ಲಡಾಖ್: ಬಲು ಅಪರೂಪದ ಮತ್ತು ಅತ್ಯಂತ ಆಕರ್ಷಕವಾದ ಕಾಡು ಬೆಕ್ಕು ಜಾತಿಗೆ ಸೇರಿದ ಹಿಮಾಲಯನ್ ಲಿಂಕ್ಸ್ ಅಥವಾ ಯುರೇಷಿಯನ್ ಲಿಂಕ್ಸ್ ಜಮ್ಮು ಮತ್ತು ಕಾಶ್ಮೀರದ ಲೇಹ್-ಲಡಾಖ್ನಲ್ಲಿ ಕಾಣಿಸಿಕೊಂಡಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಕಾಡು ಬೆಕ್ಕಿನ ವಿಡಿಯೋವೊಂದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕಂಡು ನೆಟಿಜೆನ್ಸ್ ಆಶ್ಚರ್ಯ ಚಕಿತರಾಗಿದ್ದಾರೆ.
ಪರ್ವೀನ್ ಕಸ್ವಾನ್ ಅವರು ತಮ್ಮ ಟ್ವಿಟರ್ ಪೋಸ್ಟ್ನಲ್ಲಿ, ‘‘ಸುಂದರವಾದ ಮತ್ತು ಬಲು ಅಪರೂಪವಾದ ಪ್ರಾಣಿ ಲಡಾಖ್ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಅನೇಕರು ಇದರ ಬಗ್ಗೆ ಕೇಳಿಲ್ಲ, ಇದು ಹಿಮಾಲಯನ್ ಲಿಂಕ್ಸ್. ಭಾರತದಲ್ಲಿ ಕಂಡು ಬರುವ ಅಪರೂಪದ ಕಾಡು ಬೆಕ್ಕಿನ ಜಾತಿಗೆ ಸೇರಿದ್ದಾಗಿದೆ. ಸುಂದರವಾದ ಮತ್ತು ಅಪರೂಪದ ಜೀವಿ ಲೇಹ್ - ಲಡಾಖ್ನಲ್ಲಿ ಕಂಡು ಬಂದಿದೆ. ಈ ವಲಯದಲ್ಲಿ ಹಿಮ ಚಿರತೆ ಮತ್ತು ಪಲ್ಲಾಸ್ ಬೆಕ್ಕು ಮತ್ತು ಇತರೆ ಜೀವಿಗಳು ಕಂಡು ಬರುತ್ತವೆ. ಈಗ ನೀವು ವಿಡಿಯೋದಲ್ಲಿ ಕಾಣಿಸುತ್ತಿರುವ ಇತರ ಪ್ರಾಣಿಗಳು ಯಾವುವು? ಮತ್ತು ಅವು ಏನು ಮಾಡುತ್ತಿವೆ ಎಂದು ನನಗೆ ಹೇಳಬಲ್ಲಿರಾ'' ಎಂದು ಬರೆದುಕೊಂಡಿದ್ದಾರೆ.
-
A beautiful and rare animal found in India. In Ladakh region. Not many have heard about it. Guess what. Via @fatima_sherine. pic.twitter.com/dCqnawVsrs
— Parveen Kaswan, IFS (@ParveenKaswan) February 28, 2023 " class="align-text-top noRightClick twitterSection" data="
">A beautiful and rare animal found in India. In Ladakh region. Not many have heard about it. Guess what. Via @fatima_sherine. pic.twitter.com/dCqnawVsrs
— Parveen Kaswan, IFS (@ParveenKaswan) February 28, 2023A beautiful and rare animal found in India. In Ladakh region. Not many have heard about it. Guess what. Via @fatima_sherine. pic.twitter.com/dCqnawVsrs
