ETV Bharat / bharat

ಮಹಿಳೆಯರ ಅವಹೇಳನ : ಸುಗಂಧ ದ್ರವ್ಯದ ಜಾಹೀರಾತು ತೆಗೆದುಹಾಕಲು ಕೇಂದ್ರ ಸರ್ಕಾರ ಆದೇಶ

ಮಹಿಳೆಯರು ಪ್ರಚೋದನಾತ್ಮಕ ಹಾಗೂ ಅವಹೇಳನಕಾರಿಯಾಗಿ ತೋರಿಸಲಾದ ಜಾಹೀರಾತಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಇದು ಗಮನಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ..

I&B Ministry suspends controversial deodorant advertisement, orders inquiry
ಮಹಿಳೆಯರ ಅವಹೇಳನ: ಸುಗಂಧ ದ್ರವ್ಯದ ಜಾಹೀರಾತು ತೆಗೆದುಹಾಕಲು ಕೇಂದ್ರ ಸರ್ಕಾರ ಆದೇಶ
author img

By

Published : Jun 4, 2022, 6:03 PM IST

ನವದೆಹಲಿ : ಸುಗಂಧ ದ್ರವ್ಯದ ಬಗೆಗಿನ ಜಾಹೀರಾತಿನಲ್ಲಿ ಮಹಿಳೆಯರ ಬಗ್ಗೆ ಪ್ರಚೋದನಾತ್ಮಕ ಮತ್ತು ಅವಹೇಳನಕಾರಿಯಾಗಿ ತೋರಿಸಿದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಆ ಜಾಹೀರಾತನ್ನು ಕೂಡಲೇ ಅಮಾನತುಗೊಳಿಸಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶಿಸಿದೆ. ಅಲ್ಲದೇ, ಜಾಹೀರಾತು ಕೋಡ್‌ನ ಪ್ರಕಾರ ತನಿಖೆಯನ್ನೂ ಕೇಂದ್ರ ಸರ್ಕಾರ ಪ್ರಾರಂಭಿಸಿದೆ.

ಮಹಿಳೆಯರನ್ನು ಅವಹೇಳನಕಾರಿಯಾಗಿ ತೋರಿಸಲಾದ ಜಾಹೀರಾತಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಇದು ಗಮನಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಕೇಂದ್ರ ಸರ್ಕಾರ ಈ ಕ್ರಮಕೈಗೊಂಡಿದೆ. ಅಲ್ಲದೇ, ಜಾಹೀರಾತಿನ ವಿಡಿಯೋವನ್ನು ತಕ್ಷಣವೇ ತೆಗೆದು ಹಾಕುವಂತೆ ಟ್ವಿಟರ್​ ಮತ್ತು ಯೂಟ್ಯೂಬ್​ಗೂ ಪತ್ರ ಬರೆದು ಸಚಿವಾಲಯ ಸೂಚಿಸಿದೆ.

  • Both Government and ASCI have intervened to stop the further publishing of the offending advertisement of Layerr Shot. https://t.co/wZm5B9tonb

    — ASCI (@ascionline) June 4, 2022 " class="align-text-top noRightClick twitterSection" data=" ">

ಇತ್ತ, ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾ (ಎಎಸ್​​ಸಿಐ) ಕೂಡ ಈ ಬಗ್ಗೆ ಟ್ವೀಟ್​ ಮಾಡಿದೆ. ಈ ಜಾಹೀರಾತು ಎಎಸ್​​ಸಿಐ ಕಾಯ್ದೆಯ ಗಂಭೀರ ಉಲ್ಲಂಘನೆ ಮತ್ತು ಸಾರ್ವಜನಿಕ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಹೀಗಾಗಿ, ಇದರ ಬಗ್ಗೆ ತಕ್ಷಣ ಕ್ರಮಕೈಗೊಳ್ಳಲಾಗಿದೆ. ಈ ಜಾಹೀರಾತನ್ನು ಅಮಾನತುಗೊಳಿಸುವಂತೆ ಜಾಹೀರಾತುದಾರರಿಗೆ ಸೂಚಿಸಲಾಗಿದೆ. ಜೊತೆಗೆ ಈ ಕುರಿತು ತನಿಖೆಯನ್ನೂ ನಡೆಸಲಾಗುತ್ತಿದೆ ಎಂದು ತಿಳಿಸಿದೆ.

ಈ ಜಾಹೀರಾತಿನಲ್ಲಿ ಏನಿದೆ? : ಸುಗಂಧ ದ್ರವ್ಯದ 'ಶಾಟ್​' ಎಂಬ ಬ್ರಾಂಡ್‌ನ ಜಾಹೀರಾತು ಆಗಿದೆ. ಶಾಪಿಂಗ್​ ಮಾಲ್​​ನಲ್ಲಿ ಓರ್ವ ಮಹಿಳೆಯ ಹಿಂದೆ ನಾಲ್ವರು ಪುರುಷರು ನಿಂತಿರುತ್ತಾರೆ. ಆಗ ಆ ಪುರುಷರು ನಾವು ನಾಲ್ವರು ಇದ್ದೇವೆ. ಇದು (ಶಾಟ್​​ ಸುಗಂಧ ದ್ರವ್ಯ) ಒಂದೇ ಇದೆ. ಇದನ್ನು ಯಾರು ತೆಗೆದುಕೊಳ್ಳುತ್ತಾರೆ ಅಂತಾರೆ.

ಹೀಗಾಗಿ, ಅಲ್ಲಿದ್ದ ಮಹಿಳೆ ತಕ್ಷಣ ಆಘಾತಕ್ಕೊಳಗಾಗುತ್ತಾಳೆ. ಅಷ್ಟರಲ್ಲೇ ನಾಲ್ವರಲ್ಲಿ ಒಬ್ಬ ರ‍್ಯಾಕ್​ನಲ್ಲಿದ್ದ ಒಂದು 'ಶಾಟ್​' ಬಾಟಲಿಯನ್ನು ತೆಗೆದುಕೊಳ್ಳುತ್ತಾನೆ. ಆದ್ದರಿಂದ ಜಾಹೀರಾತಿನಲ್ಲಿ ಆ ಮಹಿಳೆಯನ್ನೇ ಉದ್ದೇಶಿಸಿ ಇದನ್ನು ತೋರಿಸಿದಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ, ಇದು ಅತ್ಯಾಚಾರಕ್ಕೆ ಉತ್ತೇಜಿಸಿದಂತೆ ಆಗಿದೆ ಎಂದೂ ನೆಟಿಜನ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹೊಸ ಗೆಳತಿಯನ್ನು ವಿಶ್ವಕ್ಕೆ ಪರಿಚಯಿಸಿದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್; ಗುಟ್ಟಾಗಿ ಉಳಿಯದ ಗುಪ್ತ ಡೇಟಿಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.