ಗುವಾಹಟಿ (ಅಸ್ಸಾಂ): ಈಶಾನ್ಯ ರಾಜ್ಯ ಅಸ್ಸೋಂನಲ್ಲಿ ಮಾವೋವಾದಿ ನಾಯಕ ಕಾಂಚನ್ ದಾ ಅಲಿಯಾಸ್ ಅರುಣ್ ಕುಮಾರ್ ಭಟ್ಟಾಚಾರ್ಯ ಬಂಧನದ ನಂತರ ನಕ್ಸಲರ ಕುರಿತು ಹಲವು ಹೊಸ ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಇಲ್ಲಿನ ಬರಾಕ್ ಕಣಿವೆಯ ವಿವಿಧ ಚಹಾ ತೋಟಗಳಲ್ಲಿ ಮಾವೋವಾದಿಗಳ ಬೃಹತ್ ಜಾಲ ರೂಪುಗೊಂಡಿರುವ ಶಂಕೆ ವ್ಯಕ್ತವಾಗಿದ್ದು, ಇದೀಗ ಗಂಡ-ಹೆಂಡತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಎಐ) ಬಂಧಿಸಿದೆ.
ಭಾನುವಾರ ಕರೀಂಗಂಜ್‌ನ ಪಥರ್‌ಕಂಡಿಯ ಸೋನಾಖಿರಾದಲ್ಲಿ ನೆಲೆಸಿದ್ದ ದಂಪತಿಯಾದ ರಾಜು ಒರಾಂಗ್ ಮತ್ತು ಪಿಂಕಿ ಓರಾಂಗ್ ಎಂಬುವವರನ್ನು ಎನ್‌ಐಎ ಬಂಧಿಸಿದೆ. ಅಧಿಕಾರಿಗಳ ತಂಡ ಇವರ ಮನೆ ಮೇಲೆ ದಾಳಿ ನಡೆಸಿದೆ. ಈ ವೇಳೆ ಲ್ಯಾಪ್‌ಟಾಪ್‌ಗಳು, ಪೇಂಟಿಂಗ್ ಪೆನ್ಸಿಲ್‌ಗಳು, ವಿವಿಧ ಪತ್ರಿಕೆಗಳ ಪೇಪರ್ ಕಟಿಂಗ್‌ಗಳು, ನಕ್ಷೆಗಳು, ಮಾವೋವಾದಿ ಚಿಂತನೆಯತ್ತ ಸೆಳೆಯುವ ಪುಸ್ತಕಗಳು ಹಾಗೂ ಎರಡು ಮೊಬೈಲ್‌ಗಳು ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಅಲ್ಲದೇ, ಎನ್‌ಐಎ ಅಧಿಕಾರಿಗಳು ಈ ದಂಪತಿಯನ್ನು ವಿಚಾರಣೆಗೂ ಒಳಪಡಿದ್ದಾರೆ. ನಕ್ಸಲ್ ಉನ್ನತ ನಾಯಕರು ವಿವಿಧ ಸಮಯದಲ್ಲಿ ಬಂದು ಇವರ ಮನೆಯನ್ನು ಆಶ್ರಯವಾಗಿ ಬಳಸುತ್ತಿದ್ದರು. ರಾಜು ಪತ್ನಿ ಪಿಂಕಿ ನಕ್ಸಲರೊಂದಿಗೆ ನಿಕಟ ಸಂಪರ್ಕದಲ್ಲಿದ್ದರು ಎನ್ನಲಾಗ್ತಿದೆ.
ಇದನ್ನೂ ಓದಿ: ನಾಸಿಕ್ ಬಳಿ ಹಳಿ ತಪ್ಪಿದ ಲೋಕಮಾನ್ಯ ತಿಲಕ್ ಎಕ್ಸ್ಪ್ರೆಸ್ ರೈಲು