— Parveen Kaswan, IFS (@ParveenKaswan) February 28, 2023
ಕಸ್ವಾನ್ ಅವರು ಹಂಚಿಕೊಂಡ 45 ಸೆಕೆಂಡುಗಳ ವಿಡಿಯೋ ಕ್ಲಿಪ್ನಲ್ಲಿ, ಅಪರೂಪದ ಕಾಡು ಬೆಕ್ಕಿನ ಮೇಲೆ ಬೀದಿ ನಾಯಿಗಳ ಗುಂಪೊಂದು ಬೊಗಳುತ್ತಿದೆ ಆದರೆ ಲಿಂಕ್ಸ್ ನಿಧಾನವಾಗಿ ಚಲಿಸುತ್ತಿರುವುದು ಕಂಡುಬಂದಿದೆ. ಈ ದೃಶ್ಯವನ್ನು ನೆಟ್ಟಿಗರು ವೀಕ್ಷಿಸಿ ರೀಟ್ವೀಟ್ ಮಾಡಿದ್ದಾರೆ ಮತ್ತು ಕೆಲವರು ಹಂಚಿಕೊಂಡಿದ್ದಾರೆ. ಕಸ್ವಾನ್ ಅಪಲೋಡ್ ಮಾಡಿದ ವಿಡಿಯೋ ಕೇವಲ 16 ಗಂಟೆಗಳ ಒಳಗೆ ಸುಮಾರು ಒಂದು ಮಿಲಿಯನ್ (ಹತ್ತು ಲಕ್ಷ) ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಜಿ20 ವಿದೇಶಾಂಗ ಸಚಿವರ ಸಭೆ: ಗಣ್ಯರ ಆಹ್ವಾನಕ್ಕೆ ಇಟ್ಟಿದ್ದ ಹೂದಾನಿ ಕದ್ದ ಆರೋಪಿ ಅರೆಸ್ಟ್
ನಾಲ್ಕು ಜಾತಿಯ ಕಾಡು ಬೆಕ್ಕುಗಳು (ಲಿಂಕ್ಸ್) : ಕೆನಡಾ ಲಿಂಕ್ಸ್, ಐಬೇರಿಯನ್ ಲಿಂಕ್ಸ್, ಯುರೇಷಿಯನ್ ಲಿಂಕ್ಸ್, ಅಥವಾ ಬಾಬ್‌ಕ್ಯಾಟ್ ಮಧ್ಯಮ ಗಾತ್ರದ ಕಾಡು ಬೆಕ್ಕು ಎಂದು ಒಟ್ಟು ನಾಲ್ಕು ಜಾತಿಯ ಲಿಂಕ್ಸ್ಗಳಿವೆ. ‘ಲಿಂಕ್ಸ್’ ಎಂಬ ಪದವು ಇಂಡೋ-ಯುರೋಪಿಯನ್ ಮೂಲದಿಂದ ಬಂದ ಗ್ರೀಕ್ ಪದದಿಂದ ಲ್ಯಾಟಿನ್ ಮೂಲಕ ಈ ಪದವು ಬಂದಿದೆ. ಕಾಡು ಬೆಕ್ಕಿನ ಪ್ರತಿಫಲಿತ ಕಣ್ಣುಗಳ ಪ್ರಕಾಶಮಾನತೆಯನ್ನು ಉಲ್ಲೇಖಿಸಿ ಈ ಹೆಸರನ್ನು ಇಡಲಾಗಿದೆ.
ಯುರೇಷಿಯನ್ ಲಿಂಕ್ಸ್ ಮಧ್ಯಮ ಗಾತ್ರದ ಕಾಡು ಬೆಕ್ಕು, ಇದು ಉತ್ತರ, ಮಧ್ಯ ಮತ್ತು ಪೂರ್ವ ಯುರೋಪಿನಲ್ಲಿ ಮಧ್ಯ ಏಷ್ಯಾ ಮತ್ತು ಸೈಬೀರಿಯಾ, ಟಿಬೆಟಿಯನ್ ಪ್ರಸ್ಥಭೂಮಿ ಮತ್ತು ಹಿಮಾಲಯಗಳಲ್ಲಿ ಕಂಡುಬರುತ್ತದೆ. ಇದು ಸಮಶೀತೋಷ್ಣ ಮತ್ತು ಬೋರಿಯಲ್ ಕಾಡುಗಳಲ್ಲಿ 5,500 ಮೀ (18,000 ಅಡಿ) ಎತ್ತರದವರೆಗೆ ವಾಸಿಸುತ್ತದೆ. ಅದರ ವ್ಯಾಪಕವಾದ ವಾಸಸ್ಥಾನದ ಹೊರತಾಗಿಯೂ, ಇದು ಆವಾಸಸ್ಥಾನದ ನಷ್ಟ ಮತ್ತು ವಿಘಟನೆ, ಬೇಟೆಯಾಡುವಿಕೆ ಮತ್ತು ಬೇಟೆಯ ಸವಕಳಿಯಿಂದ ಬೆದರಿಕೆಗೆ ಒಳಗಾಗುತ್ತದೆ.
ಇದನ್ನೂ ಓದಿ: ಶ್ರೀರಂಗಂ ರಂಗನಾಥ ದೇವಾಲಯದಲ್ಲಿನ ಭಕ್ತರಿಂದ ಆನೆಗೆ ಹುಟ್ಟುಹಬ್ಬ ಆಚರಣೆ