ಭರತಪುರ(ರಾಜಸ್ಥಾನ) : ಆನ್‌ಲೈನ್ ವಂಚನೆ, ದರೋಡೆ, ಬೈಕ್ ಕಳ್ಳತನದಂತಹ ಅಪರಾಧಗಳಿಂದಾಗಿ ಕುಖ್ಯಾತಿ ಪಡೆದಿದ್ದ ಜಿಲ್ಲೆಯ ಮೇವಾತ್ ಪ್ರದೇಶವು ಈಗ ಐಎಎಸ್ ಜಬ್ಬಾರ್‌ಖಾನ್ ಅವರ ಅಂಚೆ ಇಲಾಖೆಯಲ್ಲಿ ಎಸ್ಎಸ್ಪಿಯಾಗಿ ನೇಮಕಗೊಂಡಿರುವುದು ಜಿಲ್ಲೆಗೆ ಖ್ಯಾತಿ ತಂದಿದೆ. ಜಿಲ್ಲೆಯ ಮೇವಾತ್ ಪ್ರದೇಶದ ರುಂಧ್ ಗ್ರಾಮದ ನಿವಾಸಿ ಜಬ್ಬಾರ್ ಖಾನ್ ಅವರು ಅಂಚೆ ಇಲಾಖೆ ಕಚೇರಿಯ ತಮ್ಮ ಕುರ್ಚಿಯಲ್ಲಿ ಹೆತ್ತವರನ್ನು ಕೂರಿಸಿ ತಾವು ಹಿಂದೆ ನಿಂತಿರುವ ಫೋಟೋ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿದೆ.
ಎಸ್‌ಎಸ್‌ಪಿ ಜಬ್ಬಾರ್ ಖಾನ್ ಜೀವನ : ರುಂಧ್ ಗ್ರಾಮದ ನಿವಾಸಿ ಜಬ್ಬಾರ್ ಖಾನ್ ಅಲ್ವಾರ್‌ನಲ್ಲಿ ಅಂಚೆ ಇಲಾಖೆಯಲ್ಲಿ ಹಿರಿಯ ಅಧೀಕ್ಷಕರಾಗಿ (ಎಸ್‌ಎಸ್‌ಪಿ) ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಜಬ್ಬಾರ್ ತಂದೆ ಚಿಕಿತ್ಸೆಗಾಗಿ ಆಲ್ವಾರ್ಗೆ ತೆರಳಿದ್ದರು. ಅದೇ ಸಮಯದಲ್ಲಿ ಜಬ್ಬಾರ್ ಖಾನ್ ಅವರು ತಮ್ಮ ತಂದೆಯನ್ನು ತಮ್ಮ ಕಚೇರಿಗೆ ಕರೆದೊಯ್ದು ಅವರ ಕುರ್ಚಿಯ ಮೇಲೆ ಮತ್ತು ಪಕ್ಕದಲ್ಲಿ ತಾಯಿಯನ್ನು ಕುಳ್ಳಿರಿಸಿ ಈ ಫೋಟೋ ಕ್ಲಿಕ್ಕಿಸಿದರು. ಮೇವಾತ್ ಪ್ರದೇಶದ ಜಬ್ಬಾರ್ ಖಾನ್ ಅವರ ಈ ಚಿತ್ರವು ಇದೀಗ ಮೇವಾತ್ನ ಯುವಕರು ಅಪರಾಧದ ಕುಖ್ಯಾತಿಯಿಂದ ಹೊರಬಂದು ಉತ್ತಮ ಸ್ಥಾನವನ್ನು ಸಾಧಿಸಲು ಪ್ರಾರಂಭಿಸಿದ್ದಾರೆ ಎಂಬುದಕ್ಕೆ ಈ ಫೋಟೋ ಸೂಚಕವಾಗಿದೆ.
ಸತತ 4 ಉದ್ಯೋಗಗಳನ್ನಲಂಕರಿಸಿದ ಜಬ್ಬಾರ್ : ಜಬ್ಬಾರ್ ಖಾನ್ 11ನೇ ತರಗತಿವರೆಗೆ ತಮ್ಮ ಹಳ್ಳಿಯಲ್ಲಿ ಓದಿ, 12ನೇ ತರಗತಿಯ ಶಿಕ್ಷಣವನ್ನು ಸಿಕರ್ನಲ್ಲಿ ಪೂರೈಸಿದ್ದರು. ಆಲ್ವಾರ್ನಲ್ಲಿ ಪದವಿ ಮತ್ತು ರಾಜಸ್ಥಾನ ವಿಶ್ವವಿದ್ಯಾಲಯ ಜೈಪುರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದಾರೆ. 12ನೇ ತರಗತಿಯ ಶಿಕ್ಷಣ ಮುಗಿದ ಬಳಿಕ ಅವರು ಭಾರತೀಯ ನೌಕಾಪಡೆಗೆ ಆಯ್ಕೆಯಾದರು.
ಅದರ ನಂತರ ಸಹಾಯಕ ರೈಲ್ವೆ ಮಾಸ್ಟರ್ ಮತ್ತು ನಂತರ RPSCಯಿಂದ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಿದ್ದರು. UPSC ಮೂಲಕ ರೈಲ್ವೆಯಲ್ಲಿ ಸಹಾಯಕ ರೈಲ್ವೆ ಆಯುಕ್ತರಾಗಿ ಆಯ್ಕೆಯಾಗಿದ್ದರು. 2017ರಲ್ಲಿ ಭಾರತೀಯ ಅಂಚೆ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿದರು. ಕಠಿಣ ಪರಿಶ್ರಮದಿಂದ ಜಬ್ಬಾರ್ ಖಾನ್ ಒಂದರ ಹಿಂದೆ ಒಂದರಂತೆ ನಾಲ್ಕು ವಿಭಿನ್ನ ಯಶಸ್ಸನ್ನು ಗಳಿಸಿದ್ದಾರೆ.
ಈ ಮೂಲಕ ಆ ಭಾಗದ ಯುವಕರಿಗೆ ಜಬ್ಬಾರ್ ಖಾನ್ ಮಾದರಿಯಾಗಿದ್ದಾರೆ. ಶಿಕ್ಷಣ ಪಡೆಯುತ್ತಿರುವ ಯುವಕರಿಗೆ ಜಬ್ಬಾರ್ ಖಾನ್ ಮಾರ್ಗದರ್ಶನ ನೀಡುತ್ತಿದ್ದಾರೆ. ಅನೇಕ ನಿರ್ಗತಿಕರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಾರೆ. ಸಮಾಜಕ್ಕೆ ಹೊಸ ದಿಕ್ಕನ್ನು ನೀಡಲು ಶಿಕ್ಷಣವೊಂದೇ ಮಾಧ್ಯಮ ಎಂದು ಜಬ್ಬಾರ್ ಖಾನ್ ಹೇಳುತ್ತಾರೆ.
ಇದನ್ನೂ ಓದಿ: ಆಮ್ಲಜನಕ ಸಿಲಿಂಡರ್ ಇಲ್ಲದೇ ಮೌಂಟ್ ಎವರೆಸ್ಟ್ ಶಿಖರ ಏರಿದ ಯುವತಿ!