ETV Bharat / bharat

ಸೈನಾ ನೆಹ್ವಾಲ್​ ವಿರುದ್ಧ ಆಕ್ಷೇಪಾರ್ಹ ಟ್ವೀಟ್: ನಟ ಸಿದ್ಧಾರ್ಥ್​ ವಿರುದ್ಧ ಪ್ರಕರಣ ದಾಖಲು - ಸೈನಾ ನೆಹ್ವಾಲ್​ ವಿರುದ್ಧ ಆಕ್ಷೇಪಾರ್ಹ ಹೇಳಿಕೆ

ಸೈನಾ ನೆಹ್ವಾಲ್ ವಿರುದ್ಧ ಆಕ್ಷೇಪಾರ್ಹ ಕಮೆಂಟ್ ಮಾಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಸಿದ್ಧಾರ್ಥ್​ ವಿರುದ್ಧ ಇದೀಗ ಕೇಸು ದಾಖಲಾಗಿದೆ.

Hyderabad police book actor Siddharth
Hyderabad police book actor Siddharth
author img

By

Published : Jan 12, 2022, 10:38 PM IST

ಹೈದರಾಬಾದ್​: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್​ ವಿರುದ್ಧ ವಿವಾದಾತ್ಮಕ ಟ್ವೀಟ್‌ ಮಾಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವ ನಟ ಸಿದ್ಧಾರ್ಥ್​ ವಿರುದ್ಧ ಪ್ರಕರಣ ದಾಖಲಾಗಿದೆ.

ಪಂಜಾಬ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ವಿಚಾರಕ್ಕೆ ಸಂಬಂಧಿಸಿದಂತೆ ನೆಹ್ವಾಲ್​ ಮಾಡಿದ್ದ ಟ್ವೀಟ್​ಗೆ ಅವಹೇಳನಕಾರಿಯಾಗಿ ಪ್ರತಿಕ್ರಿಯೆ ನೀಡಿದ್ದ ಸಿದ್ಧಾರ್ಥ್​ ವಿರುದ್ಧ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಅವರು ಕ್ಷಮೆ ಯಾಚನೆ ಮಾಡಿದ್ದರು. ಇದೀಗ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

Hyderabad police book actor Siddharth

ಇದನ್ನೂ ಓದಿ: ನಟ ಸಿದ್ಧಾರ್ಥ್ ಕ್ಷಮೆ ಕೇಳಿದ್ದರಿಂದ ಸಂತಸವಾಗಿದೆ: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್

ಹೈದರಾಬಾದ್​​ ಸೈಬರ್​ ಕ್ರೈಂ ಪೊಲೀಸ್ ವಿಭಾಗ ಪ್ರಕರಣ ದಾಖಲು ಮಾಡಿಕೊಂಡಿದ್ದಾಗಿ ತಿಳಿಸಿದ್ದು, ಸಿದ್ಧಾರ್ಥ್​ ವಿರುದ್ಧ ಮಹಿಳೆಯೋರ್ವರು ನೀಡಿರುವ ದೂರಿನ ಆಧಾರದ ಮೇಲೆ ಸೆಕ್ಷನ್​​ 509(ಮಹಿಳೆಯರ ಮಾನಹಾನಿ) ಅಡಿಯಲ್ಲಿ ದೂರು ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಮಹಿಳಾ ಆಯೋಗ, ಸಿದ್ಧಾರ್ಥ್ ಮಾಡಿರುವ ಟ್ವೀಟ್ ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಇದೆ. ತಕ್ಷಣವೇ ಅವರ ಟ್ವಿಟರ್​ ಅಕೌಂಟ್ ಬ್ಲಾಕ್ ಮಾಡುವಂತೆ ಮನವಿ ಮಾಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.