ಹೈದರಾಬಾದ್: ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿ ಶನಿವಾರ 3.50 ಲಕ್ಷ ಬಿರಿಯಾನಿ ಆರ್ಡರ್‌ಗಳನ್ನು ಡೆಲಿವರಿ ಮಾಡಿದೆ. ಕಳೆದ ರಾತ್ರಿ 10.25 ರ ವೇಳೆಗೆ ದೇಶಾದ್ಯಂತ 61,000 ಪಿಜ್ಜಾಗಳನ್ನು ರವಾನಿಸಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ಟ್ವಿಟರ್‌ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಹೈದರಾಬಾದ್ ಬಿರಿಯಾನಿಗೆ ಶೇ 75.4 ರಷ್ಟು ಆರ್ಡರ್‌ಗಳು ಬಂದಿವೆ. ನಂತರ ಲಕ್ನೋವಿ- ಶೇ.14.2 ಮತ್ತು ಕೋಲ್ಕತ್ತಾ - ಶೇ 10.4ರಷ್ಟು ಆರ್ಡರ್ ಮಾಡಲಾಗಿದೆ.
ಅಗ್ರಸ್ಥಾನದಲ್ಲಿ ಬಿರಿಯಾನಿ: ಹೆಚ್ಚು ವಿತರಿಸಲಾದ ಆಹಾರದಲ್ಲಿ 3.50 ಲಕ್ಷ ಆರ್ಡರ್‌ಗಳನ್ನು ಪಡೆಯುವ ಮೂಲಕ ಬಿರಿಯಾನಿ ಅಗ್ರ ಸ್ಥಾನದಲ್ಲಿದೆ ಎಂದು ಮೂಲಗಳು ತಿಳಿಸಿವೆ. ಸ್ವಿಗ್ಗಿ ಆ್ಯಪ್ ಶನಿವಾರ ಸಂಜೆ 7.20ರ ಸುಮಾರಿಗೆ 1.65 ಲಕ್ಷ ಬಿರಿಯಾನಿ ಆರ್ಡರ್‌ಗಳನ್ನು ಡೆಲಿವರಿ ಮಾಡಿದೆ. ಹೈದರಾಬಾದ್ ಬಿರಿಯಾನಿ ಮಾರಾಟದಲ್ಲಿ ಟಾಪ್ನಲ್ಲಿರುವ ರೆಸ್ಟೋರೆಂಟ್‌ಗಳಲ್ಲಿ ಒಂದಾದ ಬಾವರ್ಚಿ, 2021 ರ ಹೊಸ ವರ್ಷದ ಮುನ್ನಾದಿನದಂದು ನಿಮಿಷಕ್ಕೆ ಎರಡು ಬಿರಿಯಾನಿಗಳನ್ನು ಡೆಲಿವರಿ ಮಾಡಿತ್ತು. ಡಿಸೆಂಬರ್ 31, 2022ರ ದಿನ ಬೇಡಿಕೆಗೆ ತಕ್ಕಂತೆ ಪೂರೈಸಲು 15 ಟನ್ ಬಿರಿಯಾನಿಯನ್ನು ಸಿದ್ಧಪಡಿಸಿತ್ತು.
61,287 ಪಿಜ್ಜಾ ಡೆಲಿವರಿ: @dominos_india, 61,287 ಪಿಜ್ಜಾಗಳನ್ನು ವಿತರಿಸಲಾಗಿದೆ. ಇದರೊಂದಿಗೆ ಓರೆಗಾನೊ ಪ್ಯಾಕೆಟ್‌ಗಳ ಸಂಖ್ಯೆಯನ್ನು ಮಾತ್ರ ನಾವು ಊಹಿಸಬಹುದು ಎಂದು ಸ್ವಿಗ್ಗಿ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದೆ. ಶನಿವಾರ ಸಂಜೆ 7 ಗಂಟೆಗೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ 1.76 ಲಕ್ಷ ಪ್ಯಾಕೆಟ್‌ಗಳ ಚಿಪ್ಸ್ಗಳನ್ನು ಆರ್ಡರ್ ಮಾಡಲಾಗಿದೆ ಎಂದು ಅದು ಹೇಳಿದೆ. ಕಿರಾಣಿ ವಿತರಣಾ ವೇದಿಕೆಯಾದ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ 2,757 ಪ್ಯಾಕೆಟ್ ಡ್ಯೂರೆಕ್ಸ್ ಕಾಂಡೋಮ್‌ಗಳನ್ನು ವಿತರಿಸಲಾಗಿದೆ ಎಂದು ಅದು ಹೇಳಿದೆ.
12,344 ಖಿಚಡಿ ಆರ್ಡರ್: ನಾವು ಈಗಾಗಲೇ 1.3 ಮಿಲಿಯನ್ ಆರ್ಡರ್‌ಗಳನ್ನು ತಲುಪಿಸಿದ್ದೇವೆ ಮತ್ತು ಎಣಿಕೆ ಮಾಡಿದ್ದೇವೆ. ನಮ್ಮ ಫ್ಲೀಟ್ ಮತ್ತು ರೆಸ್ಟೋರೆಂಟ್ ಪಾಲುದಾರರು ಈ ಹೊಸ ವರ್ಷವನ್ನು ಅವಿಸ್ಮರಣೀಯವಾಗಿಸಲು ಸಜ್ಜಾಗಿದ್ದಾರೆ. ಪ್ರೊ-ಟಿಪ್: ರಶ್ ಕಡಿಮೆ ಮಾಡಲು ಬೇಗ ಆರ್ಡರ್ ಮಾಡಿ ಎಂದು ಸ್ವಿಗ್ಗಿ ಸಿಇಒ ಶ್ರೀಹರ್ಷ ಮೆಜೆಟಿ ಶನಿವಾರ ಸಂಜೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಹೊಸ ವರ್ಷದ ಮುನ್ನಾದಿನದಂದು ರಾತ್ರಿ 9.18 ರ ಹೊತ್ತಿಗೆ ಭಾರತದಾದ್ಯಂತ ಸುಮಾರು 12,344 ಜನರು ಖಿಚಡಿಯನ್ನು ಆರ್ಡರ್ ಮಾಡಿದ್ದಾರೆ.
ಇದನ್ನೂ ಓದಿ: ವೀಲ್‌ಚೇರ್ ಸ್ಕೂಟರ್ನಲ್ಲಿ ಫುಡ್ ಡೆಲಿವರಿ!: ಮಹಿಳಾ ಸ್ವಿಗ್ಗಿ ಏಜೆಂಟ್ ಛಲಬಲಕ್ಕೆ ಸೆಲ್ಯೂಟ್