ETV Bharat / bharat

ಈ ಮ್ಯಾಜಿಕ್​ ಬಾವಿಯಲ್ಲಿದೆ ಈ ವಿಶೇಷತೆ: ತ್ವರಿತ ನೀರು ಪರುಪೂರ್ಣ ಕಾರ್ಯ ವಿಧಾನಕ್ಕೆ ಮುಂದಾದ ಐಐಟಿ ಮದ್ರಾಸ್

ಪ್ರೊಫೆಸರ್ ವೆಂಕಟರಾಮನ್ ಈ ಸಂಶೋಧನಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬಾವಿಗೆ ಭೇಟಿ ನೀಡಿರುವ ಅವರು ಕ್ಷಿಪ್ರ ರೀಚಾರ್ಜ್ ತಂತ್ರಜ್ಞಾನವನ್ನು ಅಳವಡಿಸಲು ಸಲಹೆ ನೀಡಿದ್ದು, ಇದು ಸ್ಥಳೀಯರಿಗೆ, ವಿಶೇಷವಾಗಿ ರೈತ ಸಮುದಾಯಕ್ಕೆ ಸಹಾಯ ಮಾಡಲಿದೆ.

ತ್ವರಿತ ನೀರು ಪರುಪೂರ್ಣ  ಕಾರ್ಯವಿಧಾನಕ್ಕೆ ಮುಂದಾದ  ಐಐಟಿ ಮದ್ರಾಸ್

author img

By

Published : Feb 18, 2022, 5:07 PM IST

Updated : Feb 18, 2022, 5:12 PM IST

ಚೆನ್ನೈ : ಐಐಟಿ ಮದ್ರಾಸ್‌ನ ಸಂಶೋಧನಾ ತಂಡವು ತಿರುನಲ್ವೇಲಿ ಜಿಲ್ಲೆಯ ತಿಸೈಯಾವಿಲೈ ಪ್ರದೇಶದ ಅಯಂಕುಲಂ ಗ್ರಾಮದ ಬಳಿ ತೆರೆದ ಕೃಷಿ ಬಾವಿಯನ್ನು ಅಧ್ಯಯನ ಮಾಡುವ ಮೂಲಕ ಸಂಯೋಜಿತ ಪ್ರವಾಹ ಮತ್ತು ಬರ ತಗ್ಗಿಸುವಿಕೆಗಾಗಿ ಕ್ಷಿಪ್ರ ಅಂತರ್ಜಲ ಮರುಪೂರಣ ಕಾರ್ಯವಿಧಾನವನ್ನು ಅಳವಡಿಸಲು ಪ್ರಸ್ತಾಪ ಮಾಡಿದೆ.

ಬಾವಿಯು ಹಲವಾರು ವಾರಗಳವರೆಗೆ ಪ್ರತಿ ಸೆಕೆಂಡಿಗೆ 1,500-2,500 ಲೀಟರ್ ನೀರನ್ನು ಉಕ್ಕಿ ಹರಿಯದಂತೆ ಮಾಡಿ ಅದನ್ನು ಹೀರಿಕೊಳ್ಳುತ್ತದೆ ಎಂದು ಐಐಟಿ ಮದ್ರಾಸ್ ಈ ಯೋಜನೆಗೆ ಪ್ರಸ್ತಾವನೆಯನ್ನು ತಿರುನಲ್ವೇಲಿ ಜಿಲ್ಲಾಡಳಿತಕ್ಕೆ ಸಲ್ಲಿಸಿದೆ.

ಪ್ರೊಫೆಸರ್ ವೆಂಕಟರಾಮನ್ ಈ ಸಂಶೋಧನಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬಾವಿಗೆ ಭೇಟಿ ನೀಡಿರುವ ಅವರು ಕ್ಷಿಪ್ರ ರೀಚಾರ್ಜ್ ತಂತ್ರಜ್ಞಾನವನ್ನು ಅಳವಡಿಸಲು ಸಲಹೆ ನೀಡಿದ್ದು, ಇದು ಸ್ಥಳೀಯರಿಗೆ, ವಿಶೇಷವಾಗಿ ರೈತ ಸಮುದಾಯಕ್ಕೆ ಸಹಾಯ ಮಾಡಲಿದೆ.

ಇದನ್ನೂ ಓದಿ: ಶ್ರೀನಗರದಲ್ಲಿ 'ನಿಗೂಢ ಸ್ಫೋಟ'ಕ್ಕೆ ಅಂಗಡಿ ಉಡೀಸ್​.. ಉಗ್ರರಿಂದ ಗ್ರೆನೇಡ್​ ದಾಳಿ ಶಂಕೆ

ಈ ಬಗ್ಗೆ ಮಾತನಾಡಿರುವ ಅವರು, ಈ ಪ್ರದೇಶದ ವಿಶಿಷ್ಟ ಜಲ-ಭೂವಿಜ್ಞಾನವು ಈ ಕ್ಷಿಪ್ರ ಜಲ ರೀಚಾರ್ಜ್‌ನ ಅನುಷ್ಠಾನಕ್ಕೆ ಅನುವು ಮಾಡಿಕೊಡುತ್ತದೆ. ಆದರೆ, ಇತರ ಸ್ಥಳಗಳಲ್ಲಿ ಬಾವಿಗಳು ಹೆಚ್ಚಿನ ನೀರನ್ನು ಉಳಿಸಿಕೊಳ್ಳುವುದಿಲ್ಲ, ಸುಲಭವಾಗಿ ಉಕ್ಕಿ ಹರಿಯುತ್ತವೆ ಎಂದಿದ್ದಾರೆ.

ವಿನಾಶಕಾರಿ ಪ್ರವಾಹಗಳಿಗೆ ಕಾರಣವಾಗುವ ಹೆಚ್ಚುವರಿ ನೀರು ಮತ್ತು ಸಾಗರಕ್ಕೆ ಹರಿಯುವ ಹೆಚ್ಚುವರಿ ನೀರನ್ನು ಶುಷ್ಕ ಬೇಸಿಗೆಯ ತಿಂಗಳುಗಳಲ್ಲಿ ಶೇಖರಣೆಗಾಗಿ ಮತ್ತು ಮರುಪಡೆಯುವಿಕೆಗಾಗಿ ಅಂತರ್ಜಲವನ್ನು ಮರುಪೂರಣ ಮಾಡಲು ಈ ಕಾರ್ಯ ಮಾಡಲಾಗುತ್ತಿದೆ ಎಂದು ಇದೇ ವೇಳೆ ಹೇಳಿದರು.

Last Updated : Feb 18, 2022, 5:12 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.