ETV Bharat / bharat

ಕಾರು ಮಾಲೀಕನ ಕಾಲಿಗೆ ಬಿದ್ದು ಮೂಗು ಉಜ್ಜಿ ಕ್ಷಮೆ ಕೋರಿದ ಸಾರಿಗೆ ಬಸ್​ ಚಾಲಕ: ಪೊಲೀಸರ ಸಮ್ಮುದಲ್ಲೇ ನಡೆದ ಘಟನೆ

ರಸ್ತೆಯಲ್ಲಿ ನಡೆದ ಗಲಾಟೆ ವಿಚಾರವಾಗಿ ಸಾರಿಗೆ ಬಸ್​ ಚಾಲಕನಿಂದ ಕಾರು ಮಾಲೀಕನ ಕಾಲಿಗೆ ಬಿದ್ದು ಮೂಗು ಉಜ್ಜಿಸಿ ಕ್ಷಮೆ ಕೋರುವಂತೆ ಮಾಡಿರುವ ಘಟನೆ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ಜರುಗಿದೆ.

hrtc-bus-driver-seeks-apologies-by-rubbing-his-nose
ಕಾರು ಮಾಲೀಕನ ಕಾಲಿಗೆ ಬಿದ್ದು ಮೂಗು ಉಜ್ಜಿ ಕ್ಷಮೆ ಕೋರಿದ ಸಾರಿಗೆ ಬಸ್​ ಚಾಲಕ: ಪೊಲೀಸರ ಸಮ್ಮುದಲ್ಲೇ ನಡೆದ ಘಟನೆ
author img

By

Published : Mar 10, 2023, 4:07 PM IST

ಶಿಮ್ಲಾ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಸಂಚಾರ ವಿಚಾರವಾಗಿ ಸಾರಿಗೆ ಬಸ್​ ಚಾಲಕ ಮತ್ತು ಕಾರಿನ ಚಾಲಕನ ನಡುವೆ ಗಲಾಟೆ ನಡೆದಿದೆ. ಈ ಘಟನೆಯಲ್ಲಿ ಕಾರು ಮಾಲೀಕನ ಕಾಲಿಗೆ ಬಿದ್ದು ಚಾಲಕ ಮೂಗು ಉಜ್ಜುವ ಮೂಲಕ ಕ್ಷಮೆಯಾಚಿಸುವಂತೆ ಮಾಡಲಾಗಿದೆ. ಇದರ ವಿಡಿಯೋ ತುಣಕು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವೇಗದ ಚಾಲನೆ ಹಾಗೂ ಓವರ್ ಟೇಕ್ ಮಾಡುವ ವಿಚಾರದಲ್ಲಿ ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆ (ಹೆಚ್‌ಆರ್‌ಟಿಸಿ)ಯ ಬಸ್​ ಚಾಲಕ ಮತ್ತು ಕಾರಿನ ಚಾಲಕನ ನಡುವೆ ವಾಗ್ವಾದ ಜರುಗಿದೆ. ಈ ಸಂಬಂಧ ಕಾರಿನ ಮಾಲೀಕ ಬಸ್​ ಚಾಲನ ವಿರುದ್ಧ ದೂರು ನೀಡಿದ್ದಾರೆ. ನಂತರ ಇಬ್ಬರ ನಡುವೆ ರಾಜಿ ಪಂಚಾಯಿತಿ ಮಾಡಿಸಲಾಗಿದೆ. ಈ ರಾಜಿ ಭಾಗವಾಗಿ ಕಾರು ಮಾಲೀಕನ ಕಾಲಿಗೆ ಬಸ್​ ಚಾಲಕನಿಂದ ಮೂಗು ಉಜ್ಜಿಸಿ ಕ್ಷಮೆ ಕೋರುವಂತೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಸ್ಥಳದಲ್ಲೇ ಇದ್ದರು ಎನ್ನಲಾಗಿದೆ.

