ETV Bharat / bharat

ಮಲೇಷಿಯಾದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಐಐಟಿ ಖರಗ್​ಪುರ್ ಚಿಂತನೆ - ಪಶ್ಚಿಮ ಬಂಗಾಳದ ಐಐಟಿ ಸಂಸ್ಥೆ

ಐಐಟಿಗಳು ಭಾರತದ ಪ್ರತಿಷ್ಟಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳು. ಇಲ್ಲಿ ಶಿಕ್ಷಣ ಪಡೆದ ಅದೆಷ್ಟೋ ವಿದ್ಯಾರ್ಥಿಗಳು ವಿಶೇಷ ಪರಿಣತಿ ಪಡೆದು ದೇಶ, ವಿದೇಶಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದೀಗ ಇದೇ ಐಐಟಿ ವಿದೇಶಗಳಲ್ಲೂ ತನ್ನ ಛಾಪು ಮೂಡಿಸಲು ಸಜ್ಜಾಗಿದೆ. ಹೌದು, ಈ ನಿಟ್ಟಿನಲ್ಲಿ ಐಐಟಿ ಖರಗ್‌ಪುರ್ ಮಹತ್ವದ ಹೆಜ್ಜೆ ಇಟ್ಟಿದೆ.

IIT Kharagpur
ಐಐಟಿ ಖರಗ್​ಪುರ
author img

By

Published : Dec 25, 2022, 8:04 AM IST

Updated : Dec 25, 2022, 8:17 AM IST

ಖರಗ್‌ಪುರ್ (ಪಶ್ಚಿಮ ಬಂಗಾಳ): ಭಾರತದ ಹೊರಗೆ ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಯೋಜನೆಯ ಭಾಗವಾಗಿ ಮಲೇಷಿಯಾದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ಐಐಟಿ(ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ) ಖರಗ್‌ಪುರ್ ಯೋಚಿಸಿದೆ ಎಂದು ಪ್ರತಿಷ್ಟಿತ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ವಿ.ಕೆ.ತಿವಾರಿ ಶನಿವಾರ ತಿಳಿಸಿದ್ದಾರೆ. ನಿನ್ನೆ ನಡೆದ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ ಖರಗ್‌ಪುರ್‌ 68ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಶಿಕ್ಷಣ ಸಂಸ್ಥೆಯು ವಿಶ್ವದ ಟಾಪ್ 10 ಸಂಸ್ಥೆಗಳಲ್ಲಿ ಒಂದಾಗುವ ಗುರಿ ಹೊಂದಿದೆ ಎಂದು ಹೇಳಿದರು.

