ಲೈಂಗಿಕತೆಯು ದಂಪತಿ ಜೀವನದ ಪ್ರಮುಖ ಭಾಗವಾಗಿದೆ. ಒಂದು ಹಂತದ ನಂತರ, ಸಂಬಂಧದಲ್ಲಿ ಬೇಸರ ಭಾವನೆ ಬರವುದು ಅಥವಾ ಲೈಂಗಿಕತೆಯಲ್ಲಿ ಆಸಕ್ತಿ ಕಡಿಮೆಯಾಗುವುದು ಕೂಡ ಸಾಮಾನ್ಯವಾಗಿದೆ. ಇದಕ್ಕೆ ವಿವಿಧ ಕಾರಣಗಳಿರಬಹುದು.
ಆದರೆ, ಸೆಕ್ಸ್ ಅನ್ನು ದೈನಂದಿನ ಚಟುವಟಿಕೆಯ ಭಾಗವಾಗಿಸಿಕೊಳ್ಳುವುದೂ ಸಹ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಇದು ದಂಪತಿ ನಡುವೆ ಭಾವನಾತ್ಮಕ ಸಂಬಂಧದ ಮೇಲೆ ಪ್ರಬಲವಾಗಲು ಪ್ರಾರಂಭಿಸುತ್ತದೆ. ಅತಿಯಾದ ಸೆಕ್ಸ್ ದೈಹಿಕವಾಗಿ ಮತ್ತು ಮಾನಸಿಕವಾಗಿ ಒತ್ತಡವನ್ನು ಉಂಟುಮಾಡುತ್ತದೆ.
ಇದನ್ನೂ ಓದಿ: ಸೆಕ್ಸ್ ಒಂದು ಅದ್ಭುತವಾದ ಕ್ರಿಯೆ; ಇದರ ಬಗ್ಗೆ ನೀವು ತಿಳಿದುಕೊಳ್ಳಬೇಕಿರುವ ಅಂಶಗಳಿವು...!
ಹೀಗಾಗಿ, ಇದಕ್ಕೆ ಲೈಂಗಿಕಶಾಸ್ತ್ರಜ್ಞರು ನೀಡುವ ಒಂದು ಉತ್ತಮ ಸಲಹೆ ಎಂದರೆ ಸೆಕ್ಸ್ ಡಿಟಾಕ್ಸ್ (Sex Detox) ಅಥವಾ ಲೈಂಗಿಕ ನಿರ್ವಿಶೀಕರಣ. ಅಂದರೆ, ಸ್ವಲ್ಪ ಸಮಯದವರೆಗೆ ಲೈಂಗಿಕತೆಯಿಂದ, ಸಂಭೋಗದಿಂದ ದೂರವಿರುವುದು ಅಥವಾ ಸೆಕ್ಸ್ ನಡುವೆ ಅಂತತ ಕಾಯ್ದುಕೊಳ್ಳುವುದಾಗಿದೆ. ಹೀಗೆ ಮಾಡಿದಲ್ಲಿ ನಿಮ್ಮ ಸಂಬಂಧದಲ್ಲಿ ಪ್ರಣಯ ಮತ್ತು ತಾಜಾತನ ಮರಳಿ ತರಬಹುದಾಗಿದೆ. ಬನ್ನಿ, ಸಂಬಂಧದಲ್ಲಿ ಸೆಕ್ಸ್ ಡಿಟಾಕ್ಸ್ ಪಾತ್ರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.
ಪ್ರೀತಿ - ಹೊಸತನ(Love- and novelty)
ಲೈಂಗಿಕತೆಯು ದಂಪತಿಯನ್ನು ಭಾವನಾತ್ಮಕವಾಗಿ ಹತ್ತಿರ ತರಲು ಸಹಾಯ ಮಾಡುತ್ತದೆ. ಆದರೆ, ಅದೇ ಲೈಂಗಿಕತೆ ಅತಿಯಾದರೆ ದಂಪತಿ ನಡುವೆ ಭಾವನಾತ್ಮಕ ಅಂತರವನ್ನು ಉಂಟುಮಾಡುತ್ತದೆ. ಜೊತೆಗೆ ಸಂಬಂಧದಲ್ಲಿ ಒತ್ತಡ ಮತ್ತು ತೊಡಕುಗಳನ್ನು ಉಂಟು ಮಾಡುತ್ತದೆ. ಸ್ವಲ್ಪ ಸಮಯದವರೆಗೆ ಲೈಂಗಿಕ ಸಂಭೋಗದಿಂದ ವಿರಾಮ ತೆಗೆದುಕೊಂಡು ಮತ್ತೆ ಅದರಲ್ಲಿ ತೊಡಗಿಸಿಕೊಂಡರೆ ಅವರ ನಡುವೆ ಪ್ರೀತಿ, ಹೊಸತನವನ್ನು ಅನುಭವಿಸುವ ಸಾಧ್ಯತೆ ಇದೆ. ದಂಪತಿಯು ಪರಸ್ಪರ ಭಾವನಾತ್ಮಕ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು, ಸಂಬಂಧಗಳನ್ನು ಬಲಪಡಿಸಲು, ಮಾನಸಿಕ ಸಮಸ್ಯೆಗಳನ್ನು ಪರಿಹರಿಸಲು ಸೆಕ್ಸ್ ಡಿಟಾಕ್ಸ್ ಸಹಾಯ ಮಾಡುತ್ತದೆ ಎಂದು ಸಂಬಂಧದ ತಜ್ಞೆ ಮತ್ತು ಸಲಹೆಗಾರ್ತಿ ಆರತಿ ಅವರು ಹೇಳುತ್ತಾರೆ.
