ETV Bharat / bharat

ರಸ್ತೆ ಅಪಘಾತದಲ್ಲಿ ಗರ್ಭಿಣಿ ಹೆಂಡತಿ ಸಾವು ಕಂಡು ಆತ್ಮಹತ್ಯೆಗೆ ಶರಣಾದ ಗಂಡ

author img

By

Published : Nov 18, 2022, 1:45 PM IST

ನಗರದ ಕಿರಿದಾದ ಮತ್ತು ಕೆಟ್ಟ ರಸ್ತೆಗಳಿಂದಾಗಿ ಈ ಸಾವು ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ರಸ್ತೆ ಅಪಘಾತದಲ್ಲಿ ಗರ್ಭಿಣಿ ಹೆಂಡತಿ ಸಾವು ಕಂಡು ಆತ್ಮಹತ್ಯೆಗೆ ಶರಣಾದ ಗಂಡ
husband-committed-suicide-after-seeing-the-death-of-his-pregnant-wife-in-a-road-accident

ಪುಣೆ( ಮಹಾರಾಷ್ಟ್ರ): ​ಆಸ್ಪತ್ರೆಗೆ ಗಂಡನ ಜೊತೆಗೆ ತಿಂಗಳ ಚಿಕಿತ್ಸೆಗೆ ಬಂದ ಮಹಿಳೆ ರಸ್ತೆ ಅಪಘಾತದಲ್ಲಿ ದಾರುಣ ಸಾವು ಕಂಡಿದ್ದರು. ಕಣ್ಣೇದುರೇ ಕರಳುಬಳ್ಳಿ ಹೊತ್ತು ಹೆಂಡತಿ ಸಾವು ಕಂಡ ಗಂಡ, ಈ ದುಃಖದಿಂದ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಪುಣೆಯಲ್ಲಿ ನಡೆದಿದೆ.

ದೊಂಡಕರ್ವಾಡಿಯ ರಮೇಶ್​ ನವ್ನಾಥ್​​ ಕನ್ಶಕರ್​ (29) ಸಾವನ್ನಪ್ಪಿದ ವ್ಯಕ್ತಿ. ಕಳೆದ ಎಂಟು ತಿಂಗಳ ಹಿಂದೆ ರಮೇಶ್ ವಿದ್ಯಾ ಎಂಬಾಕೆಯನ್ನು ವಿವಾಹವಾಗಿದ್ದರು. ಆಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಕಳೆದ ವಾರ ಇಲ್ಲಿನ ನಾರಾಯಣ ಗಾಂವ್​ ಆಸ್ಪತ್ರೆಗೆ ತಿಂಗಳ ಚಿಕಿತ್ಸೆಗೆ ಬಂದಿದ್ದರು. ಚಿಕಿತ್ಸೆ ಮುಗಿಸಿ ಗಂಡನ ಜೊತೆ ಮನೆಗೆ ಮರಳುತ್ತಿದ್ದ ವೇಳೆ ಅವರ ಬೈಕ್ ಟ್ರಾಕ್ಟರ್​ ಮುಖಾಮುಖಿಯಾಗಿದೆ.

ಇದರ ಪರಿಣಾಮವಾಗಿ ಪತ್ನಿ ಬೈಕ್​ನಿಂದ ಬಿದ್ದಿದ್ದಾಳೆ. ಈ ವೇಳೆ ಆಕೆ ತಲೆ ಟ್ರಾಕ್ಟರ್​ ಹರಿದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಕಣ್ಣಾರೆ ಕಂಡ ರಮೇಶ್​ ಶಾಕ್​ಗೆ ಒಳಗಾಗಿದ್ದು, ಒತ್ತಡಕ್ಕೆ ಒಳಗಾಗಿದ್ದಾರೆ. ಕಡೆಗೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇನ್ನು ನಗರದ ಕಿರಿದಾದ ಮತ್ತು ಕೆಟ್ಟ ರಸ್ತೆಗಳಿಂದಾಗಿ ಈ ಸಾವು ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ: ಪುಣೆ ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಭೀಕರ ಕಾರು ಅಪಘಾತ.. ಐವರ ದಾರುಣ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.