ETV Bharat / bharat

ಫೋರ್ಬ್ಸ್​​ನ '30 ಅಂಡರ್ 30 ಏಷ್ಯಾ ಕ್ಲಾಸ್ ಆಫ್ 2022'ರ ಪಟ್ಟಿಯಲ್ಲಿ ಹೈದರಾಬಾದ್ ಯುವಕನಿಗೆ ಸ್ಥಾನ! - ವಿಶ್ವದ ಅತ್ಯಂತ ವೇಗದ ಮಾನವ ಕ್ಯಾಲ್ಕುಲೇಟರ್

ಹೈದರಾಬಾದ್‌ನ ಈ ಜೊನ್ನಲಗಡ್ಡ ನೀಲಕಂಠ ಭಾನು ಪ್ರಕಾಶ್ ವಿಶ್ವದ ಅತ್ಯಂತ ವೇಗದ ಮಾನವ ಕ್ಯಾಲ್ಕುಲೇಟರ್ ಎಂದೇ ಹೆಸರು ಪಡೆದಿದ್ದಾರೆ. ವಿದ್ಯಾರ್ಥಿಗಳಲ್ಲಿ ಗಣಿತದ ಭಯ ಹೋಗಲಾಡಿಸುವ ಉದ್ದೇಶದಿಂದ 'ಭಂಜು' ಎಂಬ ವಾಣಿಜ್ಯ ಶಿಕ್ಷಣ ಟೆಕ್ ಸ್ಟಾರ್ಟ್-ಅಪ್​ ಆರಂಭಿಸಿದ್ದಾರೆ.

Hyderabad youth Bhanu Prakash on Forbes list
ಫೋರ್ಬ್ಸ್​​ನ ಪಟ್ಟಿಯಲ್ಲಿ ಹೈದರಾಬಾದ್​ನ ನೀಲಕಂಠ ಭಾನು ಪ್ರಕಾಶ್​ಗೆ ಸ್ಥಾನ
author img

By

Published : May 27, 2022, 7:24 PM IST

ಹೈದರಾಬಾದ್ (ತೆಲಂಗಾಣ): ಹೈದರಾಬಾದ್‌ನ 22 ವರ್ಷದ ಗಣಿತಶಾಸ್ತ್ರಜ್ಞ ನೀಲಕಂಠ ಭಾನು ಪ್ರಕಾಶ್ ಫೋರ್ಬ್ಸ್​​ನ '30 ಅಂಡರ್ 30 ಏಷ್ಯಾ ಕ್ಲಾಸ್ ಆಫ್ 2022'ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿರುವ ಒಟ್ಟು 22 ದೇಶಗಳ ಪೈಕಿ ಭಾರತವು 61 ಸದಸ್ಯರೊಂದಿಗೆ ಅಗ್ರಸ್ಥಾನದಲ್ಲಿದೆ.

ಕೊರೊನಾ ಮತ್ತು ಲಾಕ್‌ಡೌನ್ ಸಂದರ್ಭದಲ್ಲಿ ಏಷ್ಯಾ - ಪೆಸಿಫಿಕ್ ಹಲವು ಸವಾಲುಗಳನ್ನು ಎದುರಿಸಿತ್ತು. ಇದರ ನಡುವೆಯೂ ಯುವಕರು ಹೊಸ ಆಲೋಚನೆಗಳೊಂದಿಗೆ ನೂತನ ಉದ್ಯಮಗಳು ಮತ್ತು ಯೋಜನೆಗಳನ್ನು ಸ್ಥಾಪಿಸಿ ಯಶಸ್ಸು ಸಾಧಿಸಿದ್ದಾರೆ. ಫೋರ್ಬ್ಸ್ 2022ರ 30 ವರ್ಷದೊಳಗಿನ ಸಾಧಕರ ಪಟ್ಟಿ ಮಾಡಿದೆ. ಇದಕ್ಕೆ 4 ಸಾವಿರ ಜನರ ನಾಮ ನಿರ್ದೇಶನಗಳು ಬಂದಿವೆ. ಕೊನೆಗೆ 10 ವಿಭಾಗಗಳಲ್ಲಿ ತಲಾ 30 ಮಂದಿಯಂತೆ 300 ಜನರನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಒಲಿಂಪಿಕ್ ಪದಕ ವಿಜೇತರಿಂದ ಸ್ಟಾರ್ಟ್ - ಅಪ್ ಸಂಸ್ಥಾಪಕರವರೆಗೆ ಎಲ್ಲರೂ ಇದ್ದಾರೆ.

