ಪತ್ತನಂತಿಟ್ಟ, ಕೇರಳ: ನರ್ಸ್ ಎಂಬ ಸೋಗು ಹಾಕಿಕೊಂಡು ಗರ್ಭಿಣಿ ಕೊಲೆ ಮಾಡಲು ಯತ್ನಿಸಿದ ಘಟನೆ ಮುನ್ನೆಲೆಗೆ ಬಂದಿದೆ. ಕಾಯಂಕುಲಂ ಕರಿಯಾಲ್ಕುಳಂಗರ ನಿವಾಸಿ ಅರುಣ್ ಎಂಬವರ ಪತ್ನಿ ಸ್ನೇಹಾ (24) ಅವರನ್ನು ಕೊಲೆ ಮಾಡಲು ಯತ್ನಿಸಿದ ಮಹಿಳೆಯನ್ನು ಪುಲಿಕ್ಕೇಶ್ ಪೊಲೀಸರು ಬಂಧಿಸಿದ್ದಾರೆ. ಕಾಯಂಕುಲಂ ಪುಲ್ಲುಕುಳಂಗರ ಮೂಲದ ಅಪ್ಪು ಎಂಬವರ ಪತ್ನಿ ಅನುಷಾ (25) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಸ್ನೇಹಾಳ ಪತಿ ಅರುಣ್ ಅವರ ಸ್ನೇಹಿತೆ ಅನುಷಾ. ಆಸ್ಪತ್ರೆಯ ಸಿಬ್ಬಂದಿ ಮತ್ತು ಗರ್ಭಿಣಿ ತಾಯಿಯ ಅನುಮಾನವೇ ಸ್ನೇಹಾಳ ಜೀವ ಉಳಿಸುವಲ್ಲಿ ಕೆಲಸ ಮಾಡಿದೆ. ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದೆ. ನಾಲ್ಕು ದಿನಗಳ ಹಿಂದೆ ಸ್ನೇಹ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಸಂಜೆ ಅನುಷಾ ನರ್ಸ್ ಸೋಗಿನಲ್ಲಿ ಆಸ್ಪತ್ರೆಗೆ ಬಂದಿದ್ದಾಳೆ. ಪ್ರಸವದ ನಂತರ ಚಿಕಿತ್ಸೆ ಪಡೆಯುತ್ತಿದ್ದ ಸ್ನೇಹಾಳ ಕೊಠಡಿ ತಲುಪಿದ ಅನುಷಾ, ಖಾಲಿ ಸಿರಿಂಜ್‌ನಿಂದ ಸ್ನೇಹಾಳ ರಕ್ತನಾಳಗಳಿಗೆ ಗಾಳಿಯನ್ನು ತುಂಬಿಸಿ ಕೊಲ್ಲಲು ಪ್ರಯತ್ನಿಸಿದ್ದಾಳೆ. ಫಾರ್ಮಸಿ ವ್ಯಾಸಂಗ ಮುಗಿಸಿರುವ ಅನುಷಾ ರಕ್ತನಾಳದಲ್ಲಿ ಗಾಳಿ ಸೇರಿದರೆ ಆಗಬಹುದಾದ ಅಪಾಯವನ್ನು ಮನಗಂಡು ಈ ಕ್ರೂರ ಕೃತ್ಯ ಎಸಗಿದ್ದಾರೆ ಎಂದು ವರದಿಯಾಗಿದೆ.
ಕಾರ್ಯವಿಧಾನ ಮುಗಿಸಿ ಕೊಠಡಿಯಿಂದ ಹೊರಬಂದಾಗ ಸ್ನೇಹಾಳ ತಾಯಿ ಇದನ್ನು ನೋಡಿ ಅನುಮಾನಗೊಂಡು ಆಕೆಯನ್ನು ತಡೆದಿದ್ದಾರೆ. ಬಳಿಕ ಸ್ನೇಹಾಳ ತಾಯಿ ನರ್ಸಿಂಗ್ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದ್ದಾರೆ. ನರ್ಸ್ಗಳು ಹಿರಿಯ ವೈದ್ಯಾಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಆರೋಪಿತ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಸ್ನೇಹಾಗೆ ಆರೋಪಿತ ಮಹಿಳೆ ಅನುಷಾ ನಾಲ್ಕು ಬಾರಿ ಸಿರಿಂಜ್ ಚುಚ್ಚಿದ್ದಾರೆ. ಏರ್ ಇಂಜೆಕ್ಷನ್ ನಂತರ ಸ್ನೇಹಾ ಅವರಿಗೆ ಹೃದಯಾಘಾತವಾಗಿದೆ, ಆದರೆ, ಅವರ ಪ್ರಸ್ತುತ ಆರೋಗ್ಯ ಸ್ಥಿತಿ ಚೆನ್ನಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಅವರನ್ನು ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದ್ದಾರೆ.
ಏರ್ ಎಂಬಾಲಿಸಮ್ ಎಂದರೇನು?: ಇದನ್ನು ಗ್ಯಾಸ್ ಎಂಬಾಲಿಸಮ್ ಎಂದೂ ಕರೆಯುತ್ತಾರೆ. ಇದು ಒಂದು ಅಥವಾ ಹೆಚ್ಚಿನ ಗಾಳಿಯ ಗುಳ್ಳೆಗಳು ಅಭಿಧಮನಿ ಅಥವಾ ಅಪಧಮನಿಯನ್ನು ಪ್ರವೇಶಿಸುತ್ತವೆ. ಆಗ ಹೃದಯದ ಚಲನವಲನಗಳು ಸ್ಥಗಿತಗೊಂಡು ಹೃದಯಾಘಾತ ಆಗುವ ಸಂಭವ ಇರುತ್ತದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯದಿದ್ರೆ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಗಾಳಿಯ ಗುಳ್ಳೆಯು ರಕ್ತನಾಳಕ್ಕೆ ಪ್ರವೇಶಿಸಿದಾಗ ಅದನ್ನು ಸಿರೆಯ ಏರ್ ಎಂಬಾಲಿಸಮ್ ಎಂದು ಕರೆಯಲಾಗುತ್ತದೆ.
ಓದಿ: ಸಬ್ ಇನ್ಸ್ಪೆಕ್ಟರ್ನನ್ನು ಗುಂಡಿಕ್ಕಿ ಕೊಲೆ ಮಾಡಿದ ಅಪರಿಚಿತ ದುಷ್ಕರ್ಮಿಗಳು!