ETV Bharat / bharat

ಅದಾನಿ ವಿಚಾರದಲ್ಲಿ ಪ್ರಧಾನಿಗಳೇ ನೀವು ಮೌನಿ ಬಾಬಾ ಆಗಿದ್ದೇಕೆ?: ಮೋದಿ ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ! - ನೀವು ಯಾಕೆ ಮೌನವಾಗಿದ್ದೀರಿ

ಉದ್ಯಮಿ ಗೌತಮ ಅದಾನಿ ಕಂಪನಿಗಳ ವ್ಯವಹಾರ ಕುರಿತ ಚರ್ಚೆ ಇಂದೂ ಸಂಸತ್​ನಲ್ಲಿ ಪ್ರತಿದ್ವನಿಸಿತು. ನಿನ್ನೆ ಲೋಕಸಭೆಯಲ್ಲಿ ಅದಾನಿ ಮತ್ತು ಪ್ರಧಾನಿ ಸಂಬಂಧದ ಬಗ್ಗೆ ರಾಹುಲ್​ ಗಾಂಧಿ ಫೋಟೋ ಪ್ರದರ್ಶಿಸುವ ಮೂಲಕ ನೇರವಾಗಿ ಪ್ರಶ್ನಿಸುವ ಮೂಲಕ ಮಾತಿನ ಚಕಮಕಿಗೆ ಕಾರಣರಾಗಿದ್ದರು. ಇಂದೂ ಕೂಡಾ ರಾಜ್ಯಸಭೆಯಲ್ಲಿ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅದಾನಿ - ಹಿಂಡನ್​ಬರ್ಗ್​ ವಿವಾದವನ್ನು ಜಂಟಿ ಸದನ ಸಮಿತಿ ತನಿಖೆಗೆ ಒಪ್ಪಿಸುವಂತೆ ಕೋರಿದರು.

'If PM is fearless why is he afraid of a JPC probe into Adani
ಅದಾನಿ ವಿಚಾರದಲ್ಲಿ ಪ್ರಧಾನಿಗಳೇ ನೀವು ಮೌನಿ ಬಾಬಾ ಆಗಿದ್ದೇಕೆ?: ಮೋದಿ ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ!
author img

By

Published : Feb 8, 2023, 1:55 PM IST

Updated : Feb 8, 2023, 2:00 PM IST

ನವದೆಹಲಿ: ಗೌತಮ್‌ ಅದಾನಿ ವಿಷಯವಾಗಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್​ ತೀವ್ರ ವಾಗ್ದಾಳಿ ನಡೆಸುತ್ತಿದೆ. ನೇರವಾಗಿ ರಾಹುಲ್​ ಗಾಂಧಿ ಪ್ರಧಾನಿ ವಿರುದ್ಧ ಮಾತಿನ ಬಾಣ ಪ್ರಯೋಗಿಸುತ್ತಿದ್ದಾರೆ. ಲೋಕಸಭೆಯಲ್ಲಿ ರಾಹುಲ್​ ಅಬ್ಬರಿಸಿದರೆ, ರಾಜ್ಯಸಭೆಯಲ್ಲಿ ಎಐಸಿಸಿ ಅಧ್ಯಕ್ಷರೂ ಆಗಿರುವ ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ಈ ಮಧ್ಯೆ ಅದಾನಿ ಷೇರುಗಳ ಬೆಲೆ ನಿಧಾನವಾಗಿ ಸುಸ್ಥಿತಿಗೆ ಮರಳುತ್ತಿವೆ. ಈ ಬಗ್ಗೆ ಸಂಸತ್​ನ ಮೇಲ್ಮನೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಈ ಮಾತು ಸರಕಾರ ಮತ್ತು ಪ್ರತಿಪಕ್ಷಗಳ ನಡುವೆ ಬುಧವಾರ ವಾಗ್ವಾದಕ್ಕೆ ಕಾರಣವಾಯಿತು. ಅದಾನಿ ಷೇರುಗಳ ಬೆಲೆ ಏರಿಕೆ ನೋಡಿದರೆ ಇದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ "ಸ್ನೇಹ" ವಲ್ಲದೇ ಮತ್ತೇನು ಎಂದು ಖರ್ಗೆ ಪ್ರಶ್ನಿಸಿದ್ದಾರೆ.

  • #WATCH | Rajya Sabha Chairman Jagdeep Dhankhar in exchange with LoP Mallikarjun Kharge who is demanding JPC on the Adani issue says, "it seems you will set up a JPC on me."

    (Video source: Sansad TV) pic.twitter.com/hGEt7oPeGz

    — ANI (@ANI) February 8, 2023 " class="align-text-top noRightClick twitterSection" data=" ">

ಅದಾನಿ - ಹಿಂಡೇನ್‌ಬರ್ಗ್ ವಿವಾದದ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ಒತ್ತಾಯಿಸಿದ ಖರ್ಗೆ ಅವರು "ಪ್ರಧಾನಿ ನಿರ್ಭೀತರಾಗಿದ್ದರೆ, ಅದಾನಿ-ಹಿಂಡೆನ್‌ಬರ್ಗ್ ವಿವಾದವನ್ನು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒಪ್ಪಿಸುವುದಕ್ಕೆ ಹೆದರುವುದೇಕೆ’’ ಎಂದು ಪ್ರಶ್ನಿಸಿದರು.

