ಗೋಪಾಲಗಂಜ್: ಬಿಹಾರ್ದಲ್ಲಿ ಮದ್ಯ ಸಾಗಣೆಗೆ ನಿಷೇಧ ಹೇರಿದಾಗಿನಿಂದಲೂ ಅಕ್ರಮ ಮದ್ಯ ವಹಿವಾಟು ಎಗ್ಗಿಲ್ಲದೇ ಸಾಗುತ್ತಿದೆ. ಹೀಗಾಗಿ ಅಬಕಾರಿ ಇಲಾಖೆ ಈ ಅಕ್ರಮ ಮದ್ಯ ವಹಿವಾಟು ನಿಲ್ಲಿಸುವುದಕ್ಕೆ ಪರಿಶೀಲನೆ ಕೈಗೊಂಡಿದೆ. ಈ ವೇಳೆ ಕಾರ್ವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಕಚ್ಚಾ ಬೆಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಕುಚಯ್‌ಕೋಟ್ ಪೊಲೀಸ್ ಠಾಣೆ ವ್ಯಾಪ್ತಿಯ ಬಲ್ತಾರಿ ಚೆಕ್ ಪೋಸ್ಟ್‌ನಲ್ಲಿ ಮದ್ಯ ಕಳ್ಳಸಾಗಣೆ ಶಂಕೆಯ ಮೇರೆಗೆ ಅಬಕಾರಿ ಇಲಾಖೆಯ ತಂಡವು ಕಾರೊಂದನ್ನು ನಿಲ್ಲಿಸಿ ಪರಿಶೀಲನೆ ಕೈಗೊಂಡಿತ್ತು. ಈ ವೇಳೆ ವಾಹನದೊಳಗೆ ಲಾಕರ್ ಮಾಡಿ ಅಪಾರ ಪ್ರಮಾಣದ ಬೆಳ್ಳಿ ಬಚ್ಚಿಟ್ಟು ಸಾಗಿಸುತ್ತಿದ್ದರು. ಇದನ್ನು ಗಮನಿಸಿದ ಅಬಕಾರಿ ಇಲಾಖೆ ಪೊಲೀಸರಿಗೆ ಮಾಹಿತಿ ನೀಡಿತು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನದಿಂದ ಸುಮಾರು 233 ಕೆಜಿ ಬೆಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಚಾಲಕ ಮತ್ತು ಅಕ್ರಮ ಸಾಗಣೆದಾರನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ವಿಚಾರಣೆ ಕೈಗೊಂಡಿದ್ದಾರೆ. ಬೆಳ್ಳಿಯ ತೂಕ ಎರಡು ಕ್ವಿಂಟಾಲ್‌ಗಿಂತ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಎರಡು ಕೋಟಿ ರೂಪಾಯಿಗೂ ಹೆಚ್ಚು ಎಂದು ಹೇಳಲಾಗುತ್ತಿದೆ.
ಓದಿ: ದೇವಸ್ಥಾನಕ್ಕೆ 101 ಕೆಜಿ ಬೆಳ್ಳಿ ಬಾಗಿಲು ಅರ್ಪಿಸಿದ ಭಕ್ತ!
ಗೋಪಾಲಗಂಜ್ ಅಬಕಾರಿ ಅಧೀಕ್ಷಕ ರಾಕೇಶ್ ಕುಮಾರ್ ಮಾತನಾಡಿ, ವಶಪಡಿಸಿಕೊಂಡ ಬೆಳ್ಳಿಯನ್ನು ಕಾನ್ಪುರದಿಂದ ದರ್ಭಾಂಗಕ್ಕೆ ಕೊಂಡೊಯ್ಯಲಾಗುತ್ತಿತ್ತು. ಕಾರಿನಿಂದ ಬೆಳ್ಳಿಯೊಂದಿಗೆ ಸಿಕ್ಕಿಬಿದ್ದ ಕಳ್ಳಸಾಗಣೆದಾರರನ್ನು ಬಡಾ ಬಜಾರ್ ನಿವಾಸಿ ಮನೋಜ್ ಗುಪ್ತಾ ಮತ್ತು ದರ್ಭಾಂಗ್ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಚಾಲಕ ಶಿವ ಶಂಕರ್ ಮಹತೋ ಎಂದು ಗುರುತಿಸಲಾಗಿದೆ ಎಂದರು.
ಮದ್ಯಪಾನದ ಶಂಕೆ ಮೇರೆಗೆ ಕಾರು ತಪಾಸಣೆ ನಡೆಸಿದಾಗ ಕಾರಿನ ಹಿಂಬದಿ ಸೀಟಿನ ಕೆಳಗೆ ಲಾಕರ್ ಇರಿಸಲಾಗಿತ್ತು. ಲಾಕರ್ ತೆರೆದಾಗ ಅಪಾರ ಪ್ರಮಾಣದ ಬೆಳ್ಳಿ ಪತ್ತೆಯಾಗಿದೆ. ಈ ಬೆಳ್ಳಿಗೆ ಸಂಬಂಧಿಸಿದಂತೆ ಬಂಧಿರ ಬಳಿ ಯಾವುದೇ ದಾಖಲೆಗಳು ಅವರ ಬಳಿ ಇರಲಿಲ್ಲ ಎಂದು ಅಬಕಾರಿ ಅಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.