ETV Bharat / bharat

ರೈಲು ಹತ್ತಿಸಿ ಕಳುಹಿಸಿದ್ರು.. ಪತ್ರದಲ್ಲಿ ಸಾಯಿಸಿದ್ರು.. ಕೋಟ್ಯಂತರ ರೂಪಾಯಿ ಆಸ್ತಿ ಲಪಟಾಯಿಸಿದ್ರು - ಕೋಟ್ಯಂತರ ರೂಪಾಯಿ ಆಸ್ತಿ ಲಪಟಾಯಿಸಿದ್ರು

ಬಂಧಗಳು.. ಬಾಂಧವ್ಯಗಳು.. ಹಣ ಮತ್ತು ನಿರಂಕುಶಾಧಿಕಾರಿಗಳ ಮುಂದೆ ಎಲ್ಲ ಮೌಲ್ಯಗಳು ಮರೆಯಾಗುತ್ತಿವೆ. ವಿಚಲಿತಳಾದ ಮಹಿಳೆಯನ್ನು ಪತಿ ಮತ್ತು ಮಗ ರೈಲಿನಲ್ಲಿ ಕಳುಹಿಸಿದ್ದಾರೆ. ಬಳಿಕ ಆಕೆಯ ಮರಣ ಪ್ರಮಾಣ ಪತ್ರ ಪಡೆದು ವಂಚನೆ ಮಾಡಿದ್ದಾರೆ. ಅಷ್ಟಿಷ್ಟಲ್ಲ ಕೋಟ್ಯಂತರ ರೂಪಾಯಿ ಆಸ್ತಿ ಲಪಟಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.

Husband and son created fake death certificates  fake death certificates for crores of Property in Telangana  Hanumakonda Police Station  Telangana crime news  charity organization Anbagam Rehabilitation Center  ಕೋಟ್ಯಾಂತರ ರೂಪಾಯಿ ಆಸ್ತಿ  ಮಹಿಳೆ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ  ಅನ್ಬಗಂ ಪುನರ್ವಸತಿ ಕೇಂದ್ರ  Etv Bharat Karnataka news  ಈಟಿವಿ ಭಾರತ ಕರ್ನಾಟಕ ಸುದ್ದಿ  ಹನುಮಕೊಂಡ ಪೊಲೀಸ್​ ಠಾಣೆ  ತೆಲಂಗಾಣ ಅಪರಾಧ ಸುದ್ದಿ
ಕೋಟ್ಯಾಂತರ ರೂಪಾಯಿ ಆಸ್ತಿ ಲಪಟಾಯಿಸಿದ್ರು
author img

By

Published : Aug 12, 2022, 12:23 PM IST

ಹನುಮಕೊಂಡ(ತೆಲಂಗಾಣ): ಮಗ ಮತ್ತು ಗಂಡ ಆಕೆಯ ಕೋಟ್ಯಂತರ ರೂಪಾಯಿ ಆಸ್ತಿ ಮೇಲೆ ಕಣ್ಣಾಕಿದ್ದಾರೆ. ಆಸ್ತಿ ಲಪಟಾಯಿಸಲು ಇಬ್ಬರು ಯೋಜನೆ ರೂಪಿಸಿದ್ದಾರೆ. ಬಳಿಕ ಮಹಿಳೆ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಪಡೆದು, ಇದ್ದ ಆಸ್ತಿಯೆಲ್ಲವೂ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿರುವ ಘಟನೆ ಹನುಮಕೊಂಡ ಜಿಲ್ಲೆಯಲ್ಲಿ ಕಂಡು ಬಂದಿದೆ.

ಹನುಮಕೊಂಡ ಪೊಲೀಸ್​ ಠಾಣೆ ವ್ಯಾಪ್ತಿಯ 46 ವರ್ಷದ ಮಹಿಳೆಗೆ ಪತಿ ಹಾಗೂ ಒಬ್ಬ ಪುತ್ರ ಇದ್ದಾರೆ. ಮಗ ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾನೆ. ಮದುವೆಯ ಸಂದರ್ಭದಲ್ಲಿ ಆಕೆಯ ತಂದೆ ವರದಕ್ಷಿಣೆಯಾಗಿ ನೀಡಿದ್ದರು. ಈಗ ಆ ಆಸ್ತಿ ಪ್ರಸ್ತುತ ಮಾರುಕಟ್ಟೆಯಲ್ಲಿ ಸುಮಾರು 15 ಕೋಟಿಗೆ ಬೆಲೆ ಬಾಳುತ್ತದೆ.

