ETV Bharat / bharat

ಎನ್‌ಸಿಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಶರದ್ ಪವಾರ್ ತೀರ್ಮಾನ - Lok Majhe Sangaayi

ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಶರದ್ ಪವಾರ್ ತಮ್ಮ ಎನ್‌ಸಿಪಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ತೀರ್ಮಾನಿಸಿದ್ದಾರೆ.

Sharad Pawar
ಶರದ್ ಪವಾರ್
author img

By

Published : May 2, 2023, 1:07 PM IST

Updated : May 2, 2023, 3:40 PM IST

ಮುಂಬೈ (ಮಹಾರಾಷ್ಟ್ರ): ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ ಎಂದು ಹಿರಿಯ ರಾಜಕಾರಣಿ ಶರದ್ ಪವಾರ್ ಘೋಷಿಸಿದ್ದಾರೆ. ಇದೇ ವೇಳೆ ಸಹಕಾರ, ಸಂಸ್ಕೃತಿ, ಕ್ರೀಡೆಗಳಲ್ಲಿ ಹೆಚ್ಚಿನ ಕೆಲಸ ಮಾಡಲಿದ್ದೇನೆ ಎಂದು ಅವರು ಹೇಳಿದ್ದಾರೆ. ಶರದ್ ಪವಾರ್ ಅವರ ಈ ಏಕಾಏಕಿ ಘೋಷಣೆಯು ಪಕ್ಷದ ಕಾರ್ಯಕರ್ತರಲ್ಲಿ ಆಘಾತಕ್ಕೆ ಕಾರಣವಾಗಿದೆ.

ಮುಂಬೈನ ಯಶವಂತರಾವ್ ಚವಾಣ್ ಸೆಂಟರ್‌ನಲ್ಲಿ ಇಂದು ನಡೆದ ತಮ್ಮ ಆತ್ಮಚರಿತ್ರೆ ''ಲೋಕ ಮಾಜೆ ಸಾಂಗಾತಿ''ಯ ಪರಿಷ್ಕೃತ ಆವೃತ್ತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಾ ಈ ಮಹತ್ವದ ಘೋಷಣೆ ಮಾಡಿದರು. ಪವಾರ್​ ಅವರ ಜೀವನದಲ್ಲಿ 2015ರ ನಂತರದ ಬೆಳವಣಿಗೆಗಳನ್ನು ಈ ಮರಾಠಿ ಪುಸ್ತಕ ಹೊಂದಿದೆ. ಈ ಹಿಂದೆ ಕೇಂದ್ರ ರಕ್ಷಣಾ ಮತ್ತು ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದ ನಂತರ ಅವರು ತಮ್ಮ ''ಆನ್ ಮೈ ಟರ್ಮ್ಸ್'' ಎಂಬ ಆತ್ಮಚರಿತ್ರೆ ಪುಸ್ತಕವನ್ನು ಇಂಗ್ಲಿಷ್‌ನಲ್ಲಿ ಪ್ರಕಟಿಸಿದ್ದರು.

ಇದನ್ನೂ ಓದಿ: ಕಾಂಗ್ರೆಸ್​-ಜೆಡಿಎಸ್ ಎರಡೂ ಒಂದೇ, ಭ್ರಷ್ಟ, ಪರಿವಾರವಾದಿ ಪಕ್ಷಗಳು: ಚಿತ್ರದುರ್ಗದಲ್ಲಿ ಮೋದಿ

ಕಣ್ಣೀರು ಹಾಕಿದ ನಾಯಕರು: 82 ವರ್ಷದ ಪವಾರ್, ಮುಂದಿನ ಅಧ್ಯಕ್ಷರನ್ನು ನೇಮಕ ಮಾಡಲು ಹಿರಿಯ ಎನ್‌ಸಿಪಿ ನಾಯಕರ ಸಮಿತಿಯನ್ನು ನಾನು ರಚಿಸಿದ್ದೇನೆ ಎಂದು ಹೇಳಿದರು. ರಾಜ್ಯಸಭಾ ಸದಸ್ಯ ಅವಧಿ ಇನ್ನೂ ಮೂರು ವರ್ಷಗಳು ಬಾಕಿ ಇದ್ದು, ಕಳೆದ 55 ವರ್ಷಗಳಿಂದ ಸಾಮಾಜಿಕ - ರಾಜಕೀಯಗಳ ಮೂಲಕ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಉಳಿದಿದ್ದೇನೆ. ಮುಂದೆ ಕೂಡ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು. ಆದರೆ, ಏಕಾಏಕಿ ಪವಾರ್​ ಅಧ್ಯಕ್ಷ ಸ್ಥಾನವನ್ನು ತೊರೆಯುವ ಘೋಷಣೆ ಮಾಡಿದ್ದು, ಸಮಾರಂಭದಲ್ಲಿ ನೆರೆದಿದ್ದ ಕಾರ್ಯಕರ್ತರಲ್ಲಿ ಒಂದು ಕ್ಷಣ ಆಘಾತ ಉಂಟು ಮಾಡಿತು. ಅವರ ಪರವಾಗಿ ಘೋಷಣೆಗಳನ್ನು ಕೂಗಿದರು. ಎನ್‌ಸಿಪಿ ನಾಯಕ ಜಯಂತ್ ಪಾಟೀಲ್ ಸೇರಿದಂತೆ ಅನೇಕರು ಕಣ್ಣೀರು ಹಾಕಿದರು. ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಪವಾರ್​ ಅವರಿಗೆ ಮನವಿ ಮಾಡಿದರು.

ಇಲ್ಲಿಯವರೆಗೂ ತಮ್ಮ ರಾಜಕೀಯ ಜೀವನದಲ್ಲಿ ನಡೆದ ಹಲವು ರಹಸ್ಯಗಳನ್ನು ಶರದ್ ಪವಾರ್ ಈ ಪುಸ್ತಕದಲ್ಲಿ ಬಹಿರಂಗ ಪಡಿಸಿದ್ದಾರೆ. ಜೊತೆಗೆ ಕಾರ್ಯಕ್ರಮದಲ್ಲಿ ಮಾತನಾಡಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ತಮ್ಮ ರಾಜಕೀಯ ಜೀವನ ಹೇಗಿತ್ತು ಎಂಬ ಮಾಹಿತಿಯನ್ನು ಹಂಚಿಕೊಂಡರು.

ಎನ್​ಸಿಪಿ ನಾಯಕರ ಪ್ರತಿಕ್ರಿಯೆ: ಶರದ್ ಪವಾರ್ ಅವರ ಈ ಘೋಷಣೆ ಬಗ್ಗೆ ಹಿರಿಯ ನಾಯಕರಾದ ಅಜಿತ್ ಪವಾರ್ ಮತ್ತು ಪ್ರಫುಲ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ. ಶರದ್ ಪವಾರ್ ರಾಜೀನಾಮೆ ಕುರಿತು ಎನ್‌ಸಿಪಿ ಸಮಿತಿಯ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗುತ್ತಾರೆ ಎಂದು ಅಜಿತ್ ಪವಾರ್ ಹೇಳಿದ್ದಾರೆ. ಮತ್ತೊಂದೆಡೆ, ಪ್ರಫುಲ್ ಪಟೇಲ್ ಮಾತನಾಡಿ ಶರದ್ ಪವಾರ್ ರಾಜೀನಾಮೆ ಘೋಷಿಸುವ ಮುನ್ನ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.

ಪವಾರ್ ರಾಜಕೀಯ ಜೀವನ: ಕಳೆದ 63 ವರ್ಷಗಳಿಂದ ನಿರಂತರವಾಗಿ ರಾಜಕೀಯದಲ್ಲಿರುವ ಶರದ್​ ಪವಾರ್, 1960ರ ಮೇ 1ರಂದು ಯಶವಂತರಾವ್ ಚವಾಣ್ ಅವರ ನೇತೃತ್ವದಲ್ಲಿ ಮಹಾರಾಷ್ಟ್ರ ರಚನೆಯಾದ ಅದೇ ದಿನ ಪುಣೆ ನಗರ ಯೂತ್ ಕಾಂಗ್ರೆಸ್‌ಗೆ ಸಕ್ರಿಯ ಕಾರ್ಯಕರ್ತನಾಗಿ ಸೇರ್ಪಡೆಯಾದರು. ಶಾಸಕ, ವಿಧಾನ ಪರಿಷತ್ ಸದಸ್ಯ, ಲೋಕಸಭೆ, ರಾಜ್ಯಸಭೆ ಸಂಸದರಾಗಿ ರಾಜ್ಯ ಮತ್ತು ಕೇಂದ್ರದಲ್ಲಿ ಸಚಿವರಾಗಿ, ನಾಲ್ಕು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸೇರಿ ಇತರ ಜವಾಬ್ದಾರಿಗಳನ್ನು ಸಲ್ಲಿಸಿದ್ದಾರೆ. 1999ರಲ್ಲಿ ಶರದ್​ ಪವಾರ್​ ಎನ್​ಸಿಪಿ ಸ್ಥಾಪಿಸಿದ್ದರು.

ಇದನ್ನೂ ಓದಿ: ಬಿಜೆಪಿ ಸೇರ್ತಾರಾ ಎನ್‌ಸಿಪಿ ನಾಯಕ ಅಜಿತ್ ಪವಾರ್? ಹೇಳಿದ್ದೇನು?

Last Updated : May 2, 2023, 3:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.