ETV Bharat / bharat

PM Ji ಅವರಿಗೆ ಯಾವ ಭದ್ರತಾ ಬೆದರಿಕೆ ಇತ್ತು? ಪಂಜಾಬ್​ ಸಿಎಂ ಚರಣ್​ಜಿತ್​ ಸಿಂಗ್​ ಚನ್ನಿ ಪ್ರಶ್ನೆ

author img

By

Published : Jan 8, 2022, 10:51 PM IST

PM Modi security breach in Punjab : ಪಂಜಾಬ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಇದೀಗ ಪಂಜಾಬ್ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

Modi security breach
Modi security breach

ಚಂಡೀಗಢ(ಪಂಜಾಬ್​): ಕಳೆದ ಮೂರು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಪಂಜಾಬ್​​ನಲ್ಲಿ ಭದ್ರತಾ ಲೋಪ ಎದುರಿಸಿದ್ದು, ಈ ವಿಚಾರವಾಗಿ ಪಂಜಾಬ್​ ಮುಖ್ಯಮಂತ್ರಿ ಚರಣ್​ಜಿತ್​ ಸಿಂಗ್​ ಚನ್ನಿ ಮಾತನಾಡಿದ್ದಾರೆ.

ಎಎನ್​ಐ ಸುದ್ದಿಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿರುವ ಚನ್ನಿ, ಪ್ರಧಾನಿ ಜೀ ಅವರಿಗೆ ಯಾವ ಭದ್ರತಾ ಬೆದರಿಕೆ ಇತ್ತು? ಇದನ್ನ ಕೇಳಲು ನನಗೆ ಬೇಸರವಾಗಿದೆ ಎಂದಿದ್ದಾರೆ. ಸುಮಾರು 1 ಕಿಲೋ ಮೀಟರ್​ ದೂರದ ವ್ಯಾಪ್ತಿಯಲ್ಲಿ ಯಾವುದೇ ಪ್ರತಿಭಟನಾಕಾರರು ಇರಲಿಲ್ಲ. ಮೋದಿ ಸುತ್ತಲೂ 600 ಭದ್ರತಾ ಸಿಬ್ಬಂದಿ, ಐಬಿ ಹಾಗೂ ಎಸ್​​ಪಿಜಿ ಭದ್ರತೆ ಇತ್ತು. ಇಷ್ಟಾದರೂ ಅವರಿಗೆ ಏನು ಅಪಾಯವಿರಬಹುದು? ಎಂದು ಪ್ರಶ್ನಿಸಿದ್ದಾರೆ.

ಮೋಧಿ ಭದ್ರತಾ ಲೋಪದ ಬಗ್ಗೆ ಪಂಜಾಬ್​ ಸಿಎಂ ಮಾತು

ಇದನ್ನೂ ಓದಿರಿ: ಮಹಾರಾಷ್ಟ್ರದಲ್ಲಿ ಕೋವಿಡ್ ಸ್ಫೋಟ: ಫೆ.15ರವರೆಗೆ ಶಾಲಾ-ಕಾಲೇಜ್​ ಕ್ಲೋಸ್

ಪಂಜಾಬ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಯಾವುದೇ ಬೆದರಿಕೆ ಇರಲಿಲ್ಲ. ಸಂಪೂರ್ಣವಾಗಿ ಸುರಕ್ಷತೆಯಲ್ಲಿದ್ದರೂ ಎಂದಿರುವ ಚನ್ನಿ, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾನು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ್ದು, ನಡೆದಿರುವ ವಿಚಾರವನ್ನ ವಿವರಿಸಿದ್ದೇನೆ ಎಂದಿದ್ದಾರೆ.

ಚು. ಆಯೋಗದ ನಿರ್ಧಾರ ಸ್ವಾಗತಿಸಿದ ಸಿಎಂ

ಪಂಜಾಬ್​​ನಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ನಿರ್ಧರಿಸಿರುವ ಕೇಂದ್ರ ಚುನಾವಣಾ ಆಯೋಗದ ನಿರ್ಧಾರ ಸ್ವಾಗತ ಮಾಡಿರುವ ಚನ್ನಿ, ಇಲ್ಲಿಯವರೆಗೆ ನಾವು ಕೇವಲ ಕೆಲಸ ಮಾಡುವ ಸರ್ಕಾರವಾಗಿದ್ದೇವು. ಆದರೆ, ಇದೀಗ ಚುನಾವಣೆ ಬಗ್ಗೆ ಯೋಚನೆ ಮಾಡಲು ಪ್ರಾರಂಭಿಸುತ್ತೇವೆ. ಒಟ್ಟು 111 ದಿನಗಳ ಕಾಲ ಪಂಜಾಬ್​​​ ಮುಖ್ಯಮಂತ್ರಿಯಾಗಲು ಅರ್ಹನೆಂದು ಪರಿಗಣಿಸಿದ್ದಕ್ಕಾಗಿ ಪಂಜಾಬ್ ಜನತೆ ಹಾಗೂ ಕಾಂಗ್ರೆಸ್​ಗೆ ಕೈ ಜೋಡಿಸಿ ಧನ್ಯವಾದ ಹೇಳುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.