ETV Bharat / bharat

ಛೀ ಛೀ.. ಹಲ್ಲುಜ್ಜುವ ಮೊದಲು ಮಗನಿಗೆ ಕಿಸ್​ ಮಾಡಬೇಡ ಎಂದಿದ್ದಕ್ಕೆ ಪತ್ನಿಯ ಕತ್ತು ಸೀಳಿದ ಪತಿ! - ಪತ್ನಿ ತಲೆ ಕತ್ತರಿಸಿದ ಪತಿ

ಕ್ಷುಲ್ಲಕ ವಿಚಾರಕ್ಕಾಗಿ ಪತಿಯೊಬ್ಬ ತನ್ನ ಹೆಂಡತಿಯ ಕತ್ತು ಸೀಳಿ ಕೊಲೆ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ.

ಹಲ್ಲುಜ್ಜುವ ಮೊದಲು ಮಗನ ಕಿಸ್​ ಮಾಡಬೇಡ ಎಂದಿದ್ದಕ್ಕೆ ಪತ್ನಿಯ ತಲೆ ಕತ್ತರಿಸಿದ ಪತಿ!
ಹಲ್ಲುಜ್ಜುವ ಮೊದಲು ಮಗನ ಕಿಸ್​ ಮಾಡಬೇಡ ಎಂದಿದ್ದಕ್ಕೆ ಪತ್ನಿಯ ತಲೆ ಕತ್ತರಿಸಿದ ಪತಿ!ಹಲ್ಲುಜ್ಜುವ ಮೊದಲು ಮಗನ ಕಿಸ್​ ಮಾಡಬೇಡ ಎಂದಿದ್ದಕ್ಕೆ ಪತ್ನಿಯ ತಲೆ ಕತ್ತರಿಸಿದ ಪತಿ!
author img

By

Published : Jun 30, 2022, 7:11 PM IST

ಪಾಲಕ್ಕಾಡ್: ಬೆಳಗ್ಗೆ ಹಲ್ಲುಜ್ಜುವ ಮುನ್ನ ತಮ್ಮ ಮಗುವಿಗೆ ಮುತ್ತು ಕೊಡುವುದನ್ನು ವಿರೋಧಿಸಿದ ಪತ್ನಿಯನ್ನು ಪತಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿರುವ ಭಯಾನಕ ಪ್ರಕರಣ ಕೇರಳದ ಪಾಲಕ್ಕಾಡ್​​ನಲ್ಲಿ ನಡೆದಿದೆ. ಕೊಯಮತ್ತೂರು ಮೂಲದ ದೀಪಿಕಾ (28) ಕೊಲೆಯಾದ ಗೃಹಿಣಿ. ಪತಿ ಅವಿನಾಶ್ (30) ಆರೋಪಿ. ಪಾಲಕ್ಕಾಡ್‌ನ ನಿವಾಸಿಯಾಗಿದ್ದ ಇವರು 2019 ರಲ್ಲಿ ವಿವಾಹವಾಗಿದ್ದರು.

ಅವಿನಾಶ್ ಮತ್ತು ದೀಪಿಕಾಗೆ ಒಂದೂವರೆ ವರ್ಷದ ಮಗನಿದ್ದಾನೆ. ಬೆಳಗ್ಗೆ ಎದ್ದಾಗ ಅವಿನಾ​ಶ್​ ತಮ್ಮ ಮಗನಿಗೆ ಪ್ರೀತಿಯ ಮುತ್ತು ನೀಡುತ್ತಿದ್ದರು. ಇದನ್ನು ಪತ್ನಿ ದೀಪಿಕಾ ವಿರೋಧಿಸುತ್ತಿದ್ದರು. ಹಲ್ಲುಜ್ಜದೇ ಮಗನಿಗೆ ಕಿಸ್​ ಮಾಡಬೇಡ ಎಂದು ತಗಾದೆ ತೆಗೆಯುತ್ತಿದ್ದರು. ಇದರಿಂದ ರೋಸಿ ಹೋಗಿದ್ದ ಅವಿನಾಶ್​ ದೀಪಿಕಾ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ.

ತಲೆ ಮತ್ತು ಕತ್ತನ್ನು ಕೊಚ್ಚಿದ್ದಾರೆ. ತೀವ್ರ ಗಾಯಗೊಂಡಿದ್ದ ದೀಪಿಕಾರನ್ನು ನೆರೆಹೊರೆಯವರು ಕಂಡು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇದೀಗ ಕೊಲೆಗಡುಕ ಪತಿ ಅವಿನಾಶ್​ರನ್ನು ಪೊಲೀಸರು ಬಂಧಿಸಿದ್ದಾರೆ.

ಓದಿ: ಬೈಕ್​ ಅಪಘಾತದಲ್ಲಿ ವ್ಯಕ್ತಿ ಸಾವು: ಸಂಚಾರಿ ನಿಯಮ ಉಲ್ಲಂಘನೆ ಎಂದು ದಂಡ ವಿಧಿಸಿದ ಕೋರ್ಟ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.