ಐಐಟಿ ಮಲೇಷಿಯಾ ಸ್ಥಾಪನೆಯ ಮೂಲಕ ಶಿಕ್ಷಣದ ಉತ್ಕೃಷ್ಟತೆಯಲ್ಲಿ ವಿಶ್ವವ್ಯಾಪಿಯಾಗಿ ಒಂದು ಮಾದರಿ​ಯನ್ನು ಸ್ಥಾಪಿಸುವ ಗುರಿಯನ್ನು ನಮ್ಮ ಸಂಸ್ಥೆ ಹೊಂದಿದೆ. ಮಲೇಷಿಯಾದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮುಖೇನ ಭಾರತೀಯ ಶಿಕ್ಷಣದ ಗುಣಮಟ್ಟವನ್ನು ಉತ್ತೇಜಿಸುವಲ್ಲಿ ಐಐಟಿ ಖರಗ್​ಪುರ್ ಜಾಗತಿಕ ಹೆಗ್ಗುರುತು ಮೂಡಿಸುತ್ತಿದೆ ಎಂದು ಅವರು ಹೇಳಿದರು. ಇದೇ ವೇಳೆ ತಿವಾರಿ, ಹೊಸ ಶಿಕ್ಷಣ ಸಂಸ್ಥೆಯನ್ನು ಯಾವಾಗ ಸ್ಥಾಪಿಸಲಾಗುವುದು ಎಂಬ ಬಗ್ಗೆ ತಿಳಿಸಿಲ್ಲ. ಮಲೇಷಿಯಾದ ಯಾವುದಾದರು ಶಿಕ್ಷಣ ಸಂಸ್ಥೆಯೊಂದಿಗೆ ಜಂಟಿಯಾಗಿ ಪ್ರಾರಂಭಿಸುತ್ತಾರೋ ಅಥವಾ ಸ್ವತಂತ್ರವಾಗಿ ತಾವೇ ಸ್ಥಾಪಿಸುತ್ತಾರೋ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಕಳೆದೆರಡು ವರ್ಷಗಳಲ್ಲಿ ಐಐಟಿ ಖರಗ್‌ಪುರ್‌ದ ಆವಿಷ್ಕಾರದ ಯಶಸ್ಸಿನ ಕಥೆಗಳನ್ನು ಪಟ್ಟಿ ಮಾಡಿದ ಅವರು, ಸಂಸ್ಥೆಯು ತನ್ನ ಸಿಬ್ಬಂದಿ ಮತ್ತು ಸಂಶೋಧಕರು ರಚಿಸಿದ 75 ಆವಿಷ್ಕಾರಗಳ ಸಂಕಲನವನ್ನು ಸಂಗ್ರಹಿಸಿದೆ. ಕೊರೊನಾ ವೈರಸ್‌ ಸಂದರ್ಭದಲ್ಲಿ ಸಂಸ್ಥೆ ಅಭಿವೃದ್ಧಿಪಡಿಸಿದಂತಹ ಕೋವಿರ‍್ಯಾಪ್ ಡಯಾಗ್ನೋಸ್ಟಿಕ್ ಕಿಟ್ ಸುಮಾರು 6.7 ಕೋಟಿ ರೂ. ಗೆ ಮಾರಾಟವಾಗಿದ್ದರೆ, ಸಂಸ್ಥೆಯಿಂದ ಅಭಿವೃದ್ಧಿಪಡಿಸಲಾದ ಅನೇಕ ಯಶಸ್ವಿ ಹೊಸ ಸಾಧನಗಳನ್ನು ಒಂದು ಕೋಟಿ ರೂ.ಗಿಂತಲೂ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಂಸ್ಥೆಯು ಈಗಾಗಲೇ 25 ಹೊಸ ಆವಿಷ್ಕಾರಗಳಿಗೆ ಬೆಂಬಲವನ್ನು ನೀಡುತ್ತಿದೆ. ಸಂಸ್ಥೆಯ ಕ್ಯಾಂಪಸ್​ ಒಳಗೆ 2020ರಲ್ಲಿ 260 ಹಾಸಿಗೆಗಳ ಸೌಲಭ್ಯವಿರುವ ಶ್ಯಾಮ್ ಪ್ರಸಾದ್​ ಮುಖರ್ಜಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿರುವ ಅಮೆರಿಕದ ಉದ್ಯಮಿ ವಿನೋದ್​ ಗುಪ್ತಾ ಅವರಿಂದ ಹಿಡಿದು ಗೂಗಲ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್​ ಪಿಚೈ ಸಾವಿರಾರು ಸಂಖ್ಯೆಯ ಹಳೇ ವಿದ್ಯಾರ್ಥಿಗಳು ನಮ್ಮ ಸಂಸ್ಥೆಗೆ ಪ್ರಶಸ್ತಿಗಳೊಂದಿಗೆ ಸಂಸ್ಥೆಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಘಟಿಕೋತ್ಸವದ ಮುಖ್ಯ ಅತಿಥಿ, 1962 ರಲ್ಲಿ ಐಐಟಿ ಖರಗ್​ಪುರ್‌ದ ಹಳೆ ವಿದ್ಯಾರ್ಥಿ, ಹೆರಾನ್ಸ್ ಬೋನ್ಸಾಯ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೀಟರ್ ಚಾನ್ ಮಾತನಾಡಿ, ಐಐಟಿ ಖರಗ್‌ಪುರ್ ಒಂದು ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್. ಇಂತಹ ಶಿಕ್ಷಣ ಸಂಸ್ಥೆಯಲ್ಲಿ ನಾನು ರೂಪುಗೊಂಡಿರುವುದಕ್ಕೆ ಹೆಮ್ಮೆಪಡುತ್ತೇನೆ ಎಂದು ಹೇಳಿದರು.

ಭವಿಷ್ಯದಲ್ಲಿ ವಿವಿಧೋದ್ದೇಶ ಉನ್ನತ ಶಿಕ್ಷಣಕ್ಕೆ(Multidisciplinary Higher Education) ಮಹತ್ವ ಹೆಚ್ಚಿದ್ದು, ಐಐಟಿಗಳಲ್ಲೂ ಇತರ ಪದವಿಗಳನ್ನು ಪರಿಚಯಿಸುವ ಮೂಲಕ ಭವಿಷ್ಯದ ಬದಲಾವಣೆಗಳಿಗೆ ತೆರೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಜಡತ್ವಕ್ಕೆ ಹೊಂದಿಕೊಳ್ಳಬೇಡಿ, ಸದಾ ಸಮಯದೊಂದಿಗೆ ಚಲಿಸುತ್ತಿರಿ, ಆ ಉತ್ಸಾಹಭರಿತ ಚಲನೆಯನ್ನು ತಡೆಹಿಡಿಯಬೇಡಿ. ಬಾಹ್ಯಾಕಾಶ ವಿಜ್ಞಾನದಂತಹ ಕೋರ್ಸ್​ಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗೆ ಅವರು ಸಲಹೆಗಳನ್ನು ನೀಡಿದರು.

ಸಂಸ್ಥೆಯ ಒಂಬತ್ತು ಜೀವಮಾನ ಸಾಧಕರನ್ನು ಸೇರಿದಂತೆ ಸಂಸ್ಥೆಯ 40 ಪ್ರತಿಷ್ಠಿತ ಹಳೆ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು. ತಮ್ಮ ಅಧ್ಯಯನ ಕ್ಷೇತ್ರಗಳಲ್ಲಿ ಚಿನ್ನದ ಪದಕಗಳನ್ನು ಪಡೆದ ಒಂಬತ್ತು ವಿದ್ಯಾರ್ಥಿಗಳು ಮತ್ತು 26 ಬೆಳ್ಳಿ ಪದಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಇದನ್ನೂ ಓದಿ: ಅಕ್ಕಮಹಾದೇವಿ ಮಹಿಳಾ ವಿವಿ ಘಟಿಕೋತ್ಸವ: ವಿದ್ಯಾರ್ಥಿನಿಯರಿಂದ ಚಿನ್ನದ ಬೇಟೆ

Last Updated : Dec 25, 2022, 8:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.