ETV Bharat / bharat

ಹೈದರಾಬಾದ್​ನಲ್ಲಿ ಸಿಗುವ ಈ ಚಹಾ ಬೆಲೆ ಕೇಳಿದರೆ ಅಚ್ಚರಿಯಾಗುತ್ತದೆ.. - ಹೈದರಾಬಾದ್​ನಲ್ಲಿ ವಿಶೇಷ ಚಹಾ

ಗೋಲ್ಡನ್ ಟಿಪ್ಸ್ ಬ್ಲ್ಯಾಕ್ ಟೀ ಪೌಡರ್ ಅನ್ನು ಅಸ್ಸೋಂನಲ್ಲಿ ನಡೆದ ಹರಾಜಿನಲ್ಲಿ ಪ್ರತಿ ಕೆಜಿಗೆ 75 ಸಾವಿರ ರೂಪಾಯಿಯಂತೆ ಈ ಕೆಫೆ ಮಾಲೀಕರು ಗೆದ್ದಿದ್ದಾರೆ. ಅಪರೂಪದ ರುಚಿ ಹೊಂದಿರುವ ಈ ಟೀಯನ್ನು ಗ್ರಾಹಕರಿಗೆ ಪರಿಚಯಿಸಲಾಗುತ್ತದೆ..

Hyderabad: Niloufer Cafe presents a cup of tea for Rs 1000
ಹೈದರಾಬಾದ್​ನಲ್ಲಿ ಸಿಗುವ ಈ ಚಹಾ ಬೆಲೆ ಕೇಳಿದರೆ ಅಚ್ಚರಿಯಾಗುತ್ತದೆ..!
author img

By

Published : Oct 16, 2021, 2:38 PM IST

ಹೈದರಾಬಾದ್ ​​​: ಸಾಮಾನ್ಯವಾಗಿ ಒಂದು ಟೀ ಬೆಲೆ ಎಷ್ಟಿರುತ್ತದೆ? ಐದು ರೂಪಾಯಿ, ಕೆಲವೊಮ್ಮೆ 10 ರೂಪಾಯಿ. ದುಬಾರಿ ರೆಸ್ಟೋರೆಂಟ್​ಗಳಲ್ಲಿ ಟೀ ಬೆಲೆ ನೂರು ರೂಪಾಯಿ ಇದ್ದರೂ ಇರಬಹುದು. ಆದರೆ, ಈ ಕೆಫೆಯಲ್ಲಿ ಒಂದು ಟೀ ಬೆಲೆ ಸಾವಿರ ರೂಪಾಯಿ.

ಹೈದರಾಬಾದ್‌ನಲ್ಲಿರುವ ನಿಲೋಫರ್ ಕೆಫೆಯಲ್ಲಿ ಒಂದು ಟೀ ಬೆಲೆ ಸಾವಿರ ರೂಪಾಯಿ. ಥರಹೇವಾರಿ ಟೀ ಮತ್ತು ಬಿಸ್ಕೇಟ್​ಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ಈಗ ಅವರು ಹೈದರಾಬಾದ್​ನ ಬಂಜಾರಾ ಹಿಲ್ಸ್​ನಲ್ಲಿ ಈ ದುಬಾರಿ ಚಹಾ ಪರಿಚಯಿಸುತ್ತಿದ್ದಾರೆ.

ಟೀ ಬೆಲೆ ಏಕೆ ಜಾಸ್ತಿ?

ಈ ಚಹಾವನ್ನು ಗೋಲ್ಡನ್ ಟಿಪ್ಸ್​​ ಬ್ಲ್ಯಾಕ್ ಟೀ ಪೌಡರ್​ನಿಂದ ಮಾಡಲಾಗುತ್ತದೆ. ಈ ಚಹಾ ಪುಡಿಯನ್ನು ಕೆಫೆಯ ಮಾಲೀಕರು ಹರಾಜಿನಲ್ಲಿ ಗೆದ್ದ ಕಾರಣದಿಂದ ಹೆಚ್ಚು ಬೆಲೆಗೆ ಈ ಟೀ ಮಾರಲಾಗುತ್ತದೆ. ಗೋಲ್ಡನ್ ಟಿಪ್ಸ್ ಬ್ಲ್ಯಾಕ್ ಟೀ ಪೌಡರ್ ಅನ್ನು ಅಸ್ಸೋಂನಲ್ಲಿ ನಡೆದ ಹರಾಜಿನಲ್ಲಿ ಪ್ರತಿ ಕೆಜಿಗೆ 75 ಸಾವಿರ ರೂಪಾಯಿಯಂತೆ ಈ ಕೆಫೆ ಮಾಲೀಕರು ಗೆದ್ದಿದ್ದಾರೆ. ಅಪರೂಪದ ರುಚಿ ಹೊಂದಿರುವ ಈ ಟೀಯನ್ನು ಗ್ರಾಹಕರಿಗೆ ಪರಿಚಯಿಸಲಾಗುತ್ತದೆ ಎಂದು ಕೆಫೆ ಮಾಲೀಕರು ಹೇಳಿದ್ದಾರೆ.

ಇದನ್ನೂ ಓದಿ: ಉಳ್ಳಾಲದಲ್ಲಿ ಬೈಕ್​ ಅಪಘಾತ.. ಇಬ್ಬರು ಯುವಕರ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.