ಪರಸ್ಪರರ ಜೊತೆ ಇರಬೇಕು ಎಂಬ ಆಸೆ
ತಜ್ಞರ ಪ್ರಕಾರ, ಸೆಕ್ಸ್ ಡಿಟಾಕ್ಸ್ ದಂಪತಿ ನಡುವೆ ಪರಸ್ಪರ ಜೊತೆ ಇರಬೇಕು ಎಂಬ ಬಯಕೆಯನ್ನು ಹೆಚ್ಚಿಸುತ್ತದೆ. ಸಾಮಾಜಿಕ, ಕೌಟುಂಬಿಕ ಮತ್ತು ಇತರ ಕಾರಣಗಳಿಂದ ದೂರವಾದ ಸಂಬಂಧವು ಮತ್ತೆ ಸರಿಹೋಗುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಲೂಬ್ರಿಕಂಟ್ ಬಳಕೆಯಿಂದ ಆಹ್ಲಾದಕರ-ಸುಖಕರ ಸಂಭೋಗ ಸಾಧ್ಯ ; ಇಲ್ಲಿದೆ ಸರಳ ಸೂತ್ರ
ಭಾವನಾತ್ಮಕವಾಗಿ ಹತ್ತಿರವಾಗುತ್ತಾರೆ
ಕೆಲವೊಮ್ಮೆ, ಮದುವೆಯಂತಹ ದೀರ್ಘಾವಧಿಯ ಸಂಬಂಧದಲ್ಲಿ, ಕುಟುಂಬ ಮತ್ತು ಸಾಮಾಜಿಕ ಜವಾಬ್ದಾರಿಗಳು ಸೇರಿದಂತೆ ವಿವಿಧ ಕಾರಣಗಳಿಂದಾಗಿ, ದಂಪತಿ ದೂರವಾಗಲು ಪ್ರಾರಂಭಿಸುತ್ತಾರೆ ಮತ್ತು ಅವರ ಸಂಬಂಧವು ಕೇವಲ ಔಪಚಾರಿಕವಾಗಿರುತ್ತದೆ. ಅವರು ಪರಸ್ಪರ ಕಡಿಮೆ ಆಕರ್ಷಿತರಾಗುತ್ತಾರೆ. ಆದಾಗ್ಯೂ, ಸೆಕ್ಸ್ ಡಿಟಾಕ್ಸ್ ಇಬ್ಬರ ನಡುವಿನ ಅನ್ಯೋನ್ಯತೆ, ಪ್ರೀತಿ ಮತ್ತು ಆಕರ್ಷಣೆ ಹೆಚ್ಚಿಸಲು ಮತ್ತು ಅವರ ಬಂಧವನ್ನು ಬಲಪಡಿಸಲು ಇಲ್ಲಿ ಸಹಾಯ ಮಾಡುತ್ತದೆ.
ಮಾನಸಿಕ ಆರೋಗ್ಯ(Mental health)
ಲೈಂಗಿಕ ನಿರ್ವಿಶೀಕರಣದ ನಂತರ, ದಂಪತಿ ಮತ್ತೆ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ, ಅವರು ದೈಹಿಕ ಆಹ್ಲಾದವನ್ನು ಮತ್ತೆ ಆನಂದಿಸಲು ಸಾಧ್ಯವಾಗುತ್ತದೆ. ಈ ಮೂಲಕ ಒತ್ತಡ, ಚಡಪಡಿಕೆ ಮತ್ತು ಹತಾಸೆಯಂತಹ ಮಾನಸಿಕ ಸಮಸ್ಯೆಗಳನ್ನು ನಿಭಾಯಿಸಲು ಸಹಾಯವಾಗುತ್ತದೆ. ವ್ಯಕ್ತಿಯನ್ನು ಮಾನಸಿಕವಾಗಿ ಆರೋಗ್ಯವಂತರನ್ನಾಗಿ ಮಾಡುತ್ತದೆ.