ನವದೆಹಲಿ : ಕೋವಿಡ್‌ನ ಎರಡು ಡೋಸ್ ಪಡೆದವರಲ್ಲಿ ಮರಣ ಪ್ರಮಾಣವು ಶೇ.95ರಷ್ಟು ಕಡಿಮೆಯಾಗಿದೆ ಎಂದು ಐಸಿಎಂಆರ್ ತಿಳಿಸಿದೆ. ಚಾಲ್ತಿಯಲ್ಲಿರುವ ಡೆಲ್ಟಾ ರೂಪಾಂತರದಲ್ಲಿಯೂ ಸಹ ಕೋವಿಡ್ ಸಾವುಗಳು ಶೇ.95ರಷ್ಟು ಕಡಿಮೆಯಾಗಿವೆ. ತಮಿಳುನಾಡಿನಲ್ಲಿ ಸುಮಾರು 17 ಲಕ್ಷ 524 ಪೊಲೀಸ್ ಸಿಬ್ಬಂದಿ ಮೇಲೆ ಈ ಅಧ್ಯಯನವನ್ನು ನಡೆಸಲಾಗಿದೆ ಎಂದು ಹೇಳಿದೆ.
ಈ ಪೈಕಿ 17,000 ಜನರು ಲಸಿಕೆಯಿಂದ ದೂರವಾಗಿದ್ದಾರೆ. 32,792 ಮಂದಿ ಒಂದು ಡೋಸ್ ಮತ್ತು 67,673 ಎರಡು ಡೋಸ್ ತೆಗೆದುಕೊಂಡಿದ್ದಾರೆ. ಈ ಪೈಕಿ 20 ಪೊಲೀಸರು ವ್ಯಾಕ್ಸಿನೇಷನ್ ಇಲ್ಲದೆ ಸಾವನ್ನಪ್ಪಿದ್ದಾರೆ. ಒಂದು ಡೋಸ್ ತೆಗೆದುಕೊಂಡ ನಂತರ ಏಳು ಮಂದಿ ಸಾವನ್ನಪ್ಪಿದ್ದಾರೆ. ಎರಡು ಡೋಸ್ ತೆಗೆದುಕೊಂಡ ನಂತರ ಕೇವಲ ನಾಲ್ವರು ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಐಸಿಎಂಆರ್ ವರದಿ ತಿಳಿಸಿದೆ.
ಇದನ್ನೂ ಓದಿ: ಎರಡೂ ಡೋಸ್ ಪಡೆದವರಲ್ಲಿ COVID Vaccine ಶೇ. 95ರಷ್ಟು ಪರಿಣಾಮಕಾರಿ: ಐಸಿಎಂಆರ್ ಫ್ಯಾಕ್ಟ್ ಚೆಕ್ ವರದಿ
ಲಸಿಕೆ ಪರಿಣಾಮವು ಮೊದಲ ಡೋಸ್ ತೆಗೆದುಕೊಂಡವರಲ್ಲಿ 82 ಪ್ರತಿಶತ ಮತ್ತು 2ನೇ ಡೋಸ್ ತೆಗೆದುಕೊಂಡವರಲ್ಲಿ 95 ಪ್ರತಿ ಶತದಷ್ಟು ವ್ಯಾಕ್ಸಿನ್ ಪರಿಣಾಮವಾಗಿದೆ ಎಂದು ಸಮೀಕ್ಷೆ ಕಂಡು ಹಿಡಿದಿದೆ. ಕೋವಿಡ್‌ನಿಂದ ಸಾವುಗಳನ್ನು ತಡೆಗಟ್ಟುವಲ್ಲಿ ಎರಡು ಡೋಸ್ ವಿಧಾನವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಲಸಿಕೆ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದೆ.