ETV Bharat / bharat

'ನಾನು ಎರಡೂ ರಾಜ್ಯಗಳಿಗೆ ಸೇರಿದವನು': ಕೃಷ್ಣಾ ನದಿ ನೀರು ಹಂಚಿಕೆ ವಿವಾದ ವಿಚಾರಣೆಗೆ 'ರಮಣ' ನಿರಾಕರಣೆ

author img

By

Published : Aug 2, 2021, 3:20 PM IST

ಇಂದು ಆಂಧ್ರಪ್ರದೇಶ ಮತ್ತು ತೆಲಂಗಾಣದ ನಡುವಿನ ಕೃಷ್ಣಾನದಿ ನೀರಿನ ವಿವಾದದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನಡೆಸಿದರು. ಈ ವೇಳೆ ನಾನು ಎರಡೂ ರಾಜ್ಯಗಳಿಗೆ ಸೇರಿರುವುದರಿಂದ ವಿಚಾರಣೆಯನ್ನು ಬೇರೊಂದು ಪೀಠಕ್ಕೆ ವರ್ಗಾವಣೆ ಮಾಡುತ್ತೇನೆ. ನಾನು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

Chief Justice NV Ramana
ಮುಖ್ಯ ನ್ಯಾಯಮೂರ್ತಿ ಎನ್​ವಿ ರಮಣ

ನವದೆಹಲಿ: ಆಂಧ್ರಪ್ರದೇಶ ಮತ್ತು ತೆಲಂಗಾಣದ ನಡುವಿನ ಕೃಷ್ಣಾನದಿ ನೀರಿನ ವಿವಾದದ ವಿಚಾರಣೆಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನಡೆಸಿದರು. ನಾನು ಎರಡು ರಾಜ್ಯಗಳಿಗೂ ಸೇರಿದವನು. ಇದರಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ. ಮಧ್ಯಸ್ಥಿಕೆ ಮೂಲಕ ಪ್ರಕರಣವನ್ನು ಬಗೆಹರಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.

ಮಧ್ಯಸ್ಥಿಕೆಯಿಂದ ಸಮಸ್ಯೆ ಪರಿಹರಿಸಿಕೊಳ್ಳಿ

ನಾನು ಈ ವಿಷಯವನ್ನು ಕಾನೂನುಬದ್ಧವಾಗಿ ಕೇಳಲು ಬಯಸುವುದಿಲ್ಲ. ನಾನು ಎರಡೂ ರಾಜ್ಯಗಳಿಗೆ ಸೇರಿದವನು. ಮಧ್ಯಸ್ಥಿಕೆಯಿಂದ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಿ, ನಾನು ಅದಕ್ಕೆ ಸಹಾಯ ಮಾಡುತ್ತೇನೆ. ಇಲ್ಲದಿದ್ದರೆ ಈ ಪ್ರಕರಣವನ್ನು ಇನ್ನೊಂದು ಪೀಠಕ್ಕೆ ವರ್ಗಾಯಿಸುತ್ತೇನೆ. ಎರಡು ರಾಜ್ಯಗಳು ನಿಮ್ಮ ನಿಮ್ಮ ಸರ್ಕಾರಗಳಿಗೆ ಮನವರಿಕೆ ಮಾಡಿ ವಿಷಯವನ್ನು ಇತ್ಯರ್ಥಪಡಿಸಬೇಕೇಂಬುದು ನನ್ನ ಆಶಯವಾಗಿದೆ. ನಾವು ಅನಗತ್ಯವಾಗಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ ಎಂದರು.

2015ರ ಒಪ್ಪಂದ ಉಲ್ಲಂಘನೆ ಆರೋಪ

ಆಂಧ್ರಪ್ರದೇಶ ತನ್ನ ನೆರೆಯ ತೆಲಂಗಾಣವು ವಿದ್ಯುತ್ ಉತ್ಪಾದನೆಗಾಗಿ ಕೃಷ್ಣಾ ನದಿಯಿಂದ ನೀರನ್ನು ಬೇರ್ಪಡಿಸುತ್ತಿದೆ. ಈ ಮೂಲಕ 2015ರ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ. 2014 ರಲ್ಲಿ ತೆಲಂಗಾಣವನ್ನು ಆಂಧ್ರಪ್ರದೇಶದಿಂದ ಬೇರ್ಪಟ್ಟಿದೆ. ಎರಡೂ ರಾಜ್ಯಗಳ ಮೂಲಕ ಹರಿಯುವ ಕೃಷ್ಣಾ ಮತ್ತು ಗೋದಾವರಿ ನದಿಗಳ ನೀರನ್ನು ಹಂಚಿಕೊಳ್ಳುವ ವಿಚಾರದಲ್ಲಿ ಎರಡು ರಾಜ್ಯಗಳ ನಡುವೆ ವಿವಾದ ಉಂಟಾಗಿತ್ತು.

2015 ರ ಒಪ್ಪಂದದ ಪ್ರಕಾರ ಕೃಷ್ಣಾ ನದಿಯ ನೀರನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ಅನುಕ್ರಮವಾಗಿ 66:34, ಅಂದರೆ 512 ಟಿಎಂಸಿ ಮತ್ತು 299 ಟಿಎಂಸಿ ಹಂಚಿಕೊಳ್ಳಬೇಕು ಎಂದು ಹೇಳುತ್ತದೆ. ತೆಲಂಗಾಣ ಶ್ರೀಶೈಲ, ನಾಗಾರ್ಜುನ ಸಾಗರ ಮತ್ತು ಪುಲಿಚಿಂತಲ ಜಲಾಶಯಗಳಿಂದ ಹೆಚ್ಚು ನೀರನ್ನು ಪಂಪ್ ಮಾಡುತ್ತಿದೆ ಎಂದು ಆಂಧ್ರಪ್ರದೇಶ ಸರ್ಕಾರ ಆರೋಪಿಸಿದೆ.

ಓದಿ : ಕೋವ್ಯಾಕ್ಸಿನ್ ಡೆಲ್ಟಾ ಪ್ಲಸ್​ ರೂಪಾಂತರಿ ವಿರುದ್ದ ಪರಿಣಾಮಕಾರಿ: ಐಸಿಎಂಆರ್

ಈ ಜಲಾಶಯಗಳು ಎರಡೂ ರಾಜ್ಯಗಳಿಗೂ ಸಂಬಂಧಿಸಿದ್ದಾಗಿದೆ. ಹೀಗಾಗಿ ಅದರ ಪ್ರದೇಶದಲ್ಲಿ ಕೆಳಭಾಗದ ನೀರಾವರಿಗೆ ದೊಡ್ಡ ಹಾನಿ ಉಂಟಾಗಿದೆ. ಈ ಜಲಾಶಯಗಳ ನಿಯಂತ್ರಣವನ್ನು ತೆಗೆದುಕೊಳ್ಳಲು ಜಲಶಕ್ತಿ ಸಚಿವಾಲಯಕ್ಕೆ ನಿರ್ದೇಶನಗಳನ್ನು ನೀಡುವಂತೆ ಆಂಧ್ರಪ್ರದೇಶವು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ. ಈ ವಿಷಯವನ್ನು ಬುಧವಾರ ಬೇರೆ ಬೇರೆ ಪೀಠವು ಆಲಿಸಲಿದ್ದು, ಆಂಧ್ರಪ್ರದೇಶವು ಪ್ರತಿಕ್ರಿಯೆ ನೀಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.