ಗುರುಗ್ರಾಮ್: ಯುಎಇಗೆ ಪ್ರವಾಸ, ಮತ್ತಿತರ ಕಾರಣಗಳಿಗಾಗಿ ಪ್ರಯಾಣಿಸುವ ಭಾರತೀಯ ಪ್ರಯಾಣಿಕರ ಪಾಸ್‌ಪೋರ್ಟ್‌ನಲ್ಲಿ ತಮ್ಮ ಮೊದಲ ಮತ್ತು ಕೊನೆಯ ಹೆಸರು ಇಲ್ಲದಿದ್ದರೆ ಅಂಥವರಿಗೆ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ನ ವಾಣಿಜ್ಯ ಪಾಲುದಾರರಾದ ವಿಮಾನಯಾನ ಸಂಸ್ಥೆ ಇಂಡಿಗೋಗೆ ತಿಳಿಸಿದೆ. ಪಾಸ್‌ಪೋರ್ಟ್‌ನಲ್ಲಿ ವ್ಯಕ್ತಿಯ ಮೊದಲ ಮತ್ತು ಕೊನೆಯ ಹೆಸರನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದು ಸೂಚಿಸಿದೆ.
ಏಕ ಹೆಸರನ್ನು ಹೊಂದಿರುವ ಪ್ರಯಾಣಿಕರಿಗೆ ನ. 21, 2022ರಿಂದಲೇ ಪ್ರಯಾಣಕ್ಕೆ ಅವಕಾಶ ನೀಡದಂತೆ ಯುಎಇ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಭಾರತದಿಂದ ಅಥವಾ ಯುಎಇಯಿಂದ ಪ್ರಯಾಣಿಸುವ ಭಾರತೀಯ ಪ್ರಯಾಣಿಕರ ಪಾಸ್‌ಪೋರ್ಟ್‌ನಲ್ಲಿ ಮೊದಲ ಮತ್ತು ಕೊನೆಯ ಹೆಸರಿರುವುದು ಕಡ್ಡಾಯವಾಗಿದೆ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಈಗಾಗಲೇ ಅಲ್ಲಿ ವಾಸಮಾಡುವ ಪರ್ಮಿಟ್ ಹೊಂದಿರುವ ಮತ್ತು ಉದ್ಯೋಗದ ವೀಸಾ ಹೊಂದಿರುವವ ಏಕ ಹೆಸರಿನ ಪಾಸ್ಪೋರ್ಟ್ದಾರರು, ತಮ್ಮ ಹಳೆ ಪಾಸ್ಪೋರ್ಟ್ನಲ್ಲೇ ಮೊದಲ ಮತ್ತು ಕೊನೆಯ ಹೆಸರನ್ನು ಅಪ್ಢೇಡ್ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ಜಾಮಾ ಮಸೀದಿಗೆ ಹುಡುಗಿಯರ ಏಕಾಂಗಿ ಪ್ರವೇಶಕ್ಕೆ ನಿರ್ಬಂಧ!