ಹೈದರಾಬಾದ್(ತೆಲಂಗಾಣ): ಪಬ್ನೊಳಗೆ ಮೂರು ವರ್ಷದ ಹೆಣ್ಣು ಮಗುವಿಗೆ ಪ್ರವೇಶ ನೀಡಿದ್ದಕ್ಕೆ ಹೈದರಾಬಾದ್ನ ವಾಲ್ಸ್ಟ್ರೀಟ್ ಪಬ್ನ ಆಯೋಜಕರಿಗೆ ಸಂಕಷ್ಟ ಎದುರಾಗಿದ್ದು, ಹೈದರಾಬಾದ್ ಪೊಲೀಸರು ನೋಟಿಸ್ ನೀಡಿದ್ದಾರೆ.
ಹೈದರಾಬಾದ್ನ ಗಚ್ಚಿಬೌಲಿಯಲ್ಲಿರುವ ವಾಲ್ಸ್ಟ್ರೀಟ್ ಪಬ್ಗೆ ತನ್ನ ಕುಟುಂಬದವರೊಂದಿಗೆ ಮೂರು ವರ್ಷದ ಬಾಲಕಿ ಕೂಡಾ ಬಂದಿದ್ದಳು. ಇದನ್ನು ಓರ್ವ ವ್ಯಕ್ತಿ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನು.
ಈ ವಿಡಿಯೋ ನೋಡಿದ ಪೊಲೀಸರು, ಬಾಲಕಿಗೆ ಯಾವ ರೀತಿಯಲ್ಲಿ ಪಬ್ಗೆ ಅನುಮತಿ ನೀಡಲಾಯಿತು ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿರುವುದು ಮಾತ್ರವಲ್ಲದೇ, ಪಬ್ನ ಮಾಲೀಕನಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಪಬ್ ಒಳಗಿನ ಸಿಸಿಟಿವಿ ಕ್ಯಾಮರಾಗಳನ್ನು ಕೂಡಾ ಪರಿಶೀಲನೆ ನಡೆಸಲಾಗುತ್ತಿದೆ. ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.
ಇದನ್ನೂ ಓದಿ: Afghanistan: ಪಂಜ್‌ಶೀರ್‌ಗೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ ತಾಲಿಬಾನ್!