಳಸುವುದು ಎಂಬುದರ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಈ ಸಾಧನ ಬಳಸಲು ಯೋಜಿಸುತ್ತೇವೆ ಎಂದಿದ್ದಾರೆ.

ಈ ಯೋಜನೆಯು ಇಂಗ್ಲೆಂಡ್​ನ ರಾಯಲ್ ಅಕಾಡೆಮಿ ಇಂಜಿನಿಯರಿಂಗ್​ ಪಾಲುದಾರಿಕೆ ಹೊಂದಿದೆ. 82,32,518.20 (£ 80,000) ರೂಪಾಯಿ ವೆಚ್ಚದಲ್ಲಿ ಈ ಯೋಜನೆ ಆರಂಭವಾಗಿದೆ. ಇತರ ಸಂಸ್ಥೆಗಳು ಕೂಡ ಈ ಯೋಜನೆಗೆ ನೆರವು ನೀಡಲಿವೆ.

ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾಲಯದ ಕೌಂಟರ್​ಪಾರ್ಟ್​ ನಿರ್ದೇಶಕ ಡಾ.ಎಲ್ಡಾಡ್ ಅವಿಟಲ್ಲ ಮಾತನಾಡಿ, ಕೋವಿಡ್ ರೂಪಾಂತರ, ಕ್ಷಯ ತಡೆಗಟ್ಟಲು ತಂತ್ರಜ್ಞಾನ ಮಾರ್ಗ ಕಂಡುಕೊಳ್ಳಬೇಕು. ನಾವು ಸಂಶೋಧಿಸುತ್ತಿರುವ ಈ ಸಾಧನ ಒಳಾಂಗಣದಲ್ಲಿ ಸೋಂಕು ನಿಗ್ರಹಿಸಲು ಸಹಾಯ ಮಾಡುತ್ತದೆ ಎಂದು ವಿವರಿಸಿದ್ದಾರೆ. ಈ ಯೋಜನೆಗೆ ಲೀಡ್ಸ್ ಬೆಕೆಟ್ ಯೂನಿವರ್ಸಿಟಿಯ ಎಮಿರಿಟಸ್ ಪ್ರೊಫೆಸರ್ ಪ್ರೊ.ಕ್ಲೈವ್ ಬೇಗ್ಸ್ ಸಲಹೆಗಾರರಾಗಿದ್ದಾರೆ

ಯೋಜನೆಯಲ್ಲಿ ಕೆಲಸ ಮಾಡುವ ವಿದ್ಯಾರ್ಥಿಗಳು/ಸಂಶೋಧಕರು

  • ಶ್ರೀ ಸಾಕೇತ್ ಕಾಪ್ಸೆ (ಸಂಶೋಧನಾ ಸಹವರ್ತಿ, ವಿಐಟಿ ವಿಶ್ವವಿದ್ಯಾಲಯ, ಚೆನ್ನೈ)
  • ಶ್ರೀ. ರಿಷವ್ ರಾಜ್ (MS, Fluid machines, IIT Madras)
  • ಶ್ರೀ ಮಹೇಶ್ ಚೌಧರಿ (ಬಿಟೆಕ್, ಐಐಟಿ ಮದ್ರಾಸ್)
  • ಡಾ. ವಾಸಿಂ ರಾಜಾ (ಪೋಸ್ಟ್‌ಡಾಕ್ ಫೆಲೋ, ಐಐಟಿ ಮದ್ರಾಸ್)
  • ಸುಂದರಿ ದೇನಾ ರೆಹಮಾನ್ (MEng, QMUL)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.