ಲಖನೌ (ಉತ್ತರ ಪ್ರದೇಶ): ಶಾಲಾ ಬಸ್ನಲ್ಲಿ ಅಡಗಿ ಕುಳಿತಿದ್ದ ಬೃಹತ್ ಹೆಬ್ಬಾವೊಂದನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹೆಬ್ಬಾವು ಹಾಗೂ ವಿಡಿಯೋವನ್ನು ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಸೆರೆ ಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ.
ರಾಯ್ಬರೇಲಿಯ ರಯಾನ್ ಇಂಟರ್‌ನ್ಯಾಷನಲ್ ಸ್ಕೂಲ್ಗೆ ಬಸ್ನಲ್ಲಿ ಹೆಬ್ಬಾವು ಅಡಗಿ ಕುಳಿತಿತ್ತು. ಇದನ್ನು ಕಂಡು ಬೆಚ್ಚಿದ್ದ ಶಾಲಾ ಆಡಳಿತ ಮಂಡಳಿಯವರು ಅರಣ್ಯಾ ಇಲಾಖೆಗೆ ಮಾಹಿತಿ ನೀಡಿದ್ದರು. ಅಂತೆಯೇ ಅರಣ್ಯಾಧಿಕಾರಿಗಳು ದೌಡಾಯಿಸಿ ಶಾಲಾ ಬಸ್‌ನ ಇಂಜಿನ್ನಲ್ಲಿ ಅಡಗಿದ್ದ ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ.
-
A python rescued from a school bus in Raibareli, UP. pic.twitter.com/1mP3EY9njc
— Piyush Rai (@Benarasiyaa) October 16, 2022 " class="align-text-top noRightClick twitterSection" data="
">A python rescued from a school bus in Raibareli, UP. pic.twitter.com/1mP3EY9njc
— Piyush Rai (@Benarasiyaa) October 16, 2022A python rescued from a school bus in Raibareli, UP. pic.twitter.com/1mP3EY9njc
— Piyush Rai (@Benarasiyaa) October 16, 2022
ಈ ಸದ್ಯ ಶಾಲಾ ಬಸ್ನಲ್ಲಿ ಅಡಗಿದ್ದ ಬೃಹತ್ ಹೆಬ್ಬಾವನ್ನು ರಕ್ಷಣೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೈತ್ಯ ಗಾತ್ರದ ಹೆಬ್ಬಾವಿಗೆ ಹಗ್ಗ ಕಟ್ಟಿ ಹೊರ ತೆಗೆಯುತ್ತಿರುವ ದೃಶ್ಯಗಳು ಈ ವಿಡಿಯೋದಲ್ಲಿ ಸೆರೆಯಾಗಿವೆ.
ಇದನ್ನೂ ಓದಿ: ಬಟ್ಟೆ ಅಂಗಡಿಯಲ್ಲಿ ಕೈಚಳಕ ತೋರಿಸಿದ ಬುರ್ಖಾಧಾರಿ ಮಹಿಳೆ: ವಿಡಿಯೋ ವೈರಲ್