ETV Bharat / bharat

Bride secret: ಮಧುಚಂದ್ರದ ದಿನವೇ ಪತ್ನಿ ಹೆಣ್ಣಲ್ಲ ಎಂದು ತಿಳಿಯಿತು.. ಮರ್ಯಾದೆ ವಿಷ್ಯ ಎಂದು ಸುಮ್ಮನಿದ್ದ ಯುವಕನಿಗೆ ಏಳು ವರ್ಷದ ನಂತರ ಸಿಕ್ತು ವಿಚ್ಛೇದನ! - ಕೌಟುಂಬಿಕ ನ್ಯಾಯಾಲಯ

ತನ್ನ ಪತ್ನಿ ಪರಿಪೂರ್ಣ ಮಹಿಳೆಯಲ್ಲ ಎಂದು ಮಧುಚಂದ್ರದ ದಿನವೇ ಗೊತ್ತಾಗಿತ್ತು. ಈ ವಿಷಯ ಬಹಿರಂಗವಾದರೆ ತನ್ನ ಮಾನ ಹರಾಜು ಆಗುತ್ತದೆ ಎಂದು ಸುಮ್ಮನಿದ್ದ ಯುವಕನೋರ್ವನಿಗೆ ಏಳು ವರ್ಷಗಳ ನಂತರ ವಿಚ್ಛೇದನ ಸಿಕ್ಕಿದೆ.

Bride secret: ಮಧುಚಂದ್ರದ ದಿನವೇ ತನ್ನ ಪತ್ನಿ ಪರಿಪೂರ್ಣ ಮಹಿಳೆಯಲ್ಲ ಎಂದು ತಿಳಿಯಿತು... ಏಳು ವರ್ಷಗಳ ನಂತರ ಸಿಕ್ತು ವಿಚ್ಛೇದನ!
Husband realized his wife was not a woman on honeymoon: Divorced after 7 years
author img

By

Published : Jun 17, 2023, 7:52 PM IST

ಆಗ್ರಾ (ಉತ್ತರ ಪ್ರದೇಶ): ಪ್ರತಿಯೊಬ್ಬರಿಗೂ ತಮ್ಮ ಮದುವೆಯ ಅನೇಕ ಕನಸುಗಳು ಇರುತ್ತಾರೆ. ಯುವಕರಾಗಲಿ, ಯುವತಿಯರಾಗಲಿ ಮದುವೆ ಸಂಬಂಧ ಬೆಸೆದ ಕೂಡಲೇ ಸಾಂಸಾರಿಕ ಜೀವನದ ಬಗ್ಗೆ ಸಾಕಷ್ಟು ಆಸೆಗಳನ್ನು ಕಟ್ಟಿಕೊಂಡಿರುತ್ತಾರೆ. ಆದರೆ, ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಯುವಕನೊಬ್ಬ ತನ್ನ ಬಾಳಿನಲ್ಲಿ ವಿಚಿತ್ರ ಸನ್ನಿವೇಶ ಎದುರಿಸಿದ್ದು, ಬರೋಬ್ಬರಿ ಏಳು ವರ್ಷಗಳ ನಂತರ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾನೆ.

ಇದನ್ನೂ ಓದಿ: ಹನಿಮೂನ್​ಗೆ ಕರೆದುಕೊಂಡು ಹೋಗಿ ಪತ್ನಿಯ ಅಶ್ಲೀಲ ವಿಡಿಯೋ, ಫೋಟೋ ತೆಗೆದ ಪತಿ... ಹಣಕ್ಕಾಗಿ ಬೇಡಿಕೆ

ಹೌದು, ಇಲ್ಲಿನ ಯುವಕನೊಬ್ಬ ಏಳು ವರ್ಷಗಳ ಹಿಂದೆ ಎಂದರೆ 2016ರ ಜನವರಿ 27ರಂದು ವಿವಾಹವಾಗಿದ್ದ. ವಿಜೃಂಭಣೆಯಿಂದ ಮದುವೆ ಸಮಾರಂಭ ನಡೆಸಿತ್ತು. ಅದ್ಧೂರಿ ಮೆರವಣಿಗೆಯೊಂದಿಗೆ ಮರು ದಿನ ನವ ವಧು ತನ್ನ ಗಂಡನ ಮನೆಗೆ ಬಂದಿದ್ದಳು. ವಧುವಿನ ಆಗಮನದ ಸಂದರ್ಭದಲ್ಲಿ ಹಲವು ವಿಧಿವಿಧಾನಗಳನ್ನು ನೆರವೇರಿಸಿ ಬರ ಮಾಡಿಕೊಳ್ಳಲಾಗಿತ್ತು. ಈ ಮದುವೆಯಿಂದ ಕುಟುಂಬದಲ್ಲಿ ಎಲ್ಲರೂ ತುಂಬಾ ಸಂತೋಷಪಟ್ಟಿದ್ದರು. ಇದಾದ ಬಳಿಕ ಮೊದಲ ರಾತ್ರಿಗೆಂದು ಯುವಕ ತನ್ನ ಪತ್ನಿಯೊಂದಿಗೆ ಕೋಣೆ ಸೇರಿದ್ದ. ಆದರೆ, ಮಧುಚಂದ್ರದಲ್ಲಿ ವಧು ಸಂಪೂರ್ಣ ಮಹಿಳೆ ಅಲ್ಲ ಎಂದು ಗೊತ್ತಾಗಿದೆ.