ಪತಿ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿ ಆಕೆಯನ್ನು ದೂರ ಮಾಡಲು ಯತ್ನಿಸಿದ್ದಾನೆ. ಈ ಕ್ರಮದಲ್ಲಿ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ತನ್ನ ಪತ್ನಿಗೆ ಪತಿ ಕಿರುಕುಳ ನೀಡಿದ್ದಾನೆ. ಮಗನಿಗೂ ಆಸ್ತಿ ಪಾಲು ನೀಡುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಮಹಿಳೆ ಒಪ್ಪಲಿಲ್ಲ.

ಆಸ್ತಿಗಾಗಿ ಗಂಡ - ಮಗನ ವರ್ಷಾನುಗಟ್ಟಲೆ ಕಿರುಕುಳದಿಂದ ಮಹಿಳೆ ತನ್ನ ಬುದ್ಧಿ ಭ್ರಮಣೆಯಾಗಿದೆ. ಅವರು ಸತ್ತರೆ ಮಾತ್ರ ಆಸ್ತಿ ನಮ್ಮ ಪಾಲು ಸಿಗುತ್ತೆ ಎಂದು ತಿಳಿದ ಅವರಿಬ್ಬರು ಯೋಜನೆವೊಂದನ್ನು ರೂಪಿಸಿದ್ದರು. 2017 ರಲ್ಲಿ ಒಂದು ದಿನ ಇಬ್ಬರೂ ಮಹಿಳೆಯನ್ನು ರೈಲಿನಲ್ಲಿ ಹತ್ತಿಸಿ ಕಳುಹಿಸಿದ್ದಾರೆ. ಅವರು ಕಾಣೆಯಾಗಿದ್ದಾರೆ ಎಂದು ಸಂಬಂಧಿಕರು ನಂಬಿದ್ದರು. ಪತಿ ಬೇರೆ ಮಹಿಳೆಯೊಂದಿಗೆ ವಿದೇಶಕ್ಕೆ ತೆರಳಿದ್ದರು. ಕೆಲಕಾಲದ ಬಳಿಕ ಬಂಧುಗಳೂ ಸಹ ಇದನ್ನು ಮರೆತಿದ್ದರು.

ರೈಲು ಹತ್ತಿದ್ದ ಮಹಿಳೆ ತಲುಪಿದ್ದೆಲ್ಲಿಗೆ?: ರೈಲು ಹತ್ತಿದ ಆ ಮಹಿಳೆ ಕೆಲವು ದಿನಗಳ ನಂತರ ಚೆನ್ನೈ ತಲುಪಿದ್ದಾರೆ. ಅಲ್ಲಿನ ರೈಲ್ವೆ ಪೊಲೀಸರ ನೆರವಿನಿಂದ ಅನ್ಬಗಂ ಪುನರ್ವಸತಿ ಕೇಂದ್ರ ಎಂಬ ದತ್ತಿ ಸಂಸ್ಥೆಯಲ್ಲಿ ಆ ತಾಯಿಗೆ ಆಶ್ರಯ ಸಿಕ್ಕಿದೆ. ಮಾನಸಿಕವಾಗಿ ಕುಗ್ಗಿದ ಆಕೆ ತನ್ನ ಹಳೆಯ ನೆನಪುಗಳನ್ನು ಮರೆತಿದ್ದಾರೆ. ಚಾರಿಟಿಯ ಸಂಘಟಕರು ಅವರಿಗೆ ಆಶ್ರಯ ನೀಡಿ, ಉಪಚರಿಸಿ, ಅವರಲ್ಲಿ ಬದಲಾವಣೆ ತರಲು ಪ್ರಯತ್ನಿಸಿದ್ದಾರೆ. ಆದರೆ, ಮಹಿಳೆಗೆ ಹಿಂದಿನದನ್ನು ನೆನಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.

