ನವದೆಹಲಿ : ಕ್ರಿಕೆಟರ್ ಕೆ.ಎಲ್. ರಾಹುಲ್ರ ಪ್ರೇಯಸಿ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ತಾವೂ ಕೂಡ ಬಾಡಿ ಶೇಮಿಂಗ್ಗೆ ಒಳಗಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಬಾಡಿ ಶೇಮಿಂಗ್ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ ಎಂದು ಖಡಕ್ ವಾರ್ನಿಂಗ್ ಮಾಡಿದ್ದಾರೆ.
ಎಎನ್ಐಗೆ ನೀಡಿದ ಸಂದರ್ಶನದಲ್ಲಿ ನಟಿ ಆಥಿಯಾ ಶೆಟ್ಟಿ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ನಾನು ಚಿಕ್ಕವಳಿದ್ದಾಗ ಸಣ್ಣಗಿದ್ದೆ. ಆಗಲೂ ಜನರು ನನ್ನ ದೇಹದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಕೇವಲ ದಪ್ಪಗಿದ್ದವರು ಮಾತ್ರ ಬಾಡಿ ಶೇಮಿಂಗ್ಗೆ ಒಳಗಾಗಲ್ಲ. ಸಣ್ಣಗಿದ್ದರೂ ಜನ ನಮ್ಮ ಬಗ್ಗೆ ಕೀಳಾಗಿ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.
ದಪ್ಪ ಮತ್ತು ಸಣ್ಣಗೆ ಇರುವವರನ್ನು ಆಡಿಕೊಂಡರೂ ಸಹ ಅದು ಬಾಡಿ ಶೇಮಿಂಗ್ಗೆ ಸೇರುತ್ತದೆ. ನಾನೂ ಕೂಡ ಇದನ್ನು ಅನುಭವಿಸಿದ್ದೇನೆ. ನಾನು ತಿಳಿದುಕೊಂಡಂತೆ ನಮ್ಮ ತೂಕ, ನಾವು ಹೇಗಿದ್ದೇವೆ ಎಂಬುದರ ಬಗ್ಗೆ ಜನ ಆಡಿಕೊಳ್ಳಲು ಆರಂಭಿಸಿದರೆ ಇದರಿಂದ ನಮ್ಮ ಆತ್ಮವಿಶ್ವಾಸ ಕುಗ್ಗುತ್ತದೆ.
ಜೀವನದಲ್ಲಿ ಅವರು ಏನೆಲ್ಲಾ ಕಷ್ಟಪಡುತ್ತಿರುತ್ತಾರೋ, ಅವರ ಅಭದ್ರತೆಗಳೇನು ಎಂಬುದು ನಿಮಗೆ ತಿಳಿದಿರುವುದಿಲ್ಲ. ನೀವು ಯಾರ ಬಗ್ಗೆಯಾದರೂ ಒಳ್ಳೆಯ ಮಾತನಾಡಲು ಸಾಧ್ಯವಿಲ್ಲವಾದರೆ, ಅವರ ಬಗ್ಗೆ ಕೆಟ್ಟ ಕಮೆಂಟ್ಸ್ ಮಾಡುವುದನ್ನು ಮಾಡಲೇಬೇಡಿ.
ನಾವಾಡುವ ಮಾತುಗಳು ಇನ್ನೊಬ್ಬರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಿಬಿಡಬಹುದು. ಹಾಗಾಗಿ, ಒಳ್ಳೆಯ ಗುಣವನ್ನು ಬೆಳೆಸಿಕೊಳ್ಳೋಣ ಎಂದು ಆಥಿಯಾ ಹೇಳಿದ್ದಾರೆ.
ಇದನ್ನೂ ಓದಿ: ಜನ್ಮದಿನದ ಸಂಭ್ರಮದಲ್ಲಿ ಮಿಲ್ಕಿ ಬ್ಯೂಟಿ.. ಸಾಮಾಜಿಕ ಜಾಲತಾಣದಲ್ಲಿ ತಮನ್ನಾಗೆ ಶುಭಾಶಯಗಳ ಮಹಾಪೂರ
ನಾನು ಚಿಕ್ಕವಳಿದ್ದಾಗ ಮತ್ತು ಹದಿಹರೆಯದ ವಯಸ್ಸಿಗೆ ಬಂದಾಗ ನನ್ನ ದೇಹದ ವಿಚಾರದಲ್ಲಿ ಅತಿಯಾದ ಕಾಳಜಿಯನ್ನು ಹೊಂದಿದ್ದೆ. ಈಗಲೂ ಸಹ ಹಾಗೆಯೇ ಇದ್ದೇನೆ. ಆದರೆ, ನಾನೀಗ ನನ್ನ ಬಗ್ಗೆ ಮೊದಲಿಗಿಂತ ಹೆಚ್ಚು ಆತ್ಮವಿಶ್ವಾಸ ಹೊಂದಿದ್ದೇನೆ. ಎಷ್ಟೋ ಜನರಿಗೆ ಬಾಡಿ ಶೇಮಿಂಗ್ ಎಂದರೆ ಏನು ಎಂಬುದೇ ತಿಳಿದಿಲ್ಲ.
ಅವರ ಪ್ರಕಾರ, ದಪ್ಪಗಿದ್ದವರ ಬಗ್ಗೆ ಹೇಳಿದರೆ ಅದು ಅವರ ಕಾಳಜಿಯಂತೆ ಹೇಳುತ್ತಾರೆ. ಅದು ತಪ್ಪು. ಜನರು ಸಣ್ಣಗಿದ್ದವರನ್ನೂ ಆಡಿಕೊಳ್ಳುತ್ತಾರೆ. ಇದು ಕೂಡ ತಪ್ಪು. ಯಾರ ಬಗ್ಗೆಯೂ ಮಾತನಾಡದೇ ಇರುವುದೇ ಒಳ್ಳೆಯದು ಎಂದು ಆಥಿಯಾ ಸಲಹೆ ನೀಡಿದ್ದಾರೆ.