ಅಂತಿಮ ಪಟ್ಟಿಯಲ್ಲಿ ಒಟ್ಟು 22 ದೇಶಗಳ ಪೈಕಿ ಭಾರತವು 61 ಸದಸ್ಯರೊಂದಿಗೆ ಅಗ್ರಸ್ಥಾನದಲ್ಲಿದೆ. ನಂತರದಲ್ಲಿ ಸಿಂಗಾಪುರ (34), ಜಪಾನ್ (33), ಆಸ್ಟ್ರೇಲಿಯಾ (32), ಇಂಡೋನೇಷ್ಯಾ (30) ಮತ್ತು ಚೀನಾ (28) ಸ್ಥಾನ ಪಡೆದಿದೆ. ಆಗ್ನೇಯ ಏಷ್ಯಾದಿಂದಲೇ ಒಟ್ಟಾರೆ 90 ಜನರು ಸ್ಥಾನ ಪಡೆದಿದ್ದಾರೆ. ಸ್ಟಾರ್ಟ್-ಅಪ್ ವೃದ್ಧಿಯೊಂದಿಗೆ ಬಂಡವಾಳ ಹೂಡಿಕೆ ಆಕರ್ಷಿಸುತ್ತಿದೆ ಎಂದು ಫೋರ್ಬ್ಸ್ ಹೇಳಿದೆ.

ವಿಶ್ವದ ಅತ್ಯಂತ ವೇಗದ ಮಾನವ ಕ್ಯಾಲ್ಕುಲೇಟರ್: ಹೈದರಾಬಾದ್‌ನ ಈ ಜೊನ್ನಲಗಡ್ಡ ನೀಲಕಂಠ ಭಾನು ಪ್ರಕಾಶ್ ವಿಶ್ವದ ಅತ್ಯಂತ ವೇಗದ ಮಾನವ ಕ್ಯಾಲ್ಕುಲೇಟರ್ ಎಂದೇ ಹೆಸರು ಪಡೆದಿದ್ದಾರೆ. ನಾಲ್ಕು ವಿಶ್ವ ದಾಖಲೆಗಳು ಮತ್ತು 50 ಲಿಮ್ಕಾ ಬುಕ್​ ಆಫ್ ರೆಕಾರ್ಡ್​​​ಗಳನ್ನು ಮುರಿದಿದ್ದಾರೆ.

ವಿದ್ಯಾರ್ಥಿಗಳಲ್ಲಿ ಗಣಿತದ ಭಯ ಹೋಗಲಾಡಿಸುವ ಉದ್ದೇಶದಿಂದ 'ಭಂಜು' ಎಂಬ ವಾಣಿಜ್ಯ ಶಿಕ್ಷಣ ಟೆಕ್ ಸ್ಟಾರ್ಟ್-ಅಪ್​ ಆರಂಭಿಸಿದ್ದಾರೆ. ಲೈಟ್‌ಸ್ಪೀಡ್ ವೆಂಚರ್‌ಗಳಿಂದ ಸ್ಟಾರ್ಟ್‌ಅಪ್ ಆರಂಭದಲ್ಲೇ ಎರಡು ಮಿಲಿಯನ್ ಡಾಲರ್‌ಗಳ ಹೂಡಿಕೆ ಹೊಂದಿದೆ. ಪ್ರಪಂಚದಾದ್ಯಂತ ಸಾವಿರಾರು ವಿದ್ಯಾರ್ಥಿಗಳ ಮೇಲೆ ಸ್ಟಾರ್ಟ್ - ಅಪ್ ಸಾಕಷ್ಟು ಪ್ರಭಾವ ಬೀರಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.