ಚಾರಿಟಿಯ ಸಂಘಟಕರು ಆಕೆಯ ಆಧಾರ್ ಕಾರ್ಡ್ ಪಡೆಯಲು ಚೆನ್ನೈನಲ್ಲಿರುವ ಕೇಂದ್ರಕ್ಕೆ ಕರೆದೊಯ್ದರು. ಫಿಂಗರ್‌ಪ್ರಿಂಟ್ ತೆಗೆದುಕೊಳ್ಳುವಾಗ ಸಾಫ್ಟ್‌ವೇರ್​ನಲ್ಲಿ ಆಧಾರ್​ ಕಾರ್ಡ್​ ಇರುವುದು ಪತ್ತೆಯಾಗಿದೆ. ಕಾರ್ಡ್ ಮೂಲಕ ವಿವರ ಸಂಗ್ರಹಿಸಿದಾಗ ಅವರು ತೆಲಂಗಾಣದ ಹನುಮಕೊಂಡ ಜಿಲ್ಲೆಯ ಮಹಿಳೆ ಎಂದು ತಿಳಿದು ಬಂದಿದೆ. ಕುಟುಂಬಸ್ಥರು ವಿಳಾಸದಲ್ಲಿ ಸಂಪರ್ಕಿಸಲು ಪ್ರಯತ್ನಿಸಿದಾಗ ಪ್ರಯೋಜನವಾಗಿರಲಿಲ್ಲ. ಬಳಿಕ ಚಾರಿಟಿಯ ಸಂಘಟಕರು ಹನುಮಕೊಂಡ ಪೊಲೀಸರನ್ನು ಸಂಪರ್ಕಿಸಿದರು.

ಈ ಸಂಚು ಬಯಲಾಗಿದ್ದು ಹೇಗೆ?: ಪೊಲೀಸರು ಚಾರಿಟಿ ಕಳುಹಿಸಿದ ಫೋಟೋದೊಂದಿಗೆ ಮಹಿಳೆಯ ಮಗನ ಬಳಿಗೆ ಹೋದರು. ಅವಳ ಫೋಟೋ ತೋರಿಸುತ್ತಾ, ನಿನ್ನ ತಾಯಿನಾ ಅಥವಾ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಮೊದಲು ಅಲ್ಲ ಎಂದ ಅವರು, ಹೌದು ಇವರು ನಮ್ಮ ತಾಯಿ. ಆದ್ರೆ ಇವರು ಯಾವಾಗಲೋ ನಿಧರಾಗಿದ್ದಾರೆ ಎಂದು ಹೇಳಿದರು. ಅದಕ್ಕೆ ಸಾಕ್ಷಿ ಎಂಬಂತೆ ಮರಣ ಪ್ರಮಾಣ ಪತ್ರ ಸಹ ಅವರ ಬಳಿಯಿತ್ತು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತನಿಖೆ ಮಾಡಿದಾಗ ಅವರ ಸಂಚು ಬಯಲಾಯಿತು.

ಮಹಿಳೆ ನಾಪತ್ತೆಯಾದ ನಂತರ ಆಕೆಯ ಪತಿ ಮತ್ತು ಮಗ ವಾರಂಗಲ್ ನಗರಾಡಳಿತದಿಂದ ಮರಣ ಪ್ರಮಾಣ ಪತ್ರವನ್ನು ತೆಗೆದುಕೊಂಡಿದ್ದಾರೆ. ತಕ್ಷಣವೇ ಮಹಿಳೆಯ ಹೆಸರಿನಲ್ಲಿದ್ದ ಸುಮಾರು 15 ಕೋಟಿ ರೂ.ಗಳ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ತಾಯಿ ಆಸ್ತಿಗಾಗಿ ನಕಲಿ ಮರಣ ಪ್ರಮಾಣಪತ್ರವನ್ನು ತಯಾರಿಸಿದ್ದಾರೆ ಎಂದು ಪೊಲೀಸರು ಪ್ರಾಥಮಿಕ ತನಿಖೆ ಮೂಲಕ ತಿಳಿದಿತ್ತು.

ಮರಣ ಪ್ರಮಾಣ ಪತ್ರ ನೀಡಿದ್ದು ಹೇಗೆ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಮಹಿಳೆ ಪ್ರಸ್ತುತ ಚಾರಿಟಿಯ ಸಂಘಟಕರೊಂದಿಗೆ ಇದ್ದಾರೆ. ಕುಟುಂಬಸ್ಥರು ಅನುಮತಿ ನೀಡಿದರೆ ಮಹಿಳೆಯನ್ನು ಕರೆತರಬಹುದು. ಇದಕ್ಕಾಗಿ ದತ್ತಿ ಸಂಘಟಕರು ಸಿಎಂ, ರಾಜ್ಯಪಾಲರು, ಹನುಮಕೊಂಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಓದಿ: ತಾಯಿ ಮಗಳ ಸಾವಿಗೆ ಕಾರಣವಾಯ್ತಾ ಅಂತರ್ಜಾತಿ ವಿವಾಹ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.