ಮಾನಕ್ಕೆ ಅಜಿದ್ದ ಯುವಕ: ಮಧುಚಂದ್ರದ ದಿನವೇ ಪತ್ನಿಯ ಬಗ್ಗೆ ಸತ್ಯ ತಿಳಿದಿದ್ದರೂ ಯುವಕ ಕುಟುಂಬಸ್ಥರಿಗೆ ಏನನ್ನೂ ಹೇಳಿರಲಿಲ್ಲ. ಈ ವಿಷಯ ಗೊತ್ತಾದರೆ ತನಗೇ ಅವಮಾನವಾಗುತ್ತದೆ ಎಂದು ಭಾವಿಸಿದ್ದ. ಮಾನಕ್ಕೆ ಕಟ್ಟುಬಿದ್ದು ಯುವಕ ಯಾರಿಗೂ ವಿಷಯವನ್ನು ಬಹಿರಂಗ ಪಡಿಸಿರಲಿಲ್ಲ. ಬದಲಿಗೆ ತನ್ನ ಹೆಂಡತಿಗೆ ರಹಸ್ಯವಾಗಿ ಚಿಕಿತ್ಸೆ ಕೊಡಿಸಲು ಯತ್ನಿಸುತ್ತಿದ್ದ. ಆದರೆ, ಅದು ಯಾವುದೂ ಪ್ರಯೋಜನವಾಗಿಲ್ಲ.

ಇದನ್ನೂ ಓದಿ: ಹೆತ್ತವರಿಗೆ ತಿಳಿಸದೇ 2ನೇ ವಿವಾಹಕ್ಕೆ ಸಿದ್ಧವಾಗಿದ್ದ ವರ: ಮದುವೆ ಮಂಟಪದಲ್ಲಿ ನಡೀತು ಚಮತ್ಕಾರ!

ಹೀಗಾಗಿ ಕೊನೆಗೆ ತನ್ನ ಪತ್ನಿ ಪರಿಪೂರ್ಣ ಮಹಿಳೆ ಅಲ್ಲ ಎಂದು ಆರೋಪಿಸಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ. ಮಧುಚಂದ್ರದ ದಿನ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಜನರು ತನ್ನನ್ನು ಮತ್ತು ತನ್ನ ಹೆಂಡತಿಯನ್ನು ಗೇಲಿ ಮಾಡುತ್ತಾರೆ ಎಂಬ ಭಯವಿದೆ. ಈ ಮದುವೆಯಿಂದ ನನ್ನ ಜೀವನ ದುಸ್ತರವಾಗಿದೆ. ವೈದ್ಯರು ಕೂಡ ಪತ್ನಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರು. ಪತ್ನಿ ಎಂದೂ ಮುಟ್ಟಾಗಿರಲಿಲ್ಲ. ನಮ್ಮ ಮದುವೆಯನ್ನು ಅನೂರ್ಜಿತ ಎಂದು ಘೋಷಿಸಬೇಕೆಂದು ಯುವಕ ಕೋರಿದ್ದ. ಈ ಅರ್ಜಿ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯವು ವಿವಾಹವನ್ನು ಅನೂರ್ಜಿತ ಎಂದು ಘೋಷಿಸುವ ಮೂಲಕ ವಿಚ್ಛೇದನ ಆದೇಶ ನೀಡಿದೆ ಎಂದು ಅರ್ಜಿದಾರರ ಪರ ವಕೀಲ ಅರುಣ್ ಶರ್ಮಾ ತೆಹಾರಿಯಾ ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆ ಮಂಟಪದಿಂದ ಓಡಿ ಹೋದ ಪ್ರಿಯಕರ: 20 ಕಿಮೀ ಬೆನ್ನಟ್ಟಿ ಹಿಡಿದ ಪ್ರಿಯತಮೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.