ಘಟನೆಯ ವಿವರ: ಹೆಚ್‌ಆರ್‌ಟಿಸಿ ಬಸ್ ಥಾರೋಚ್‌ನಿಂದ ರೋಹ್ರುಗೆ ತೆರಳುತ್ತಿತ್ತು. ಬಸ್ ಜುಬ್ಬಲ್‌ನ ಹಟ್‌ಕೋಟಿ ತಲುಪಿದಾಗ ಎದುರಗಡೆ ಕಾರೊಂದು ಬಂದಿದೆ. ಈ ವೇಳೆ ಬಸ್​ ಮತ್ತು ಕಾರು ರಸ್ತೆ ಮಧ್ಯೆ ಮುಖಾಮುಖಿಯಾಗಿ ನಿಂತಿವೆ. ಇದರಿಂದ ಬಸ್​ ಚಾಲಕನಿಗಾಗಲಿ ಅಥವಾ ಕಾರು ಚಾಲಕನಿಗಾಗಲಿ ಮುಂದೆ ಚಲಿಸಲು ಸಾಧ್ಯವಾಗಿಲ್ಲ. ಆಗ ವೇಗದ ಚಾಲನೆ ಹಾಗೂ ಓವರ್ ಟೇಕ್​ನಿಂದಾಗಿ ಎರಡು ವಾಹನಗಳು ರಸ್ತೆ ನಡುವೆ ಸಿಲುಕಿದಂತಾಗಿದೆ ಎಂದು ಇಬ್ಬರ ಚಾಲಕ ನಡುವೆ ಗಲಾಟೆ ಶುರುವಾಗಿದೆ. ನಂತರ ಇದು ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ಇದರ ನಡುವೆ ಬಸ್​ ಚಾಲಕ ಕಾರಿನ ಮೇಲೇರಿ ಕಾರಿನಲ್ಲಿದ್ದ ಚಾಲಕನ ಮುಖಕ್ಕೆ ಒದೆಯಲು ಪ್ರಾರಂಭಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಅಲ್ಲದೇ, ಈ ಘಟನೆಯ ದೃಶ್ಯಗಳನ್ನು ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಮತ್ತೊಂದೆಡೆ, ಚಾಲಕನಿಂದ ಹಲ್ಲೆಗೆ ಒಳಗಾದ ಕಾರಿನ ಚಾಲಕನನ್ನು ಅಪ್ಪರ್ ಶಿಮ್ಲಾದ ನಿವಾಸಿ ರೋಹಿತ್ ರಾಜ್ತಾ ಎಂದು ಗುರುತಿಸಲಾಗಿದೆ. ಸಾರಿಗೆ ಬಸ್‌ ಚಾಲಕ ನನ್ನನ್ನು ನಿಂದಿಸಿ, ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.

ಇದಾದ ಬಳಿಕ ಇಡೀ ಘಟನೆಯು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಗಮನಕ್ಕೆ ಬಂದಿದ್ದು, ಅವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದರು. ಇದರ ನಡುವೆ ಕಾರಿನ ಮಾಲೀಕ ರೋಹಿತ್ ಮತ್ತು ಬಸ್​ ಚಾಲಕನ ನಡುವೆ ರಾಜಿ ಪಂಚಾಯಿತಿ ನಡೆಸಲಾಗಿದೆ. ಆಗ ಕಾರಿನ ಮಾಲೀಕರಾದ ರೋಹಿತ್ ಪಾದಗಳಿಗೆ ಬಸ್ ಚಾಲಕ ತನ್ನ ಮೂಗು ಉಜ್ಜುವ ಮೂಲಕ ಕ್ಷಮೆಯಾಚಿಸುವ ಷರತ್ತು ವಿಧಿಸಲಾಗಿದೆ. ಅಂತೆಯೇ, ಬಸ್​ ಚಾಲಕನು ಕಾರಿನ ಮಾಲೀಕನ ಕಾಲಿಗೆ ಮೂಗು ಉಜ್ಜಿ ಕ್ಷಮೆ ಕೋರಿದ್ದಾನೆ.

ಇದರ ದೃಶ್ಯಗಳು ಕೂಡ ಮೊಬೈಲ್​ ಸೆರೆಯಾಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗಿದೆ. ಇದೆಲ್ಲವೂ ಪೊಲೀಸರ ಸಮ್ಮುಖದಲ್ಲೇ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಬಸ್ ಚಾಲಕನು ಕಾರಿನ ಮಾಲೀಕನ ಕ್ಷಮೆ ಕೇಳುತ್ತಿರುವ ವಿಡಿಯೋ ಇದೀಗ ಶಿಮ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ಬಂದಿದೆ. ಈ ವಿಡಿಯೋ ಆಧಾರದ ಮೇಲೆ ಇಡೀ ಘಟನೆಯ ಸಮಗ್ರ ತನಿಖೆ ನಡೆಸುವುದಾಗಿ ಎಸ್​ಪಿ ತಿಳಿಸಿದ್ದಾರೆ.

ಇದನ್ನೂ ಓದಿ: ಬುಲ್ಡೋಜರ್‌ ಚಲಾಯಿಸಿ ಅತ್ಯಾಚಾರ ಆರೋಪಿಯ ಮನೆ ಧ್ವಂಸಗೊಳಿಸಿದ ಮಹಿಳಾ ಪೊಲೀಸರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.