ETV Bharat / bharat

ಕಾಶಿ ತಮಿಳು ಸಂಗಮದ ಜ್ಞಾನ ಪಾಲುದಾರರಾಗಿ ಐಐಟಿ ಮದ್ರಾಸ್,ಬನಾರಸ್ ಹಿಂದೂ ವಿವಿ

author img

By

Published : Oct 24, 2022, 10:48 AM IST

ಈ ಪ್ರಾಯೋಜಕತ್ವದಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೂಪಿಸಿರುವ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಚೌಕಟ್ಟಿನಡಿ ಈ 'ಕಾಶಿ-ತಮಿಳು ಸಂಗಮ'ವು ನವೆಂಬರ್ 16ರಿಂದ ಡಿಸೆಂಬರ್ 20 ರ ವರೆಗೆ ಕಾಶಿಯಲ್ಲಿ ಜರುಗಲಿದೆ.

IIT Madras university
ಐಐಟಿ ಮದ್ರಾಸ್

ಚೆನ್ನೈ: ತಮಿಳುನಾಡು ಮತ್ತು ವಾರಾಣಸಿ ನಡುವಣ ಸಾಂಸ್ಕೃತಿಕ ಮತ್ತು ನಾಗರಿಕತೆಯ ಬಾಂಧವ್ಯವನ್ನು ಪುನರುಜ್ಜೀವನಗೊಳಿಸಲು ಕೇಂದ್ರ ಸರ್ಕಾರವು 'ಕಾಶಿ-ತಮಿಳು ಸಂಗಮ' ಘೋಷಿಸಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್ (IIT ) ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯಗಳು ಈ ಮೆಗಾ ಈವೆಂಟ್‌ನ ಹೋಸ್ಟಿಂಗ್ ಪಾಲುದಾರುಗಳಾಗಿ ಕಾರ್ಯ ನಿರ್ವಹಿಸಲಿವೆ.

ಈ ಪ್ರಾಯೋಜಕತ್ವದಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೂಪಿಸಿರುವ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಚೌಕಟ್ಟಿನಡಿ ಈ 'ಕಾಶಿ-ತಮಿಳು ಸಂಗಮ'ವು ನವೆಂಬರ್ 16ರಿಂದ ಡಿಸೆಂಬರ್ 20 ರ ವರೆಗೆ ಕಾಶಿಯಲ್ಲಿ ಜರುಗಲಿದೆ.

ವಿವಿಧ ವರ್ಗದ 12 ಗುಂಪು ರಚನೆ : ಶಿಕ್ಷಣ, ಅಧ್ಯಾತ್ಮಿಕತೆ, ತತ್ವಶಾಸ್ತ್ರ, ವ್ಯಾಪಾರ ಮತ್ತು ವಾಣಿಜ್ಯ, ಕೃಷಿ, ಉದ್ಯಮಶೀಲತೆ, ಕಲೆ ಮತ್ತು ಕುಶಲಕರ್ಮಿಗಳು ಸೇರಿದಂತೆ ತಮಿಳುನಾಡಿನ ನಾನಾ ವರ್ಗಗಳ 12 ಗುಂಪು ಕ್ಲಸ್ಟರ್​ಗಳನ್ನು ರಚಿಸಿದ್ದು, 2400 ಕ್ಕೂ ಹೆಚ್ಚು ತಮಿಳುನಾಡಿನ ವಿಶೇಷ ಅತಿಥಿಗಳು ಕಾಶಿಗೆ ಭೇಟಿ ನೀಡಲಿದ್ದಾರೆ.

ಈ ಅತಿಥಿಗಳು 12 ವಿವಿಧ ದಿನಾಂಕಗಳಲ್ಲಿ ಚೆನ್ನೈ, ಕೊಯಮತ್ತೂರು ಮತ್ತು ರಾಮೇಶ್ವರಂನಿಂದ ಹೊರಡುವ ರೈಲುಗಳಿಗೆ ಜೋಡಿಸಲ್ಪಟ್ಟ ವಿಶೇಷ ಕೋಚ್‌ಗಳಲ್ಲಿ ಕಾಶಿಗೆ ಗುಂಪುಗಳಾಗಿ ಪ್ರಯಾಣಿಸುವರು. ಪ್ರತಿ ಗುಂಪು ಪ್ರಾರಂಭದಿಂದ ಹಿಂತಿರುಗುವವರೆಗೆ 8 ದಿನಗಳನ್ನು ಕಳೆಯುತ್ತವೆ. ಈ ವಿವಿಧ ಸ್ತರದ ಅತಿಥಿಗಳು ವಿಚಾರ ಸಂಕಿರಣ, ಉಪನ್ಯಾಸಗಳು ಸೇರಿದಂತೆ ವಿವಿಧ ವಿಷಯಗಳ ಶೈಕ್ಷಣಿಕ ಅಧಿವೇಶನಗಳಲ್ಲಿ ಭಾಗವಹಿಸಿ ಕಾಶಿ ಮತ್ತು ಸುತ್ತಮುತ್ತಲಿನ ಗಂಗಾ ಕ್ರೂಸ್ ಸೇರಿದಂತೆ ಅಯೋಧ್ಯೆ ಸ್ಥಳಗಳಿಗೆ ಭೇಟಿ ನೀಡುವರು.

ಕಾಶಿ ಮತ್ತು ಅಯೋಧ್ಯಾದಲ್ಲಿ ತಮಿಳಿನ ಅತಿಥಿಗಳಿಗೆ ಉಚಿತ ಪ್ರಯಾಣ ಮತ್ತು ವಸತಿ ವ್ಯವಸ್ಥೆ ಇರುತ್ತದೆ. ಆಸಕ್ತರು https://kashitamil.iitm.ac.in/ ವೆಬ್‌ಸೈಟ್ ಮೂಲಕ ನೋಂದಣಿಗೆ ಕೋರಲಾಗಿದೆ.

ಇದನ್ನೂ ಓದಿ:ಕೋಟಿ ಕಂಠ ಗಾಯನಕ್ಕೆ ದೇಶ - ವಿದೇಶಗಳಿಂದ ಉತ್ತಮ ಸ್ಪಂದನೆ : 90 ಲಕ್ಷ ಜನರಿಂದ ನೋಂದಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.