ದುಬೈ: 2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮಹಿಳಾ ಟಿ-20 ವಿಶ್ವಕಪ್ಗೆ ವಿವಿಧ ರಾಷ್ಟ್ರಗಳು ಅರ್ಹತೆ ಪಡೆಯಲು ಬೇಕಿರುವ ಮಾನದಂಡಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಘೋಷಣೆ ಮಾಡಿದೆ.
10 ರಾಷ್ಟ್ರಗಳ ತಂಡಗಳು ವಿಶ್ವಕಪ್ನಲ್ಲಿ ಭಾಗವಹಿಸಲಿದ್ದು, ಈಗಾಗಲೇ ವಿಶ್ವಕಪ್ ಆಯೋಜಿಸುವ ದಕ್ಷಿಣ ಆಫ್ರಿಕಾ ಮತ್ತು ನವೆಂಬರ್ 30, 2021ರಲ್ಲಿ ಬಿಡುಗಡೆಯಾದ ಪಟ್ಟಿಯ ಅನುಸಾರ ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಏಳು ಸ್ಥಾನದಲ್ಲಿರುವ ರಾಷ್ಟ್ರಗಳನ್ನು ವಿಶ್ವಕಪ್ಗೆ ಆಯ್ಕೆ ಮಾಡಲಾಗಿದೆ.
ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಪಾಕಿಸ್ತಾನ ರಾಷ್ಟ್ರಗಳು ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಏಳು ಸ್ಥಾನಗಳಲ್ಲಿರುವ ಕಾರಣದಿಂದಾಗಿ ಅವುಗಳು ವಿಶ್ವಕಪ್ಗೆ ಆಯ್ಕೆಯಾಗಿವೆ.
ಓದಿ: ಟಿ20 ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ
ಇನ್ನುಳಿದಿರುವ ಎರಡು ಸ್ಥಾನಗಳಿಗೆ ವಿವಿಧ ರಾಷ್ಟ್ರಗಳೊಂದಿಗೆ ಸ್ಪರ್ಧೆ ಏರ್ಪಡಲಿದೆ. ಭೂತಾನ್, ಬೋಟ್ಸ್ವಾನಾ, ಕ್ಯಾಮೆರೂನ್, ಫ್ರಾನ್ಸ್, ಮಲಾವಿ, ಮ್ಯಾನ್ಮಾರ್, ಫಿಲಿಪ್ಪಿನ್ಸ್ ಹಾಗೂ ಟರ್ಕಿ ದೇಶಗಳು ಇದೇ ಮೊದಲ ಬಾರಿಗೆ ವಿಶ್ವಕಪ್ನಲ್ಲಿ ಭಾಗವಹಿಸಲು ಪೈಪೋಟಿ ನಡೆಸಲಿವೆ.
2012ರಲ್ಲಿ ಭಾಗವಹಿಸಿ ವಾಪಸ್ಸಾಗಿದ್ದ ಅರ್ಜೆಂಟೀನಾ ಹಾಗೂ ಬ್ರೆಜಿಲ್ ದೇಶಗಳು ಮತ್ತೆ ಭಾಗವಹಿಸಲು ಉತ್ಸುಕತೆ ತೋರಿವೆ. 2021ರ ಆಗಸ್ಟ್ನಿಂದ ಐದು ವಲಯಗಳಲ್ಲಿ ಅರ್ಹತಾ ಪಂದ್ಯಗಳು ನಡೆಯಲಿವೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಹೇಳಿದೆ.