ಹೈದರಾಬಾದ್ : ಪತ್ನಿ ಬೇರೆ ಪುರುಷನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಲ್ಲದೇ, ಆಕೆ ಆತನೊಂದಿಗೆ ಏಕಾಂತದಲ್ಲಿರುವುದನ್ನು ನೋಡಿದ ಪತಿ ಇಬ್ಬರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ತೆಲಂಗಾಣದ ಖಮ್ಮಂ ನಗರದಲ್ಲಿ ನಡೆದಿದೆ.
ಆಟೋಚಾಲಕನಾಗಿರುವ ವೀರಬಾಬು ಖಮ್ಮಂನ ಅಲ್ಲಿಪುರಂ ಕಾಲೋನಿಯಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದಾನೆ. ವೀರಬಾಬು ಅವರ ಪತ್ನಿ ಅದೇ ಕಾಲೋನಿ ನಿವಾಸಿ ನವೀನ್ ಎಂಬಾತನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಳು.
ಈ ವಿಷಯ ಆಕೆಯ ಪತಿಗೆ ತಿಳಿಯಿತು. ಕೆಲ ಬಾರಿ ಎಚ್ಚರಿಕೆ ನೀಡಿದರೂ ಆಕೆ, ತನ್ನ ವರ್ತನೆಯನ್ನು ಬದಲಿಸಿಕೊಳ್ಳಲಿಲ್ಲ. ಗ್ರಾಮ ಪಂಚಾಯತ್‌ನ ಸಲಹೆಯ ಮೇರೆಗೆ ಅವರು ಕುಟುಂಬ ಸಮೇತ ಗೋಪಾಲಪುರಕ್ಕೆ ಸ್ಥಳಾಂತರಗೊಂಡರು. ಆದರೂ ಇಬ್ಬರ ಸಂಬಂಧ ಮುಂದುವರೆದಿತ್ತು. ಭಾನುವಾರ (ಮೇ 29) ರಾತ್ರಿ ನವೀನ್ ವೀರಬಾಬು ಮನೆಗೆ ಬಂದಿದ್ದಾನೆ. ಅದೇ ಸಮಯಕ್ಕೆ ವೀರಬಾಬು ಮನೆಗೆ ಬಂದಿದ್ದು, ಇಬ್ಬರು ಏಕಾಂತದಲ್ಲಿರುವುದನ್ನು ನೋಡಿದ್ದಾನೆ.
ಇದರಿಂದ ಕೋಪಗೊಂಡ ವೀರಬಾಬು ತಕ್ಷಣ ಪತ್ನಿ ಹಾಗೂ ಆಕೆಯ ಪ್ರಿಯಕರನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ಘಟನೆಯಲ್ಲಿ ನವೀನ್ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಖಮ್ಮಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಆತ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾನೆ. ಖಾನಾಪುರ ಹವೇಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಟಿಕಾಯತ್ ಮೇಲೆ ಕಪ್ಪುಮಸಿ ಪ್ರಕರಣ.. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ.. ಕುರುಬೂರು ಎಚ್ಚರಿಕೆ