ದಾಖಲೆ ಇಟ್ಟು ಮಾತನಾಡಿ ಎಂದ ಸಭಾಪತಿ: ಖರ್ಗೆ ಅವರ ಈ ಮಾತಿಗೆ ರಾಜ್ಯಸಭಾ ಸಭಾಪತಿ ಜಗದೀಪ್ ಧಂಖರ್, ತಮ್ಮ ಆರೋಪಕ್ಕೆ ದಾಖಲೆಗಳನ್ನು ನೀಡುವಂತೆ ಕೇಳಿದರು. ನಿಮ್ಮ ಮಾತಿಗೆ ಅನುಸಾರವಾಗಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಅದನ್ನು ದೃಢೀಕರಿಸುವಂತೆ ಕೇಳಿದರು. ಸದನವು ದಾಖಲೆಗಳಿಲ್ಲದೇ ಆರೋಪ ಮಾಡಲಿಕ್ಕೆ ಸಾಧ್ಯವಿಲ್ಲ ಎಂದು ಖರ್ಗೆ ಅವರಿಗೆ ಸಭಾಪತಿ ಹೇಳಿದರು.

ಖರ್ಗೆ ಮೇಲೆ ಮುಗಿಬಿದ್ದ ಆಡಳಿತ ಪಕ್ಷದ ಸಂಸದರು: ಖರ್ಗೆ ಅವರು ಪ್ರಧಾನಿಗಳ ಬಗ್ಗೆ ಮಾಡಿದ ಟೀಕೆಗಳ ವಿರುದ್ಧ ಆಡಳಿತ ಪಕ್ಷ ವಾಗ್ದಾಳಿ ನಡೆಸಿತು. ಇನ್ನು ಕಾಂಗ್ರೆಸ್ ಸಂಸದರು ಖರ್ಗೆ ಕೇವಲ "ಮೌಲ್ಯಮಾಪನ" ಮಾಡುತ್ತಿದ್ದಾರೆಯೇ ಹೊರತು "ಆರೋಪ" ಮಾಡುತ್ತಿಲ್ಲ ಎಂದು ಪ್ರತಿಪಾದಿಸಿದರು. ಆದರೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಪ್ರಧಾನಿ ವಿರುದ್ಧ ಪದೇ ಪದೇ "ಸೂಕ್ಷ್ಮವಾಗಿ ಮತ್ತು ಬಹಿರಂಗವಾಗಿ" ಆರೋಪ ಮಾಡುತ್ತಿದ್ದೀರಿ, ಇದು ಸರಿ ಎಲ್ಲ ಎಂದು ತಿರುಗೇಟು ನೀಡಿದರು.

ಅದಾನಿ ಗ್ರೂಪ್ ಕುರಿತ ಹಿಂಡೆನ್‌ಬರ್ಗ್ ವರದಿ ಕುರಿತು ಖರ್ಗೆ ಅವರು ಉಲ್ಲೇಖಿಸಿರುವ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯಸಭೆಯ ಸಭಾನಾಯಕ ಪಿಯೂಷ್ ಗೋಯಲ್, " ಕಾಂಗ್ರೆಸ್​ನವರು ಆಧಾರರಹಿತ ವಿದೇಶಿ ವರದಿಗಳನ್ನು ಆಧರಿಸಿ ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದು ಸರಿಯಲ್ಲ ಯಾವುದೇ ಆರೋಪ ಮಾಡುವ ಮುನ್ನ ದಾಖಲೆ ಇಟ್ಟು ಮಾತನಾಡನೇಕು ಎಂದು ಗೋಯಲ್​ ಎಚ್ಚರಿಕೆ ನೀಡಿದರು.

ಮತ್ತೆ ಪ್ರಧಾನಿ ವಿರುದ್ಧ ನೇರ ವಾಗ್ದಾಳಿ ನಡೆಸಿದ ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್​ ಖರ್ಗೆ, "ಪ್ರಧಾನಿ ಅವರಿಗೆ ನನ್ನ ಪ್ರಶ್ನೆ ಏನೆಂದರೆ. ನೀವು ಯಾಕೆ ಮೌನವಾಗಿದ್ದೀರಿ? ನೀವು ಎಲ್ಲರನ್ನು ಬೆದರಿಸುತ್ತೀರಿ, ನೀವು ಅವರನ್ನು ಏಕೆ ಹೆದರಿಸಬಾರದು? ನೀವು ಅವರತ್ತ ಒಂದು ನೋಟ ಹಾಕಿದರೆ, ಅವರು ಮೌನವಾಗುತ್ತಾರೆ. ಆದರೆ ನೀವು ಮೌನಿ ಬಾಬಾ ಆಗಿ ಉಳಿದಿದ್ದೀರಿ’’ ಏಕೆ ಎಂದು ಪ್ರಶ್ನಿಸಿದರು.

ಇದನ್ನು ಓದಿ: ಪ್ರಧಾನಿ ವಿರುದ್ಧ ಗಂಭೀರ ಆರೋಪ: ರಾಹುಲ್​ ಗಾಂಧಿಗೆ ಬಿಜೆಪಿಯಿಂದ ಹಕ್ಕುಚ್ಯುತಿ ನೋಟಿಸ್

Last Updated : Feb 8, 2023, 2:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.